ಈ ಒಂದು ವಸ್ತು ನಿಮ್ಮ ಮನೆಯನ್ನು ಸಮೃದ್ದಿಯಾಗಿಸಿ ನಿಮ್ಮ ಸಂಪತ್ತನ್ನು ಅಭಿವೃದ್ದಿಯಾಗಿಸುತ್ತದೆ, ಹೌದು ನಿಮ್ಮ ಅಡುಗೆ ಮನೆಯಲ್ಲಿ ಈ ಒಂದು ವಸ್ತು ಇಟ್ಟರೆ ಖಂಡಿತ ನಿಮ್ಮ ಮನೆಯು ಅಕ್ಷಯ ಪಾತ್ರೆಯಾಗುವುದರಲ್ಲಿ ಅನುಮಾನವಿಲ್ಲ. ಹಾಗಾದರೆ ನೀವು ಮಾಡಬೇಕಾದ್ದು ಇಷ್ಟೇ ಒಂದು ಶ್ವೇತ ವಸ್ತ್ರದ ಬಟ್ಟೆ ಅಂದರೆ ಶುಭ್ರವಾದ ಬಿಳಿ ಬಣ್ಣದ ಬಟ್ಟೆಯಲ್ಲಿ ಹನ್ನೊಂದು ರೂಪಾಯಿ ನಾಣ್ಯದ ಜೊತೆಗೆ ನೂರೆಂಟು ಲವಂಗದ ಕಾಳುಗಳು ಮತ್ತು ಸ್ವಲ್ಪ ಚಂದನ, ಗೋರೋಚನ ಈ ಪಧಾರ್ಥಗಳನೆಲ್ಲಾ ಸೇರಿಸಿ ಆ ಬಟ್ಟೆಯಲ್ಲಿ ಇರಿಸಿ ಕಟ್ಟಬೇಕು. ತದನಂತರ ಈ ಕಟ್ಟಿದ ಬತ್ತಿಯ ಬಟ್ಟೆಯನ್ನು ನಿಮ್ಮಮನೆಯ ದೇವರ ಪೂಜೆ ಮಾಡಿ ಸತ್ಕರಿಸಿ ಈ ಗಂಟನ್ನು ನೀವು ಅಡುಗೆ ಕೋಣೆಯಲ್ಲಿ ಅಕ್ಕಿ, ಬೇಳೆ ಇಡುವಂತಹ ಜಾಗದಲ್ಲಿ ಗೌಪ್ಯವಾಗಿ ಇಡುವಂತದ್ದು ಇದನ್ನು ಒಮ್ಮೆ ಪೂಜಿಸಿ ನಮಸ್ಕರಿಸಿ ಇಟ್ಟರೆ ಸಾಕು ಪದೆ ಪದೇ ಇಡುವ ಅವಶ್ಯಕತೆ ಇರುವುದಿಲ್ಲ.

ಈ ಪಧಾರ್ಥಗಳ ಬುತ್ತಿಯ ಗಂಟು ನಿಮ್ಮ ಮನೆಯನ್ನು ಅಕ್ಷಯ ಪಾತ್ರೆಯಂತೆ ಸಮೃದ್ದಿಯತ್ತ ಸಾಗಿಸುತ್ತದೆ. ಈ ಅಕ್ಷಯ ಪಾತ್ರೆ ಹಿನ್ನೆಲೆ ಮಹಾಭಾರತ ಕಾಲದಿಂದಲ್ಲೂ ವಿಶೇಷ ಮಹತ್ವ ಪಡೆದಿದೆ. ಅಕ್ಷಯ ಪಾತ್ರೆ ಅಂದರೆ ಸಮೃದ್ದಿಯ ಪ್ರತೀಕ ನೀವು ಏನೇ ಇಟ್ಟರೂ, ಬಯಸಿದರೂ ಅದು ಸಮೃದ್ದಿಯಾಗುವಂತದ್ದು ಎಂಬ ನಂಬಿಕೆ. ಹಿಂದೆ ಮಹಾಭಾರತದ ಪಾಂಡವರು ಅಜ್ಞಾತ ವಾಸದಲ್ಲಿದ್ದಾಗ ಅವರಿಗೆ ಹಸಿವು ಬೆಂಬಿಡದೇ ಕಾಡುವ ಸಮಯದಲ್ಲಿ ಶ್ರೀ ಕೃಷ್ಣನನ್ನು ನೆನೆದು ಬೇಡಿಕೊಳ್ಳುತ್ತಾರೆ.



ಆ ಸಮಯದಲ್ಲಿ ಶ್ರೀ ಕೃಷ್ಣ ಕೊಡುವ ವರವೇ ಈ ಅಕ್ಷಯಪಾತ್ರೆ ಇದು ಅವರ ಇಚ್ಛೆ, ಬಯಕೆ ಅವಶ್ಯಕತೆಗಳನ್ನು ಪೂರೈಸಿ ಅವರು ಅದರಲ್ಲಿ ಇಟ್ಟಂತಹ ಎಲ್ಲವೂ ಸಮೃದ್ದಿಯಾಗುತ್ತಿತ್ತು ಎಂಬ ಮಹಾಭಾರತದ ಹಿನ್ನೆಲೆ ಹೊಂದಿದೆ ಈ ಅಕ್ಷಯ ಪಾತ್ರೆ. ಆದ್ದರಿಂದ ನೀವು ಈ ರೀತಿಯಾಗಿ ನಿಮ್ಮ ಮನೆಯಲ್ಲಿ ಪ್ರಯತ್ನಿಸಿ ನಿಮ್ಮ ಮೇಲೆ ಲಕ್ಷ್ಮಿಯ ಜೊತೆಗೆ ಅನ್ನಪೂರ್ಣೇಶ್ವರಿ ಅನುಗ್ರಹವಾಗಿ ನಿಮ್ಮ ಮನೆಯು ಸಕಲ ಸಂಪತ್ತುಗಳಿಂದ ತುಂಬಿ ತುಳುಕುತ್ತದೆ. ನಿತ್ಯ ಸಾವಿರಾರು ಜನರಿಗೆ ಅನ್ನದಾಸೋಹ ಮಾಡುವಂತಹ ಸಾಮರ್ಥ್ಯ ನಿಮ್ಮದಾಗುತ್ತದೆ ಎಂದು ಹಿರಿಯ ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.