ಮನೆಗೆ ಮಗು ಬರಮಾಡಿಕೊಂಡು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾದ ಸ್ಟಾರ್ ನಟಿ

ಬಾಲಿವುಡ್ ಸುಪ್ರಸಿದ್ದ ನಟಿ ಬಾಡಿಗೆ ತಾಯಿಯಾಗುವ ಮೂಲಕ ಮಾದರಿಯಾಗಿದ್ದಾರೆ, ಸಿನಿಮಾದ ತಾರೆಯರು ಸಾಮಾನ್ಯವಾಗಿ ಸಮಾಜದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎನ್ನಬಹುದು. ಏಕೆಂದರೆ ಸಿನಿಮಾದಲ್ಲಿ ಇವರ ಅಭಿನಯ ಕಂಡು ಲಕ್ಷಾಂತರ, ಕೋಟ್ಯಾಂತರ ಮಂದಿ ಇವರನ್ನ ಅನುಸರಿಸುತ್ತಾರೆ. ಹಾಗಾಗಿಯೇ ಸಿನಿಮಾ ತಾರೆಯರು ಒಳ್ಳೆಯದು ಮಾಡಲಿ ಕೆಟ್ಟದು ಮಾಡಲಿ ಬಹುಬೇಗ ಅದು ಅವರ ಅಭಿಮಾನಿಗಳ ಮೇಲೆ ಪ್ರಭಾವ ಬೀರುತ್ತದೆ. ಕೇವಲ ಸಿನಿಮಾದಲ್ಲಿ ಅವರು ಪಾತ್ರಕ್ಕಾಗಿ ಧರಿಸುವ ಉಡುಗೆ-ತೊಡುಗೆಗಳನ್ನೇ ಖರೀದಿ ಮಾಡುವ ಅವರ ಫ್ಯಾನ್ಸ್ ತಮ್ಮ ನೆಚ್ಚಿನ ನಟ-ನಟಿಯರ ವೈಯಕ್ತಿಕ ಬದುಕನ್ನು ಕೂಡ ಅಷ್ಟೇ ಪರಿಣಾಮಕಾರಿಯಾಗಿ ಫಾಲೋ ಮಾಡುತ್ತಾರೆ.

ಇದೀಗ ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರ ಆದರ್ಶ ನಡೆ ಎಲ್ಲೆಡೆ ಭಾರಿ ಸುದ್ದಿಯಾಗಿದೆ. ಹೌದು ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಈ ವಿಚಾರವನ್ನು ಸ್ವತಃ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಸ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೆಣ್ಣು ಮಗುವಿನ ತಾಯಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಈ ಬಗ್ಗೆ ಸಂತೋಷದಿಂದ ನಾನು ಇನ್ಮುಂದೆ ನನ್ನ ಕುಟುಂಬದ ಕಡೆ ಹೆಚ್ಚು ಗಮನ ಹರಿಸಬೇಕಾಗಿದೆ.

ನನ್ನ ಪರ್ಸನಲ್ ಟೈಮ್ ಅನ್ನು ಮುಂದಿನ ದಿನಗಳಲ್ಲಿ ನನ್ನ ಮಗುವಿಗೆ ಮೀಸಲಿಡುತ್ತೇನೆ ಎಂದು ಭಾವುಕು ನುಡಿಗಳನ್ನು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ನಟಿ ಪ್ರಿಯಾಂಕಾ ಚೋಪ್ರಾ ಅವರು ಮಾಡಿದ ಈ ಪೋಸ್ಟ್ ಗೆ ನಟಿ ಅನುಷ್ಕಾ ಶರ್ಮಾ ಅಭಿನಂದನೆ ತಿಳಿಸಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಅವರು 2018 ರಲ್ಲಿ ಅಮೇರಿಕಾದ ಪಾಪ್ ಸಿಂಗರ್ ಆಗಿರುವ ನಿಕ್ ಜಾನ್ಸ್ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದರು.

ಮದುವೆಯಾದ ಬಳಿಕ ಪ್ರಿಯಾಂಕಾ ಚೋಪ್ರಾ ಅಮೆರಿಕಾದಲ್ಲಿಯೇ ನೆಲೆಕಂಡುಕೊಂಡು ಐಷಾರಾಮಿ ರೆಸ್ಟೋರೆಂಟ್ ವೊಂದನ್ನ ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ ಇಂದಿಗೂ ಕೂಡ ಏಳೂವರೆ ಕೋಟಿಗೂ ಅಧಿಕ ಹಿಂಬಾಲಕರನ್ನ ಹೊಂದುವ ಮೂಲಕ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ಬಾಲಿವುಡ್ ಖ್ಯಾತ ನಟಿಯಾಗಿದ್ದಾರೆ. ಒಟ್ಟಾರೆಯಾಗಿ ಪ್ರಿಯಾಂಕಾ ಚೋಪ್ರಾ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.

%d bloggers like this: