ಮನೆಯ ಗಿಡಗಳು ಚೆನ್ನಾಗಿ ಹೂವು ಬಿಡಬೇಕೆಂದರೆ ಚಹಾ ಕುಡಿದ ನಂತರ ಉಳಿಯುವ ಚಹಾಪುಡಿಯಿಂದ ಹೀಗೆ ಮಾಡಿ

ಕೆಲವರಿಗೆ ಮನೆಯಲ್ಲಿ ಈ ಕೈ ತೋಟ ಮಾಡುವುದಕ್ಕೆ ತಂಬಾ ಆಸಕ್ತಿ ಇರುತ್ತದೆ, ಅದಕ್ಕೆ ತಕ್ಕ ಹಾಗೆ ತಮ್ಮ ಮನೆಯ ಅಂಗಳದಲ್ಲಿ ಇರುವ ಖಾಲಿ ಜಾಗವನ್ನು ಅಥವಾ ಮಹಡಿ ಮೇಲಿರುವ ಒಂದಷ್ಟು ಸ್ಥಳವನ್ನು ಈ ಹೂವಿನ ಗಿಡ, ತರಕಾರಿ, ಬಳ್ಳಿಯ ಗಿಡಗಳನ್ನು ಬೆಳೆಸಲು ಇರುವ ಜಾಗವನ್ನು ಸದುಪಯೋಗ ಪಡಿಸಿಕೊಂಡು ಒಂದಷ್ಟು ಪಾಟುಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುತ್ತಾರೆ ಆದರೆ ಇವರ ಈ ಉತ್ಸಾಹ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿ ಬಿಡುತ್ತವೆ. ಕಾರಣ, ತಾವು ಹಾಕಿದ ಗಿಡ ನಿರೀಕ್ಷೆಯಂತೆ ಫಲ ಕೊಡದಿದ್ದಾಗ ತಿಂಗಳುಗಳು ಕಳೆದರೂ ಸಹ ಯಾವುದೇ ರೀತಿಯ ಬೆಳವಣಿಗೆ ಕಾಣದೇ ಇದ್ದಾಗ ಅದರ ಬಗ್ಗೆಯ ಕಾಳಜಿಯು ಸಹ ನಿಧಾನವಾಗಿ ಕಡಿಮೆ ಆಗುತ್ತದೆ.

ಇಂತಹ ಸಂಧರ್ಭದಲ್ಲಿ ನೀವು ನಿಮ್ಮ ಗಿಡಗಳು ಬೆಳೆಯುವುದಕ್ಕೆ ನಿಮ್ಮ ಹೂವಿನ ಗಿಡಗಳು ಸಮಯಕ್ಕೆ ಅವಧಿಗೆ ತಕ್ಕಂತೆ ಮೊಗ್ಗು, ಹೂ ಬಿಡಲು ನೀವು ನಿಮ್ಮ ಮನೆಯಲ್ಲಿಯಲ್ಲಿರುವ ಕಚ್ಚಾ ಪಧಾರ್ಥಗಳನ್ನು ಉಪಯೋಗಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ.

ನೀವು ಅಡುಗೆಗೆ ಬಳಸುವ ಇಂಗನ್ನು,ಬಳಸಿ ಬಿಸಾಡುವ ಚಹಾದ ಪುಡಿಯನ್ನು ಸದುಪಯೋಗ ಮಾಡಿಕೊಳ್ಳಬಹುದು, ಹೇಗೆಂದರೆ ಒಂದು ಲೀಟರ್ ನೀರಿಗೆ ಒಂದು ಚಿಟಿಕೆಯಷ್ಟು ಇಂಗು ಈ ಇಂಗನ್ನು ಅಧಿಕವಾಗಿ ಬಳಸಬಾರದು ಏಕೆಂದರೆ ಇದು ಅತ್ಯಂತ ಪರಿಣಾಮಕಾರಿ ಪಧಾರ್ಥ ವಾಗಿರುವುದರಿಂದ ಅಡ್ಡ ಪರಿಣಾಮ ಬೀರಬಹುದು. ಇಂಗಿನ ಜೊತೆಗೆ ಎರಡು ಚಮಚದಷ್ಟು ಬಳಸಿದ ಟೀ ಪುಡಿಯನ್ನು ಮಿಶ್ರಣಮಾಡಿ ಬಿಸಿಲಿನಲ್ಲಿ ಒಣಗಿಸಬೇಕು.

ಇವುಗಳು ಒಣಗಿದ ನಂತರ ಅದನ್ನು ರಾಸಾಯನಿಕ ಗೊಬ್ಬರದಂತೆ ನಿಮ್ಮ ಗಿಡಗಳ ಬುಡಕ್ಕೆ ದಿನಿನತ್ಯ ಸಿಂಪಡಿಸಬೇಕು, ಇದನ್ನು ನಿಮ್ಮ ನರ್ಸರಿಯಲ್ಲಿ ಅಥವಾ ನಿಮ್ಮ ಮನೆಯ ಅಂಗಳದಲ್ಲಿ ಬೆಳೆಸುತ್ತಿರುವ ಗಿಡಗಳಿಗೆ ಹಾಕಿ ಪೋಷಿಸುತ್ತಾ ಬಂದರೆ ಕೇವಲ ತಿಂಗಳ ಕಾಲಾವಧಿಯಲ್ಲಿ ನಿಮ್ಮ ಸಸ್ಯಗಳು ಸಮೃದ್ದಿಯಾಗಿ ಬೆಳೆದು ಉತ್ತಮವಾದ ಫಲಿತಾಂಶ ನೀಡುತ್ತವೆ.

%d bloggers like this: