ಹೊಸ ವರ್ಷ ಅಂದಾಕ್ಷಣ ಸಾಮಾನ್ಯವಾಗಿ ನಾವು ಖರೀದಿಗೆ ಮುಗಿಬೀಳುತ್ತೇವೆ, ಅದರಲ್ಲೂ ಹೊಸ ಬಟ್ಟೆ, ವಾಹನ, ಮನೆ ಗೃಹ ಬಳಕೆಯ ವಸ್ತುಗಳು, ಅಲಂಕಾರಿಕ ವಸ್ತುಗಳು ಹೀಗೆ ಒಂದಾ ಎರಡಾ ಹಲವಾರು ರೀತಿಯಲ್ಲಿ ನಾವು ಶಾಪಿಂಗ್ ಮಾಡುತ್ತೇವೆ. ಇದರಲ್ಲಿ ಏನು ವಿಶೇಷ ಅಂತ ನಿಮಗೆ ಅನಿಸಬಹುದು ಆದರೆ ಈ ಹೊಸ ವರ್ಷ ಆರಂಭದ ಮುಂಚೆ ವಸ್ತುಗಳನ್ನು ಖರೀದಿ ಮಾಡುವ ಸಂಪ್ರದಾಯದಲ್ಲಿ ಸಹ ಮಹತ್ವವಿದೆ. ಆದರೆ ಈ ವಸ್ತುಗಳ ಖರೀದಿಯ ಹಿನ್ನೆಲೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಕೆಲವೊಂದು ವಸ್ತುಗಳನ್ನು ವರ್ಷದ ಆರಂಭದಲ್ಲಿ ಅಥವಾ ವರ್ಷದ ಪೂರ್ವದಲ್ಲಿ ನೀವು ಖರೀದಿಸುವ ವಸ್ತುಗಳು ನಿಮ್ಮ ಆ ವರ್ಷದ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಬಹುದಾಗಿದೆ.

ಹೌದು ವರ್ಷದ ಆರಂಭಕ್ಕೂ ಮುಂಚೆ ವರ್ಷದ ಪೂರ್ವದಲ್ಲಿ ಈ ನಾಲ್ಕು ವಸ್ತುಗಳನ್ನು ನೀವು ಖರೀದಿಸಿದರೆ ನಿಮಗೆ ಆ ವರ್ಷ ಶುಭಾರಂಭವಾಗಿರುತ್ತದೆ ಎಂದು ಹಿರಿಯರು ತಿಳಿಸಿದ್ದಾರೆ. ಹಾಗಾದರೆ ಆ ನಾಲ್ಕು ವಸ್ತುಗಳು ಯಾವ್ಯಾವು ಎಂದು ತಿಳಿಯೋಣ..
ಗಣಪತಿ ವಿಗ್ರಹ ಅಥವಾ ಗಣಪತಿ ದೇವರ ಫೋಟೋ ವನ್ನು ಹೊಸ ವರ್ಷದ ಆರಂಭಕ್ಕೂ ಮುನ್ನ ಖರೀದಿಸಿ ಮನೆಯಲ್ಲಿಟ್ಟು ವಿನಾಯಕ ಸ್ತೋತ್ರಗಳನ್ನು ಪಠಿಸಿದರೆ ಸಕಲ ಸಂಕಷ್ಟಗಳ ನಿವಾರಕನಾದ ಗಣಪತಿಯು ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಅದಕ್ಕಾಗಿಯೇ ಯಾವುದೇ ಶುಭಕಾರ್ಯಗಳಲ್ಲಿ, ಪೂಜೆಗಳಲ್ಲಿ ವಿಘ್ನಕಾರಕ ನಾದ ಗಣಪತಿ ದೇವರಿಗೆ ಪ್ರಥಮವಾಗಿ ಪೂಜಿ ಮಾಡುವುದು.

ತೆಂಗಿನಕಾಯಿ: ನಮ್ಮ ಹಿಂದೂ ಸಂಪ್ರದಾಯದ ಪ್ರಕಾರತೆಂಗಿನಕಾಯಿಯನ್ನು ಲಕ್ಷ್ಮಿಯ ಪ್ರತೀಕ, ಕಲ್ಪವೃಕ್ಷದ ಸಂಕೇತ ಎಂದು ಪರಿಗಣಿಸಿದ್ದೇವೆ. ಇಂತಹ ಪೂಜ್ಯ ಭಾವನೆ ಇಟ್ಟುಕೊಂಡಿರುವ ನಾವು ಶುಭಕಾರ್ಯಗಳನ್ನು ತೆಂಗಿನಕಾಯಿ ಒಡೆಯುವುದರ ಮೂಲಕ ಆರಂಭಿಸುತ್ತೇವೆ. ಹಾಗೆಯೇ ನೀವು ಹೊಸ ವರ್ಷ ಆರಂಭ ಮಾಡುವ ಮೊದಲು ಹಿಂದಿನ ತೆಂಗಿನಕಾಯಿಯನ್ನು ಖರೀದಿಸಿ ಲಕ್ಷ್ಮಿಯ ಪ್ರಾರ್ಥನೆ ಮಾಡಿ ದೇವರ ಕೋಣೆಯಲ್ಲಿಟ್ಟು ಪೂಜಿಸಿ, ಮರುದಿನ ಅಂದರೆ ಹೊಸ ವರ್ಷದ ದಿನ ಆ ತೆಂಗಿನ ಕಾಯಿಯನ್ನು ನಿಮ್ಮ ಮನೆಯ ಮುಂದೆ ಒಡೆದು ದಿನ ಆರಂಭಿಸುವುದರಿಂದ ನಿಮಗೆ ಆ ವರ್ಷ ಪೂರ್ತಿ ಲಕ್ಷ್ಮಿ ಕೃಪಾಕಟಾಕ್ಷ ನಿಮ್ಮ ಮೇಲಿರುತ್ತದೆ ಎಂದು ಹಿರಿಯರು ತಿಳಿಸುತ್ತಾರೆ.
ನವಿಲುಗಿರಿ: ಭಗವಂತನಾದ ಶ್ರೀ ಕೃಷ್ಣನ ತಲೆಯ ಮೇಲ್ಭಾಗದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಈ ನವಿಲುಗರಿಯು ರಕ್ಷಣೆಯ ಸಂಕೇತವಾಗಿದೆ. ಆಪತ್ತಿನ ಸಮಯದಲ್ಲಿ ನಿಮ್ಮನ್ನು ಪಾರು ಮಾಡುವ ಶಕ್ತಿ ಇದರಲ್ಲಿದೆ ಎಂಬ ನಂಬಿಕೆಯಿದೆ, ಆದ್ದರಿಂದ ಹೊಸ ವರ್ಷದ ಆರಂಭಕ್ಕೆ ಈ ನವಿಲುಗರಿಯನ್ನು ಖರೀದಿಸುವುದರಿಂದ ನಿಮ್ಮ ಸಂಕಷ್ಠ ಕಾಲದಲ್ಲಿ ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮನೇ ನಿಮ್ಮ ಸಹಾಯಕ್ಕೆ ಬರುವ ರೀತಿಯಲ್ಲಿ ಈ ನವಿಲುಗರಿಯು ನಿಮ್ಮ ರಕ್ಷಣೆಗೆ ನಿಲ್ಲುತ್ತದೆ ಎಂದು ಹೇಳುತ್ತಾರೆ.

ಈ ಮನೀಪ್ಲಾಂಟ್, ತುಳಸಿ ಗಿಡಗಳು, ಅಶೋಕ ಗಿಡ, ಶಮಿಯ ಗಿಡ ಇಂತಹ ಸಸ್ಯಗಳನ್ನು ಮನೆಯಲ್ಲಿಟ್ಟು ಬೆಳೆಸುವುದರಿಂದ ನಿಮ್ಮ ಮನೆಯ ಆರ್ಥಿಕ ಸಮಸ್ಯೆ ದೂರವಾಗಿ ಲಕ್ಷ್ಮಿಯ ಅನುಗ್ರಹ ಸದಾ ನಿಮ್ಮ ಮನೆಯಲ್ಲಿ ಇರುತ್ತದೆ. ಹೀಗೆ ನಿಮ್ಮ ಹೊಸ ವರ್ಷದ ಆರಂಭದ ದಿನಗಳನ್ನು ಈ ಮೇಲ್ಕಂಡ ನಾಲ್ಕು ವಸ್ತುಗಳನ್ನು ಖರೀದಿಸುವುದರಿಂದ ನಿಮ್ಮ ಮನೆಯಲ್ಲಿ ಅಷ್ಟ ಐಶ್ವರ್ಯ, ಆರೋಗ್ಯ ಸಂಪತ್ತು ವೃದ್ದಿಯಾಗಿ ಕುಟುಂಬದಲ್ಲಿ ಸುಖ ಸಂತೋಷ ನಿಮ್ಮದಾಗುತ್ತದೆ ಎಂದು ಹಿರಿಯರು ತಿಳಿಸುತ್ತಾರೆ.