ಮನೆಯಲ್ಲೇ ಕೂತು ಡಾಲಿಯನ್ನ ಬರಮಾಡಿಕೊಳ್ಳಿ, ಇದೇ ವಾರ ಬರುತ್ತಿದ್ದಾನೆ ಬಡವ ರಾಸ್ಕಲ್

ನಟನಾಗಬೇಕೆಂಬ ಆಸೆಯಿಂದ ಚಂದನವನಕ್ಕೆ ಕಾಲಿಟ್ಟು, ಯಶಸ್ಸಿಗಾಗಿ ಅನೇಕ ಏಳು ಬೀಳು, ಅವಮಾನ ಅನುಭವಿಸಿಕೊಂಡು ಇಂದು ತಮ್ಮ ಪ್ರತಿಭೆಯ ಮೂಲಕ ನಟ ರಾಕ್ಷಸನಾಗಿ ಸ್ಯಾಂಡಲ್ವುಡ್ ಬೇಡಿಕೆಯ ನಟನಾಗಿ ಮಿಂಚುತ್ತಿರುವ ನಟ ಧನಂಜಯ್. ಆರಂಭದಲ್ಲಿ ನಟಿಸಿದ ಬಹುತೇಕ ಚಿತ್ರಗಳು ಯಶಸ್ಸು ಕಾಲದೇ ಸೋಲುಂಡರೂ ಎದೆಗುಂದದೆ ಆತ್ಮವಿಶ್ವಾಸದಿಂದ ಮುನ್ನುಗ್ಗಿ ಇಂದು ತಮ್ಮ ಸಿನಿಪಯಣದಲ್ಲಿ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ನಾಯಕ ನಟರಾಗಿ ಸ್ಯಾಂಡಲ್ ವುಡ್ಗೆ ಎಂಟ್ರಿಕೊಟ್ಟ ಧನಂಜಯ್ ಅವರು ಇಲ್ಲಿಯವರೆಗೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರ ಸಿನಿ ಪಯಣದಲ್ಲಿ ಯುಟರ್ನ್ ಕೊಟ್ಟದ್ದು ಟಗರು ಸಿನಿಮಾ. 2021ರಲ್ಲಿ ಧನಂಜಯ್ ಅಭಿನಯದ ಯುವರತ್ನ, ಸಲಗ, ರತ್ನನ್ ಪ್ರಪಂಚ, ಬಡವ ರಾಸ್ಕಲ್ ಸಿನಿಮಾಗಳು ರಿಲೀಸ್ ಆಗಿದ್ದವು.

ಎಲ್ಲ ಸಿನಿಮಾಗಳು ಭರ್ಜರಿ ಹಿಟ್ ನೀಡಿವೆ. ಅದರಲ್ಲೂ ಬಡವ ರಾಸ್ಕಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಶ್ರೀಮಂತ ರಾಜಕಾರಣಿಯ ಮಗಳು ಸಂಗೀತ ಮತ್ತು ಮಧ್ಯಮ ವರ್ಗದ ಕುಟುಂಬದ ಶಂಕರ್ ನಡುವೆ ಪ್ರೀತಿ ಉಂಟಾಗಿ, ಹಲವು ತಿರುವುಗಳನ್ನು ಪಡೆದುಕೊಂಡು ಇವರಿಬ್ಬರು ಕೊನೆಗೆ ಒಂದಾಗುತ್ತಾರೆಯೇ ಎಂಬ ಪ್ರೇಮಕಥೆ ಜನರಿಂದ ಮೆಚ್ಚುಗೆ ಪಡೆದಿದೆ. ಕೋರೋಣ ಕಾರಣದಿಂದ ಅನೇಕ ಜನರಿಗೆ ಥಿಯೇಟರ್ಗಳಲ್ಲಿ ಹೋಗಿ ಸಿನಿಮಾ ನೋಡದೇ ಇರುವ ಕಾರಣ ಇದೀಗ ಪ್ರತಿಯೊಬ್ಬರ ಮನೆ ಬಾಗಿಲಿಗೆ ಈ ಚಿತ್ರವನ್ನು ತರುತ್ತಿದ್ದೇವೆ ಎಂದು ಚಿತ್ರತಂಡ ಹೇಳಿದೆ. ಹೌದು ಜನವರಿ 26ರಂದು ವೂಟ್ ಸೆಲೆಕ್ಟ್ ಒಟಿಟಿ ಯಲ್ಲಿ ಬಡವ ರಾಸ್ಕಲ್ ಚಿತ್ರ ಬಿಡುಗಡೆಯಾಗುತ್ತಿದೆ.

ಈ ಚಿತ್ರವು ಐಎಮ್ಡಿಬಿ ನಲ್ಲಿ 9.4 ರೇಟಿಂಗ್ ಹೊಂದಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಬಗ್ಗೆ ಮಾತನಾಡಿರುವ ನಟ ಧನಂಜಯ್ ಈ ಚಿತ್ರ ನನಗೆ ಎರಡು ಕಾರಣಗಳಿಂದ ಬಹಳ ಹತ್ತಿರವೆನಿಸುತ್ತದೆ. ಒಂದು ಚಿತ್ರತಂಡ ಮತ್ತು ಇನ್ನೊಂದು ಚಿತ್ರದ ಕಥೆ. ಒಬ್ಬ ಸಾಮಾನ್ಯ ಮನುಷ್ಯ ತನ್ನ ಕನಸುಗಳನ್ನು ಹೇಗೆ ಬೆಳ್ಳಟ್ಟಿ ಯಶಸ್ವಿಯಾಗುತ್ತಾನೆ. ಜೊತೆಗೆ ಪ್ರೀತಿಯನ್ನು ಬಿಟ್ಟುಕೊಡದೇ ಹೇಗೆಲ್ಲ ಕಷ್ಟ ಪಡುತ್ತಾನೆ ಎಂದು ಬಡತನದ ಸೂಕ್ಷ್ಮತೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಹೀಗಾಗಿ ಈ ಚಿತ್ರ ನನಗೆ ಹತ್ತಿರವೆನಿಸುತ್ತದೆ ಎಂದು ನಟ ಧನಂಜಯ ಹೇಳಿದ್ದಾರೆ. ಈ ಚಿತ್ರ ಜನೆವರಿ 26 ತಂದು ವೂಟ್ ನಲ್ಲಿ ಬಿಡುಗಡೆಯಗುತ್ತಿದ್ದು, ಎಲ್ಲರೂ ಚಿತ್ರವನ್ನು ವೀಕ್ಷಿಸಿ ಎಂದು ಹೇಳಿದ್ದಾರೆ.

%d bloggers like this: