ನಿಮ್ಮ ಮನೆಗೆ ಬರುವ ಅತಿಥಿಗಳಿಗೆ ನೀವು ಯಾವುದೇ ಕಾರಣಕ್ಕೂ ಈ ಒಂದು ವಸ್ತುವನ್ನು ಕೊಡಲೇಬಾರದು. ನೀವೇನಾದರೂ ಈ ವಸ್ತುವನ್ನು ಕೊಟ್ಟರೆ ನಿಮ್ಮ ಮನೆಗೆ ದಾರಿದ್ರ್ಯತನ ಉಂಟಾಗಿ ಹಣಕಾಸಿನ ಸಮಸ್ಯೆ ಹದಗೆಟ್ಟು ಸಂಕಷ್ಠ ಎದುರಿಸಬೇಕಾಗುತ್ತದೆ. ಹಾಗಾದರೆ ಯಾವ ವಸ್ತುವನ್ನು ನೀವು ಕೊಡಬಾರದು? ಹೌದು ಮನೆಯಲ್ಲಿರುವ ಕೊಬ್ಬರಿ ಎಣ್ಣೆಯನ್ನು ನೀವು ಯಾರಿಗೂ ಕೊಡಬಾರದು, ನೀವು ಬಳಸುವ ಕೊಬ್ಬರಿ ಎಣ್ಣೆಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡರೆ ನಿಮ್ಮ ಮನೆಯ ಲಕ್ಷ್ಮಿಯು ಪರರ ಮನೆಗೆ ದಾಪುಗಾಲು ಹಾಕಿಬಿಡುತ್ತಾಳೆ. ಆದ್ದರಿಂದ ಲಕ್ಷ್ಮಿಯ ಸ್ವರೂಪ ವಾಗಿರುವ ಕೊಬ್ಬರಿಯಿಂದ ತಯಾರಾದಂತಹ ಎಣ್ಣೆಯನ್ನು ಮತ್ತೊಬ್ಬರಿಗೆ ನೀಡಬಾರದು.

ಲಕ್ಷ್ಮಿಯು ನಿಮ್ಮ ಮನೆಯಲ್ಲಿ ಸ್ಥಿರವಾಗಿ ನಿಲ್ಲಬೇಕಾದರೆ ಆದಷ್ಟು ಲಕ್ಷ್ಮಿ ಪ್ರಧಾನ ವಸ್ತುಗಳನ್ನು ಶುಭ್ರತೆಯಿಂದ ಇಟ್ಟುಕೊಳ್ಳಬೇಕು. ಲಕ್ಷ್ಮಿಯ ಪ್ರಧಾನ ವಸ್ತುಗಳಾದ ಪೊರಕೆ, ಒಳಕಲ್ಲು ಮತ್ತು ಮನೆಯ ಮುಂಬಾಗಿಲಿನ ಹೊಸ್ತಿಲನ್ನು ಶುಚಿತ್ವ ದಿಂದ ನಿರ್ವಹಿಸಬೇಕು. ಕೆಲವು ಮನೆಯಲ್ಲಿ ಕಸ ಗೂಡಿಸಿದ ನಂತರ ಪೊರಕೆಯನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ ಇದರಿಂದ ಲಕ್ಷ್ಮಿಯನ್ನು ನಿರ್ಲಕ್ಷ್ಯ ಮಾಡಿದಂತಾಗುತ್ತದೆ. ಹಾಗೆ ಒಳಕಲ್ಲು ಕೂಡ ಲಕ್ಷ್ಮಿಯ ಪ್ರಧಾನ ಸ್ಥಳ ಎನ್ನಬಹುದು ಅದರ ಸುತ್ತಮುತ್ತಾ ಆದಷ್ಟು ಶುಭ್ರತೆಯಿಂದ ಇಟ್ಟುಕೊಳ್ಳಬೇಕು ಇನ್ನು ಹೊಸ್ತಿಲಿನ ಮೇಲೆ ಕೂತುಕೊಳ್ಳುವುದು, ಹೊಸ್ತಿಲ ಮೇಲೆ ನಿಲ್ಲುವಂತಹದನ್ನು ಮಾಡಬಾರದು.

ಇಂತಹ ಕೆಲಸಗಳು ಲಕ್ಷ್ಮಿಗೆ ಅಗೌರವ ತೋರಿಸಿದಂತಾಗುತ್ತದೆ ಲಕ್ಷ್ಮಿಯು ತನಗೆ ಗೌರವವಿಲ್ಲದ ಜಾಗದಲ್ಲಿ ಇರುವುದಿಲ್ಲ ಆದ್ದರಿಂದ ಮನೆಯಲ್ಲಿ ಶಿಸ್ತು, ಶುಭ್ರತೆಯನ್ನು ಕಾಪಾಡಿಕೊಂಡು ಹೋಗಬೇಕು. ಕೆಲವರು ಮಲಗುವ ಮಂಚದ ಮೇಲೆ ಹಣವನ್ನು, ಚಿನ್ನವನ್ನು ಇಡುತ್ತಾರೆ ಇದು ಕೂಡ ಲಕ್ಷ್ಮಿಗೆ ನೀಡುವ ಆಲಸ್ಯತನದ ಅಗೌರವ ಇಂತಹ ನಿರ್ಲಕ್ಷ್ಯತನ ಲಕ್ಷ್ಮಿಗೆ ಎಂದಿಗೂ ಪ್ರಿಯವಾಗುವುದಿಲ್ಲ ಆದ್ದರಿಂದ ನೀವು ಎಷ್ಟು ಲಕ್ಷ್ಮಿಗೆ ಗೌರವಾತಿಥ್ಯಗಳನ್ನು ನೀಡುತ್ತೀರೋ ಅಷ್ಟರ ಮಟ್ಟಿಗೆ ನೀವು ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತೀರಿ.