ಮನೆಯಲ್ಲಿ ಈ ಗಿಡಗಳನ್ನು ಬೆಳೆಸಬೇಡಿ ಮನೆಗೆ ದರಿದ್ರ ಅಂಟಿಕೊಳ್ಳುತ್ತದೆ

ಸಾಮಾನ್ಯವಾಗಿ ನಾವು ಮನೆಯ ಆವರಣದಲ್ಲಿ ಗಿಡಮರಗಳನ್ನು ಬಳಸುವುದು ವಾಡಿಕೆ ಅಥವಾ ಅದೊಂಥರ ಪ್ರಕೃತಿಯನ್ನು ಆರಾಧಿಸುವ ವ್ಯಕ್ತಿತ್ವ ಇರುವವರು ತಮ್ಮ ಮನೆಯ ಆವರಣದಲ್ಲಿ ಸ್ವಲ್ಪವೇ ಸ್ವಲ್ಪ ಜಾಗವಿದ್ದರು ಅದನ್ನು ಅಚ್ಚುಕಟ್ಟಾಗಿ ಮಾಡಿ ಅಲ್ಲಿ ಗಿಡ ಮರಗಳನ್ನು ಬೆಳೆಸುತ್ತಾರೆ. ಕೆಲವರು ಪೂಜೆ ಪುನಸ್ಕಾರಕ್ಕಾಗಿ ದೈವಾಂಶ ಗಿಡ ಎಂದು ಪೂಜಿಸುವ ತುಳಸಿ ಗಿಡವನ್ನು ಮನೆಯಲ್ಲಿ ಪಾಟ್ ಮೂಲಕ ಬೆಳೆಸುತ್ತಾರೆ. ಇನ್ನು ಕೆಲವರು ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಮನೆಗಳಲ್ಲಿ ಮನಿಪ್ಲಾಂಟ್ ಗಿಡಗಳನ್ನು ಬೆಳೆಸುತ್ತಾರೆ.

ಆದರೆ ಕೆಲವರಿಗೆ ಮನೆಗಳಲ್ಲಿ ಯಾವ ಗಿಡಗಳನ್ನು ಬೆಳೆಸಬೇಕು ಎಂಬುದರ ಅರಿವಿನ ಕೊರತೆ ಕಾಡುತ್ತದೆ. ಕೆಲವು ಜನರಿಗೆ ಮಾತ್ರ ಗೊತ್ತು ಯಾವ ಗಿಡಗಳನ್ನು ಬೆಳೆಸಬಾರದು ಎಂದು, ವಾಸ್ತುಶಾಸ್ತ್ರದ, ವಿಜ್ಞಾನದ ಪ್ರಕಾರ ಜೀವಂತಿಕೆಯಿರುವ ಗಿಡಗಳನ್ನು ಬೆಳೆಸುವುದರಿಂದ ನಕರಾತ್ಮಕ ಶಕ್ತಿಯು ನಿಮ್ಮನ್ನು ಕಾಡುತ್ತದೆ. ಮನೆಗಳಲ್ಲಿ ಪೂರ್ವ ಮತ್ತು ಉತ್ತರ ದಿಕ್ಕಿನ ಕಡೆಯಿರುವ ಗೋಡೆಗಳಿಗೆ ತಾಕುವಂತೆ ಯಾವುದೇ ರೀತಿಯ ಗಿಡಗಳನ್ನು ಇಡಬಾರದು ಇದು ವಾಸ್ತು ದೋಷ ಉಂಟಾಗಲು ಕಾರಣವಾಗುತ್ತದೆ.

ಇನ್ನು ಹುಣಸೆ ಮರಗಳು ಇರುವ ಜಾಗದಲ್ಲಿ ಮನೆ, ಕಟ್ಟಡಗಳನ್ನು ನಿರ್ಮಿಸಬಾರದು. ಇದು ವಾಸಮಾಡುವುದಕ್ಕೆ ಯೋಗ್ಯವಲ್ಲದ್ದಾಗಿದೆ. ಇನ್ನು ಮನೆಯ ಮುಂಭಾಗದಲ್ಲಿ ಜಾಗವಿದೆ ಎಂದು ಬೇಡವಾದ ಗಿಡಗಳನ್ನು ಅದರ ಪರಿಣಾಮವನ್ನು ಅರಿಯದೆ ಗಿಡಗಳನ್ನು ಬೆಳೆಸಬಾರದು. ಇನ್ನು ನುಗ್ಗೆ ಗಿಡ ಮರಗಳನ್ನು ಮನೆಯ ಪೂರ್ವದಿಕ್ಕಿನಲ್ಲಿ ಬೆಳೆಸುವುದರಿಂದ ನಿಮಗೆ ದುರಾದೃಷ್ಟ ಉಂಟಾಗುತ್ತದೆ.

ಇದರ ಜೊತೆಗೆ ಹತ್ತಿಯ ಗಿಡ ರೇಷ್ಮೆ ಗಿಡ, ಜೊತೆಗೆ ತಾಳೆ ಗಿಡವನ್ನು ಮನೆಯಂಗಳದಲ್ಲಿ ಬೆಳೆಸಬಾರದು. ಇವುಗಳನ್ನು ಬೆಳೆಸುವುದು ಮಂಗಳಕರವಲ್ಲ ಎಂದು ಹೇಳಲಾಗುತ್ತದೆ. ಆದ್ದರಿಂದ ಗಿಡಗಳ ಮಹತ್ವ ಅರಿಯದೇ ಸಿಕ್ಕ ಸಿಕ್ಕ ಗಿಡಗಳನ್ನು ಬೆಳೆಸುವುದು ಉಪಯುಕ್ತವಲ್ಲ. ಅದು ಚಿಕ್ಕದಾಗಿರಲಿ ದೊಡ್ಡದಾಗಿರಲಿ ಮುಳ್ಳಿರುವ ಗಿಡ, ಅಂಟಿರುವ, ಹಾಲು ಬರುವ ಯಾವುದೇ ಗಿಡಗಳನ್ನು ಮನೆಯ ಸುತ್ತ ಬೆಳೆಸಬಾರದು ಎನ್ನಲಾಗಿದೆ.

%d bloggers like this: