ಮನೆಯಲ್ಲಿ ದೀಪ ಹಚ್ಚಿದ ಮೇಲೆ ಈ ಕೆಲಸಗಳನ್ನು ಮಾಡಬೇಡಿ

ನಿಮಗೆ ಅರಿವಿಲ್ಲದೆ ಮಾಡುವ ಕೆಲವೊಂದು ಕೆಲಸ ಕಾರ್ಯಗಳು ನಿಮ್ಮ ಜೀವನದ ದಿಕ್ಕನ್ನು ಬದಲಾಯಿಸಿ ಬಿಡುತ್ತವೆ.ಮನೆಯಲ್ಲಿ ಶುಚಿತ್ವ ಕಾಪಾಡುವುದು ಮೊದಲ ಪ್ರಾಶಸ್ಯ ಹಾಗೇ ಮನೆಯ ಗೃಹಿಣೆಯರು ಪ್ರತಿದಿನ ಚಾಚೂತಪ್ಪದೆ ಪಾಲಿಸಬೇಕಾದ ನಿಯಮಗಳಿವೆ. ಕೆಲವು ಮನೆಗಳಲ್ಲಿ ಮಹಿಳೆಯರು ಯಾವಾಗಂದರೆ ಅವಾಗ ಕಸ ಗೂಡಿಸುವ ಪರಿಪಾಠ ಬೆಳೆಸಿಕೊಂಡಿರುತ್ತಾರೆ. ನಿಮಗೆ ಗೊತ್ತಿರಲಿ ಸಂಧ್ಯಾಕಾಲದಲ್ಲಿ ಕಸಗುಡಿಸಿ ಹೊರ ಹಾಕುವುದಿರಿಂದ ಮನೆಯ ದಾರಿದ್ರ್ಯತನಕ್ಕೆ ಆಹ್ವಾನಕೊಟ್ಟಂತೆ. ಸೂರ್ಯಾಸ್ತಮಾನ ಆದನಂತರ ಸಂಪ್ರದಾಯದ ಪ್ರಕಾರ ದೇವರ ಮನೆಯಲ್ಲಿ ದೀಪ ಹಚ್ಚುತ್ತಾರೆ ದೀಪ ಹಚ್ಚಿದ ಮೇಲೆ ಯಾವುದೇ ಕಾರಣಕ್ಕೂ ಮತ್ತೆ ಕಸಗುಡಿಸುವ ಕೆಲಸ ಮಾಡಬೇಡಿ ಏಕೆಂದರೆ ಇದರಿಂದ ಮನೆಗಳಲ್ಲಿ ಅಶಾಂತಿ ಏರ್ಪಟ್ಟು ಸದಾ ಜಗಳ, ಮುನಿಸು, ಕಲಹಕ್ಕೆ ದಾರಿಯಾಗುತ್ತದೆ.

ಧರ್ಮಶಾಸ್ತ್ರ ನಿಯಮದ ಪ್ರಕಾರ ಮನೆಯಲ್ಲಿ ಕಸಗುಡಿಸಬೇಕಾದರೆ ಅದರಲ್ಲೂ ಕಸವನ್ನು ಹೊರ ಹಾಕಬಾರದು. ನೀವೇನಾದರೂ ದೇವರಿಗೆ ದೀಪ ಹಚ್ಚಿದ ಮೇಲೆ ಸ್ವಚ್ಚತೆಯಾಗಿಡಲು ಕಸಗೂಡಿಸಿ ಹೊರಚೆಲ್ಲುವುದು ನಿಮಗೆ ಅರಿವಿಲ್ಲದೆಯೇ ನೀವು ಮಾಡಬಹುದು. ಇದರಿಂದಾಗಿ ರಾಹುಕೇತು ಮನೆಯ ಪ್ರವೇಶವಾಗುತ್ತದೆ ಇವುಗಳು ಮನೆ ಸೇರಿದರೆ ಮನೆಯಲ್ಲಿ ಆರೋಗ್ಯದಲ್ಲಿ, ಆರ್ಥಿಕ ವಿಚಾರದಲ್ಲಿ ಏರುಪೇರಾಗಿ ಕಲಹಗಳು ಉಂಟಾಗುತ್ತವೆ. ನಿಯಂತ್ರಣವಿಲ್ಲದ ಮಾತು, ವಾದ ಪ್ರತಿ-ವಾದ ಉದ್ಬವಿಸಿ ಹಬ್ಬಹರಿದಿನ ಗಳೆನ್ನದೆ ಸದಾ ಜಂಜಾಟದ ಬದುಕು ನಿಮ್ಮ ಪಾಲಿಗೆ ನರಕವಾಗಿಬಿಡುತ್ತದೆ. ಆದ್ದರಿಂದ ನಮ್ಮ ಧರ್ಮಶಾಸ್ತ್ರದ ಕೆಲವು ಸಂಪ್ರದಾಯ ನಿಯಮಗಳನ್ನು ಅರಿತು ಅನುಸರಿಸುವುದು ಹೆಣ್ಣುಮಕ್ಕಳಿಗೆ ಅನಿವಾರ್ಯ ಮತ್ತು ಅವಶ್ಯಕ ಎಂದು ಹಿರಿಯರು ಸಲಹೆ ಸೂಚನೆ ತಿಳಿಸುತ್ತಾರೆ.

%d bloggers like this: