ಮನೆಯ ಎಲ್ಲಾ ಸಮಸ್ಯೆಗಳಿಗೆ ವೀಳ್ಯದೆಲೆ ಹಾಗು ಅರಿಶಿನದಿಂದ ಪರಿಹಾರ

ಅನಿರೀಕ್ಷಿತವಾಗಿ ಉಂಟಾಗುವ ಸಮಸ್ಯೆಗಳಿಗೆ ಮನೆಯಲ್ಲಿಯೇ ತಕ್ಷಣ ಪರಿಹಾರ ಮಾಡಿಕೊಳ್ಳ ಬಹುದಾಗಿದೆ. ಹೌದು ಈ ಒಂದು ವಸ್ತುವಿನೊಂದಿಗೆ ಮಾಡುವ ಪ್ರಯೋಗ ನಿಮ್ಮ ಎಂತಹ ಕಷ್ಟಗಳನ್ನು ಪರಿಹಾರ ಮಾಡುತ್ತದೆ. ಹಾಗಾದರೆ ಯಾವುದು ತಕ್ಷಣದ ಸಮಸ್ಯೆಗೆ ತಕ್ಷಣದ ಪರಿಹಾರ ವಸ್ತು ಅಂದರೆ ಅದು ವೀಳ್ಯದೆಲೆ, ಹೌದು ಮನೆಯಲ್ಲಿ ಆಕಸ್ಮಿಕವಾಗಿ ಕಾರಣಾತಂರಗಳಿಂದ ಮನೆಯ ಮಕ್ಕಳಲ್ಲಿ ಅನಾರೋಗ್ಯ, ಮನೆಯ ಯಜಮಾನ ವ್ಯಾಪಾರದಲ್ಲಿ ನಷ್ಟವಾಗಿ ಸಂಕಷ್ಟದ ಇಕ್ಕಟ್ಟಿನಲ್ಲಿ ಸಿಲುಕುವುದು, ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟು ತೊಂದರೆ ತಾಪತ್ರಯ ಹೀಗೆ ಇಂತಹ ಸಮಸ್ಯೆಗಳಿಂದ ಮನೆಯಲ್ಲಿ ಅಶಾಂತಿ, ಜೀವನದಲ್ಲಿ ಜಿಗುಪ್ಸೆ ಉಂಟಾಗುವು ಇಂತಹ ಸಮಸ್ಯೆಗಳಿಗೆ ಮನೆಯಲ್ಲಿಯೇ ಈ ವೀಳ್ಯದೆಲೆಯ ಪ್ರಯೋಗ ನಿಮ್ಮ ಜೀವನದ ಗತಿಯನ್ನು ಬದಲಾಯಿಸುತ್ತದೆ.

ಅದು ಹೇಗೆ ಎಂದರೆ ಒಂದು ವೀಳ್ಯದೆಲೆ ತೆಗೆದುಕೊಂಡು ಒಂದು ಅರಿಶಿನ ಕೊಂಬು, ರಕ್ತಚಂದನ ಯಾವುದಾದರೊಂದು ಅಥವಾ ಶ್ರಿಗಂಧದ ಕೊಂಬನ್ನು ತೆಗೆದುಕೊಂಡು ನೆಲವನ್ನು ಸ್ವಚ್ಛಗೊಳಿಸಿ ಆ ಅರಿಶಿನ ಕೊಂಬನ್ನು ತೇಯ್ದು ಗಂಧವನ್ನಾಗಿಸಿಕೊಂಡು ನೀವು ಉತ್ತರಾಭಿಮುಖವಾಗಿ ಅಥವಾ ಪೂರ್ವಾಭಿಮುಖವಾಗಿ ಮುಖಮಾಡಿ ಕುಳಿತುಕೊಂಡು ನಿಮ್ಮ ಉಂಗುರದ ಬೆರಳಿನಿಂದ ತೇಯ್ದ ಗಂಧವನ್ನು ತೆಗೆದು ವೀಳ್ಯದೆಲೆಯ ಹಿಂಭಾಗದಲ್ಲಿ ನರದಂತಿರುವ ಭಾಗಕ್ಕೆ ಲೇಪನ ಮಾಡಬೇಕು.

ನಂತರ ವೀಳ್ಯದ ಎಲೆಯ ಮುಂಭಾಗದಲ್ಲಿರಿಸಿ ನಿಮ್ಮ ಮನೆಯ ದೆವರನ್ನು ಸ್ಮರಿಸಿ ನಿಮ್ಮ ಸಮಸ್ಯೆಗಳನ್ನು ಭಗವಂತನನ್ನು ಸ್ಮರಿಸಿ ಅರಿವು ಮಾಡಿಕೊಂಡು ಮೂರು ಭಾರಿ ಪ್ರಾರ್ಥಿಸಿ ಧ್ಯಾನ ಮಾಡಬೇಕು. ನಂತರದಲ್ಲಿ ವೀಳ್ಯದೆಲೆಯ ಮುಂಭಾಗಕ್ಕೆ ತುಳಸಿಕಡ್ಡಿಯಿಂದ ಆ ಅರಿಶಿನ ಗಂಧವನ್ನು ಮಧ್ಯಭಾಗದಲ್ಲಿ ವೃತ್ತಾಕಾರ ರಚಿಸಿ ಆ ವೃತ್ತಾಕಾರದಲ್ಲಿ ಮೇಲೆ ಮತ್ತು ಕೆಳಗೆ ತ್ರಿಕೋನ ಆಕಾರ ರಚಿಸಿದಾಗ ಆರು ರೇಖೆಯ ನಕ್ಷತ್ರ ರಚಿತವಾಗುತ್ತದೆ. ಆ ರೇಖೆಯ ನಕ್ಷತ್ರಗಳಲ್ಲಿ ಓಂ ಶ್ರೀಂ ಓಂ ಎಂದು ಬೀಜಾಕ್ಷರ ಬರೆದು ಇವುಗಳ ಮೇಲೆ ಚಿಟಕಿಯಷ್ಟುವಕುಂಕುಮ ಹಾಕುತ್ತಾ ದೇವರನ್ನು ಪ್ರಾರ್ಥಿಸಬೇಕು.

ಪ್ರಾರ್ಥನೆಯ ನಂತರ ವೀಳ್ಯದೆಲೆಯ ಮೇಲ್ಭಾಗದ ತುದಿಯಿಂದ ಸುರಳಿಯಂತೆ ಸುತ್ತಿ ಅದನ್ನು ಒಂದು ಅರಿಶಿನ ದಾರದಿಂದ ಕಟ್ಟಿ ಅದನ್ನು ಉತ್ತರಾಭಿಮುಖ ಅಥವಾ ಪೂರ್ವಾಭಿಮುಖವಾಗಿ ಯಂತ್ರದ ರೂಪದಲ್ಲಿ ಹೆಬ್ಬೆರಳಿನ ಉಂಗುರ ಬೆರಳಿನ ಮಧ್ಯೆದಲ್ಲಿ ಇರಿಸಿ ಒಂದು ಹನಿ ಹಾಲನ್ನು ಹಾಕಿ ನಿಮ್ಮ ದೇವರ ಕೋಣೆ, ಮಲಗುವ ಕೋಣೆ ಬಾಗಿಲಿನ ದ್ವಾರ ಯಾವುದು ನಿಮಗೆ ರಹಸ್ಯ ಸ್ಥಳ ಎಂದು ಅನಿಸುತ್ತದೆಯೋ ಅಲ್ಲಿ ಇದನ್ನು ಇಡಬೇಕು. ಇದಾದ ಬಳಿಕ ಕೇವಲ 24 ಗಂಟೆಗಳಲ್ಲಿ ಒಂದಷ್ಟು ಬದಲಾವಣೆ ಆಗುತ್ತದೆ ಮತ್ತು ಕೇವಲ 9 ದಿನಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆತು ನಿಮ್ಮ ಜೀವನದಲ್ಲಿ ಹೊಸ ಚೈತನ್ಯ ಉತ್ಸಾಹ ಬರುತ್ತದೆ ಎಂದು ಮಹರ್ಷಿ ಆನಂದ ಗುರೂಜಿಯವರು ತಿಳಿಸಿದ್ದಾರೆ.

%d bloggers like this: