ಮದುವೆಮಾಡಿ ನೋಡು, ಮನೆ ಕಟ್ಟಿನೋಡು ಎಂಬ ಹಿರಿಯರ ಮಾತಿನಂತೆ ಮದುವೆಯನ್ನು ಹೇಗೋ ಮಾಡಬಹುದು ಆದರೆಈ ಮನೆ ಕಟ್ಟುವುದು ಅಷ್ಟು ಸುಲಭವಲ್ಲ ಕಟ್ಟಿದರು ಸಹ ಆ ಮನೆಯಲ್ಲಿ ನಮಗೆ ಶುಭ ವಾಗುವುದಿಲ್ಲ. ಕೆಲವರಿಗೆತಾವು ಪ್ರೀತಿಯಿಂದ ಕಟ್ಟಿದ ಮನೆಯಿಂದಾನೆ ಹಣಕಾಸಿನ ದಾರಿದ್ರ್ಯತನ ಬಂದುಬಿಡುತ್ತದೆ. ಹೊಸ ಮನೆ ಕಟ್ಟಿಸಿದ ಎಷ್ಟೋ ವ್ಯಕ್ತಿಗಳಿಗೆ ಮೊದಲು ಕಾಡುವ ಸಮಸ್ಯೆ ಎಂದರೆ ಅದು ಈ ವಾಸ್ತುದೋಷ. ಕೆಲವರಿಗೆ ಈ ವಾಸ್ತುಶಾಸ್ತ್ರದಲ್ಲಿ ನಂಬಿಕೆ ಇರುವುದಿಲ್ಲ. ತಮ್ಮ ಇಚ್ಚೆಗೆ ತಕ್ಕಂತೆ ಮನೆಯನ್ನು ಕಟ್ಟಿಸಿಕೊಂಡಿರುತ್ತಾರೆ ಆದರೆ ಮನೆ ಕಟ್ಟಿ ಗೃಹಪ್ರವೇಶವಾದ ತಿಂಗಳಿಗೆ ಏಕಾಏಕಿಯಾಗಿ ಸಮಸ್ಯೆಗಳು ಉದ್ಭವಿಸುತ್ತವೆ, ಮಕ್ಕಳು ಹೇಳಿದ ಮಾತನ್ನು ಕೇಳದೇ ಎದುರು ನಿಂತು ನಿರ್ಭಯವಾಗಿ ಉತ್ತರ ನೀಡುತ್ತಾರೆ. ವಿಧ್ಯಾಭ್ಯಾಸದಲ್ಲಿ ಮಕ್ಕಳು ಮಂಕಾಗಿ ಬಿಡುತ್ತಾರೆ.

ವಾಸ್ತು ದೋಷದಿಂದಾಗಿ ಕೆಲವರು ಆರ್ಥಿಕವಾಗಿ ನಷ್ಟವೊಂದಿ ಹೇಳಲಾಗದ ದುಃಸ್ಥಿತಿ ತಲುಪಿ ಬಿಡುತ್ತಾರೆ, ಹೀಗೆ ಅನೇಕ ಸಮಸ್ಯೆಗಳು ಉದ್ಬವಿಸಿ ಕಟ್ಟಿದ ಮನೆಯನ್ನ ಮಾರುವ ಹಂತಕ್ಕೆ ಬಂದು ಬಿಡುತ್ತಾರೆ. ಇಷ್ಟಕ್ಕೆಲ್ಲಾ ಮೂಲ ಸಮಸ್ಯೆಯಾಗಿ ಕಾಡುವುದು ಅದೇ ವಾಸ್ತು ಹಾಗಾದರೆ ಇವರು ಕಟ್ಟಿರುವ ಮನೆಯಲ್ಲಿ ವಾಸ್ತುವಿನಲ್ಲಿ ಎಲ್ಲಿ ತಪ್ಪಾಗಿದೆ ಯಾವ ತಪ್ಪು ವಾಸ್ತು ಇವರನ್ನು ಕಾಡುತ್ತಿದೆ ಎಂದು ನೀವು ತಿಳಿದುಕೊಳ್ಳಬೇಕು.
ಮನೆಯನ್ನು ಕಟ್ಟುವುದು ದೊಡ್ಡವಿಷಯವಲ್ಲ, ಆದರೆ ಅದನ್ನು ವಾಸ್ತುಬದ್ದವಾಗಿ ನಿಮ್ಮ ಜಾತಕರಾಶಿ ಅನುಗುಣ ವಾಗಿ ಹೊಂದಾಣಿಕೆ ಇದೆಯೋ ಇಲ್ಲವೋ ಎಂಬ ಹಲವು ವಿಚಾರ ಸಂಗತಿಗಳನ್ನು ಅರಿತು ಮನೆ ನಿರ್ಮಾಣ ಮಾಡಬೇಕು. ಮನೆಯಲ್ಲಿ ಮುಖ್ಯವಾಗಿ ಪ್ರಧಾನ ಪಾತ್ರವಹಿಸುವುದು ದೇವರ ಕೋಣೆ. ಈ ದೇವರ ಕೋಣೆಯನ್ನು ಮನೆಯ ಯಾವ ಭಾಗದಲ್ಲಿ ನಿರ್ಮಾಣ ಮಾಡಿದ್ದಾರೆ ಅದರ ಆಧಾರದ ಮೇಲೆ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಮೇಲೆ ದೇವರ ಅನುಗ್ರಹ ಮತ್ತು ದೈವಬಲ ಪ್ರಾಪ್ತವಾಗುತ್ತದೆ. ಹಾಗಾದದೆ ಈ ದೇವರಕೋಣೆಯನನ್ನು ಮನೆಯ ಯಾವ ಭಾಗದಲ್ಲಿ ನಿರ್ಮಿಸಬೇಕು.

ಸಾಮಾನ್ಯವಾಗಿ ಮನೆಯನನ್ನು ಕಟ್ಟುವಾಗ ಮಾಲೀಕರು ತಮ್ಮ ಮನೆಯ ವಿನ್ಯಾಸ, ರಚನೆಯನ್ನು ಇಂಜಿನಿಯರರ ಬಳಿ ಚರ್ಚಿಸಿ ಮನೆ ಕಟ್ಟುತ್ತಾರೆ. ಆದರೆ ಇವರು ಮಾಡುವ ದೊಡ್ಡ ತಪ್ಪು ಅಂದರೆ ದೇವರ ಕೋಣೆಯನ್ನು ಯಾವ ಸ್ಥಾನದಲ್ಲಿ ಕಟ್ಟಿಸಬೇಕು ಎಂಬುದನ್ನು ಅರಿಯದೇ ಈಶಾನ್ಯ ಭಾಗದಲ್ಲಿ ದೇವರ ಕೋಣೆಯನ್ನು ನಿರ್ಮಿಸುತ್ತಾರೆ ಇದು ಮನೆಯಲ್ಲಿ ಸಮಸ್ಯೆಗಳು ಉಂಟಾಗುವುದಕ್ಕೆ ಪ್ರಮುಖ ಕಾರಣವಾಗಿದೆ. ಏಕೆಂದರೆ ಈಶಾನ್ಯ ವಲಯವು ಜಲತತ್ವ ವಾಗಿರುವುದರಿಂದ ಈ ವಲಯದಲ್ಲಿ ದೇವರನ್ನು ಸ್ಥಾಪಿಸಿ ದೀಪ, ಆರತಿ, ಕರ್ಪೂರ ಬೆಳಗಿ ಪೂಜೆ, ಪುನಸ್ಕಾರ ಮಾಡಿದರೆ ಯಾವುದೇ ಕಾರಣಕ್ಕೂ ನಿಮಗೆ ದೈವಬಲ ಪ್ರಾಪ್ತಿಯಾಗುವುದಿಲ್ಲ.

ಹೊಸ ಮನೆಯಲ್ಲಿ ನಿಮಗೆ ದೈವಬಲ ಲಭಿಸದಿರಲು ನೀವು ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸಿರುವ ದೇವರ ಕೋಣೆ, ಈಶಾನ್ಯ ದಿಕ್ಕು ಜಲತತ್ವ ಅಗಿರುವುದರಿಂದ ನೀವು ದೇವರಿಗೆ ದೀಪ, ಆರತಿ ಬೆಳಗಿದರು ಕೂಡ ಅದು ದೇವರಿಗೆ ಅರ್ಪಿತವಾಗುವುದಿಲ್ಲ ಈ ಜಲತತ್ವದ ಈಶಾನ್ಯ ನಮ್ಮ ಪೂಜೆ ಪುನಸ್ಕಾರಕ್ಕೆ ದಕ್ಕೆ ತರುತ್ತದೆ. ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ. ಹಾಗಾದರೆ ಈ ದೇವರ ಕೋಣೆಯನ್ನುಮನೆಯಲ್ಲಿ ಯಾವ ದಿಕ್ಕಿನಲ್ಲಿನಿರ್ಮಿಸಬೇಕು ಎಂದು ತಿಳಿಯುವುದಾದರೆ, ದೇವರ ಕೋಣೆಯನ್ನು ಆದಷ್ಟು ಮನೆಯ ಪಶ್ಚಿಮದಿಕ್ಕಿನಿಂದ ಉತ್ತರ ದಿಕ್ಕಿನ ನಡುವೆ ಎಲ್ಲಿ ಬೇಕಾದರು ನಿರ್ಮಿಸಬಹುದು, ಆದರೆ ಪುರುಷ ದೇವರಾದರೆ ಉತ್ತರ ಮತ್ತು ದಕ್ಷಿಣ ಮಧ್ಯಭಾಗದಲ್ಲಿದ್ದು ಆ ದೇವರ ಮುಖ ಪೂರ್ವ ದಿಕ್ಕಿನ ಕಡೆಗೆ ದೃಷ್ಠಿಯಿರಬೇಕು ಮತ್ತು ಸ್ತ್ರೀ ದೇವತೆಗಳಾದರೆ ಪಶ್ಚಿಮ ದಿಕ್ಕಿನ ಕಡೆಗೆ ಮುಖ ಮಾಡಿರಬೇಕು ಎಂದು ವಾಸ್ತುತಜ್ಞರು ತಿಳಿಸುತ್ತಾರೆ.