ಮನೆಯ ನೆಮ್ಮದಿಗೆ ಶುಕ್ರವಾರ ಹೆಣ್ಣು ಮಕ್ಕಳು ಈ ರೀತಿ ಪೂಜೆ ಮಾಡಿ

ನಿಮ್ಮ ಮನೆಯಲ್ಲಿ ನಿರಂತರವಾಗಿ ಹಣದ ಸಮಸ್ಯೆ ಕಾಡುತ್ತಿದ್ದರೆ, ದುಡಿದ ಹಣ ನಿಮ್ಮ ಕೈಯಲ್ಲಿ ಉಳಿಯುತ್ತಿಲ್ಲವಾದರೆ ನಿಮಗೆ ಲಕ್ಷ್ಮಿಯ ಕೃಪಾಕಟಾಕ್ಷ ಸಂಪೂರ್ಣವಾಗಿ ಅನುಗ್ರಹ ವಾಗಿಲ್ಲ ಎಂದು ಅರಿಯಬೇಕು. ಹಾಗದರೆ ನಿಮ್ಮ ಮನೆಯ ಮಹಿಳೆಯರು ತಪ್ಪದೆ ಈ ನಿಯಮಗಳನ್ನು ಪಾಲಿಸಲೇಬೇಕು. ಮನೆಯ ಗೃಹಿಣಿಯರನ್ನು ಲಕ್ಷ್ಮಿಗೆ ಹೋಲಿಸುತ್ತಾರೆ, ಆದ್ದರಿಂದ ಲಕ್ಷ್ಮಿಯ ಪ್ರತಿರೂಪವಾಗಿರುವ ಹೆಣ್ಣುಮಕ್ಕಳಿಗೆ ಗೌರವ ಕೊಡಬೇಕು. ಮನೆಯ ಗೃಹಿಣಿಯರು ಸೂರ್ಯೋದಯಕ್ಕೆ ಮುಂಚೆ ಎದ್ದು, ಮನೆಯನ್ನು ಸ್ವಚ್ಚಗೊಳಿಸಿ, ಪೂಜಾಕಾರ್ಯಗಳನ್ನು ಆಚರಿಸಬೇಕು. ಇದರಿಂದ ಲಕ್ಷ್ಮಿಯು ನಿಮ್ಮ ಮನೆಗೆ ಆಗಮಿಸಲು ಇಷ್ಟ ಪಡುತ್ತಾಳೆ. ಮನೆಯಲ್ಲಿ ಶುಚಿತ್ವ, ಶ್ರದ್ದಾ ಭಕ್ತಿಯಿಂದ ನಂಬಿ, ಪೂಜಿಸುವ ಕಡೆ ಲಕ್ಷ್ಮಿ ವಾಸಮಾಡಲು ಇಚ್ಚಿಸುತ್ತಾಳೆ. ಆದ್ದರಿಂದ ನಿಮ್ಮ ಮನೆಯನ್ನು ಆದಷ್ಟು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು. ಇನ್ನು ಮನೆಯಲ್ಲಿ ಹೆಣ್ಣು ಮಕ್ಕಳು ಮುಸ್ಸಂಜೆಯ ಸಮಯದಲ್ಲಿ ಕಣ್ಣೀರಾಕಬಾರದು, ಅವರಿಗೆ ನೋವಾಗುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಬಾರದು. ಇನ್ನು ಸಂಜೆಯ ಸಮಯದಲ್ಲಿ ತುಳಸಿ ಪೂಜೆ ಮಾಡಿ ದೀಪ ಹಚ್ಚುವುದರಿಂದ ನಿಮ್ಮ ಮನದ ಕತ್ತಲು ದೂರವಾಗಿ ನಿಮ್ಮ ಎಲ್ಲಾ ಗೊಂದಲಗಳು ದೂರವಾಗುತ್ತವೆ.

ಇನ್ನು ಸಂಜೆಯ ವೇಳೆ ಮನೆಯಲ್ಲಿನ ಹಿಂಬಾಗಿಲನ್ನು ಮುಚ್ಚಿ, ಮುಂಭಾಗಲನ್ನು ತೆರೆದಿಡಬೇಕು ಇದರಿಂದ ಲಕ್ಷ್ಮಿ ಆಗಮನವಾಗಿ ಮನೆಯಲ್ಲಿ ನೆಲೆಸುತ್ತಾಳೆ. ಹೆಣ್ಣು ಮಕ್ಕಳು ಬೆಳಿಗ್ಗೆ ಹೆಚ್ಚು ಹೊತ್ತು ಮಲಗಬಾರದು, ಮನೆಯ ಇತರ ಸದಸ್ಯರಿಗಿಂತ ಮೊದಲು ಎದ್ದು, ಶ್ರದ್ದಾ ಭಕ್ತಿಯಿಂದ ನೇಮ, ನಿಯಮಗಳನ್ನು ಪಾಲಿಸುತ್ತಾ, ಪೂಜಾ ಕಾರ್ಯದಲ್ಲಿ ತೊಡಗಿಕೊಂಡರೆ ಆ ಮನೆಯು ಲಕ್ಷ್ಮಿ ಕೃಪೆ, ಅನುಗ್ರಹದಿಂದ ಕೂಡಿರುತ್ತದೆ. ಇನ್ನು ಮನೆಯ ಹೆಣ್ಣು ಮಕ್ಕಳು ತಲೆಕೂದಲನ್ನು ಬಿಟ್ಟು ಮನೆತುಂಬಾ ಓಡಾಡಬಾರದು, ಜೊತೆಗೆ ಓಡಾಡಿಕೊಂಡು ಕೂದಲನ್ನು ಬಾಚಬಾರದು. ಇನ್ನು ಪ್ರಮುಖವಾಗಿ ದೇವರಕೋಣೆಯಲ್ಲಿರುವ ದೇವರ ಫೋಟೋಗಳ ಮುಂದೆ ಅಕ್ಕಿಯನ್ನು ಇಟ್ಟು ಪೂಜಿಸಬೇಕು ಇದರಿಂದ ನಿಮ್ಮ ಮನೆಗೆ ಅಷ್ಟ ಐಶ್ವರ್ಯ ಲಭಿಸುತ್ತದೆ. ಲಕ್ಷ್ಮಿ ಮತ್ತು ನಾರಯಣ ಎರಡೂ ದೇವರನ್ನು ಒಟ್ಟಾಗಿ ಇಟ್ಟು ಪೂಜಿಸುವುದರಿಂದ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗಿ ನಿಮ್ಮ ಮನೆಗೆ ಶು‌ಭಫಲಗಳು ಲಭಿಸಿ ನಿಮಗೆ ಧನಪ್ರಾಪ್ತಿಯಾಗುತ್ತದೆ.

%d bloggers like this: