ಮನೆಯಲ್ಲಿ ಒಬ್ಬರು ಹೇಳಬೇಕು ಉಳಿದ ಮನೆಯ ಸದಸ್ಯರು ಕೇಳಬೇಕು, ಅಂದರೆ ಯಾವುದೇ ನಿರ್ಧಾರ, ಮನೆಯ ವ್ಯವಹಾರಗಳನ್ನು ಮನೆಯಲ್ಲಿರುವ ಯಾರಾದರು ಒಬ್ಬ ಸದಸ್ಯರು ಸಂಪೂರ್ಣ ಜವಬ್ದಾರಿ ತೆಗೆದುಕೊಂಡು ನಿರ್ವಹಿಸಬೇಕು. ಇದರಿಂದ ಯಾವುದೇ ರೀತಿಯ ಜಗಳ ಮನಸ್ತಾಪಗಳು ಮನೆಯಲ್ಲಿ ಏರ್ಪಡುವುದಿಲ್ಲ ಆದರೆ ಇದು ಹೊಂದಾಣಿಕೆಯ ಮನೋಭಾವದಿಂದ ಮಾತ್ರ ಸಾಧ್ಯವಾಗುತ್ತದೆ. ಈ ಹೊಂದಾಣಿಕೆಯ, ಸಮಾನ ಮನಸ್ಕ ಭಾವನೆ ಎಲ್ಲರ ಮನೆಯಲ್ಲಿಯೂ ಕಂಡು ಬರುವುದಿಲ್ಲ. ಒಬ್ಬರ ಮಾತನ್ನು ಇನ್ನೊಬ್ಬರು ಕೇಳುವ ಸಂಯಮವಾಗಲಿ, ತಾಳ್ಮೆ ಆಗಲಿ ಇರುವುದಿಲ್ಲ. ಎಲ್ಲರಿಗೂ ಅವರದೇ ಆದ ಸ್ವಯಂ ನಿರ್ಧಾರ ಆತ್ಮಾಭಿಮಾನ ದಿಂದಾಗಿ ವಾದ ಪ್ರತಿ ವಾದಗಳು ಹೆಚ್ಚಾಗುತ್ತವೆ.
ಇಂತಹ ಕೆಲವು ಗೊಂದಲ ಗಳಿಂದಾಗಿ ಆರ್ಥಿಕ ಸಮಸ್ಯೆಗಳು ಉದ್ಭವಿಸುತ್ತವೆ. ಒಬ್ಬರಿಗೆ ತಿಳಿಯದೆ ಮತ್ತೊಬ್ಬರು ಮಾಡಿದ ಆರ್ಥಿಕ ವ್ಯವಹಾರಗಳು ಕೆಲವೊಮ್ಮೆ ಆರ್ಥಿಕ ಸಂಕಷ್ಠಕ್ಕೆ ಸಿಲುಕಿಸುತ್ತವೆ, ಮಕ್ಕಳು ತದ್ವಿರುದ್ದವಾಗಿ ನಡೆದುಕೊಳ್ಳುತ್ತಾರೆ ಇದರಿಂದ ಮಾನಸಿಕವಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ, ಹಿರಿಯರಿಂದ ಬೇಡವಾದ ಮಾತು ಕೇಳಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳು ಬಹಳಷ್ಟು ಮನೆಗಳಲ್ಲಿ ಸಾಮಾನ್ಯವಾಗಿ ನಡೆಯುತ್ತವೆ. ಇಂತಹ ಸಮಸ್ಯೆಗೆ ಸರಳವಾಗಿ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ಈ ಅರಿಶಿನ ಮತ್ತುಅಕ್ಕಿಕಾಳುಗಳ ಯಂತ್ರದಿಂದ ನಿಮ್ಮ ಮನೆಯ ಸಮಸ್ಯೆಗಳು ನಿವಾರಣೆ ಆಗುತ್ತವೆ.
ಹಾಗದರೆ ಈ ಅರಿಶಿನ ಮತ್ತು ಅಕ್ಕಿಯ ಯಂತ್ರ ಮಾಡುವುದೇಗೆ ಎಂಬುದನ್ನು ತಿಳಿಯುವುದಾರೆ. ಎಂದಿನಂತೆ ಮಡಿಯಾಗಿ ಪೂಜಾ ವಿಧಿವಿಧಾನದ ರೀತಿಯಲ್ಲಿ ದೇವರಕೋಣೆಯ ಮುಂಭಾಗ ತಾಯಿ ಲಕ್ಷ್ಮಿಯನ್ನು ಪ್ರಾರ್ಥಿಸಿ ದೇವಿಯ ಬಲಭಾಗದಲ್ಲಿ ಕುಳಿತುಕೊಂಡು ಕೆಂಪು ವಸ್ತ್ರವನ್ನು ತೆಗೆದುಕೊಂಡು ಆ ವಸ್ತ್ರಕ್ಕೆ ಒಂದಷ್ಟು ಅರಿಶಿನ ಮತ್ತು ಹಿಡಿಯಷ್ಟು ಅಕ್ಕಿಯನ್ನು ಇಟ್ಟು, ಅರಿಶಿನ ದಾರ ಸುತ್ತಿ ಅದನ್ನು ಬುತ್ತಿಯ ರೂಪದಲ್ಲಿ ಕಟ್ಟಿ ಅರಿಶಿನ ಕುಂಕುಮ ಹಾಕಿ ಲಕ್ಷ್ಮಿಯನ್ನು ಪೂಜಿಸುವಂತೆ ಆ ಬುತ್ತಿಗೂ ಪೂಜೆ ಮಾಡಬೇಕು.
ಈ ಬುತ್ತಿ ಪೂಜೆಯು ನಾಲ್ಕು ಮಂಗಳವಾರ ಮತ್ತು ಮೂರು ಶುಕ್ರವಾರ ನಿರಂತರವಾಗಿ ಕಡ್ಡಾಯವಾಗಿ ಮಾಡಬೇಕು. ಪೂಜಿಸಿದ ನಂತರ ಆ ಬುತ್ತಿಯನ್ನು ದೇವರ ಫೋಟೋ ಹಿಂಭಾಗಕ್ಕೆ ಇಡಬೇಕು. ಈ ಬುತ್ತಿಯ ಪೂಜೆ ವಿಚಾರವನ್ನು ಯಾರಿಗೂ ತಿಳಿಸಬಾರದು, ರಹಸ್ಯವಾಗಿ ಈ ಪೂಜಾ ಕಾರ್ಯಗಳು ನಡೆಯಬೇಕು. ಏಳುವಾರಗಳ ಪೂಜೆಯ ನಂತರ ಈ ಬುತ್ತಿಯಲ್ಲಿರುವ ಅರಿಶಿನ ಮತ್ತು ಅಕ್ಕಿಯನ್ನು ಹಸಿರು ಗಿಡದ ಮೇಲೆ ವಿಸರ್ಜನೆ ಮಾಡಬೇಕು. ಈ ಬುತ್ತಿ ಪೂಜೆ ನಿಮ್ಮ ಜೀವನದಲ್ಲಿ ಉತ್ತಮ ಪ್ರತಿಫಲ ದೊರಕಿದ ನಂತರ ಇತರರಿಗೆ ತಿಳಿಸಬಹುದು. ಆದರೆ ಅಲ್ಲಿಯವರೆಗೆ ಯಾರ ಬಳಿಯೂ ಈ ಪೂಜೆಯ ವಿಚಾರವನ್ನು ಹಂಚಿಕೊಳ್ಳಬಾರದು.
ಈ ರೀತಿಯಲ್ಲಿ ನಿಮ್ಮ ಮನೆಯಲ್ಲಿ ಬುತ್ತಿಪೂಜೆ ಮಾಡಿದರೆ ನಿಮ್ಮ ಮನೆಯ ಸಕಲ ಸಂಕಷ್ಠ ದಾರಿದ್ರ್ಯ ದೂರವಾಗಿ ನಿಮ್ಮ ಮಾತಿಗೆ ಎಲ್ಲರು ಗೌರವ ಮನ್ನಣೆ ನೀಡುತ್ತಾರೆ. ಮಕ್ಕಳು ನಿಮ್ಮ ಮಾತಿಗೆ ಎದುರು ಮಾತನಾಡುವುದಿಲ್ಲ, ನಿಮ್ಮ ಆರ್ಥಿಕ ವ್ಯವಹಾರಗಳು ಯಾವುದೇ ಅಡ್ಡಿಆತಂಕವಿರದೆ ಸುಗಮವಾಗಿ ಸುಲಲಿತವಾಗಿ ನಡೆಯುತ್ತದೆ. ನಿಮ್ಮ ಮನೆಯಲ್ಲಿ ಶಾಂತಿ,ಸುಖ ಸಂತೋಷ ಪ್ರಾಪ್ತಿಯಾಗಿ ನಿಮ್ಮ ಜೀವನವು ಪ್ರಗತಿಯತ್ತ ಸಾಗುತ್ತದೆ ಎಂದು ನಮ್ಮ ಹಿಂದೂ ಸಂಪ್ರದಾಯದ ಜ್ಯೋತಿಷ್ಯ ಪಂಚಾಂಗಗಳಲ್ಲಿ ತಿಳಿಸಲಾಗಿದೆ.