ಮನೆಯಲ್ಲಿ ಇರುವೆಗಳ ಕಾಟ ಇದೆಯಾ, ಹೀಗೆ ಮಾಡಿ

ಸಾಮಾನ್ಯವಾಗಿ ಸಕ್ಕರೆ ಇದ್ದ ಕಡೆ ಇರುವೆ ಸೇರುವುದು ಸಹಜ, ಹಾಗೇ ಅಡುಗೆ ಮನೆಯಲ್ಲಿ ಸಿಹಿ ಪಧಾರ್ಥಗಳ ಸ್ಥಳದಲ್ಲಿ ಇರುವೆಗಳು ಹೆಚ್ಚು ಮುತ್ತುತ್ತವೆ. ಹಾಗೇ ಈ ಸಿಹಿತಿಂಡಿ, ಪಾನೀಯಗಳಂತಹ ಸಿಹಿಯಾದ ರಸವನ್ನು ಎಲೆಂದರಲ್ಲಿ ಚೆಲ್ಲುವುದರಿಂದ ಇರುವೆಗಳು ಸರಣಿರೂಪದಲ್ಲಿ ನಾವು ಕಾಣಬಹುದು. ಇದೇನೋ ದೊಡ್ಡ ವಿಷಯವಲ್ಲ ಆದರೆ ಮನೆಯಲ್ಲಿ ಅದರಲ್ಲೂ ಅಡುಗೆಮನೆಯಲ್ಲಿ ಇರುವೆಗಳು ಹರಿದಾಡುವುದು ಹೆಚ್ಚು ಜನರಿಗೆ ಕಿರಿಕಿರಿ ಉಂಟುಮಾಡುತ್ತದೆ. ಅದಕ್ಕಾಗಿ ಅಂಗಡಿ, ಮಾರುಕಟ್ಟೆಗಳಲ್ಲಿ ಸಿಗುವಂತಹ ಔಷಧಿಗಳನ್ನು ಸಿಂಪಡಿಸುವುದು ಸಾಮಾನ್ಯ ಆದರೂ ಕೂಡ ಅವುಗಳ ನಿಯಂತ್ರಣ ಕಷ್ಟ ಸಾಧ್ಯ. ಇಂತಹ ಸಮಸ್ಯೆಗಳಿಗೆ ಮನೆಯಲ್ಲಿಯೇ ಮಾಡಬಹುದಾದಂತಹ ಒಂದಷ್ಟು ಪರಿಹಾರಗಳಿವೆ.

ಉದಾಹರಣೆಗೆ ಮನೆಯ ಮೂಲೆಗಳ ಭಾಗದಲ್ಲಿ ಅಲ್ಲಲ್ಲಿ ಅರಿಶಿನಪುಡಿಯನ್ನು ಇಡುವುದರಿಂದ ಇರುವೆಗಳ ಓಡಾಟಕ್ಕೆ ಬ್ರೇಕ್ ಹಾಕಬಹುದು, ಕೆಲವೊಮ್ಮೆ ಇರುವೆಗಳು ಗೂಡನ್ನು ಕಟ್ಟಿದಾಗ ಅದರ ಮುಕ್ತ ಪ್ರದೇಶದಂತಿರುವ ಓಪನ್ ಸ್ಪೇಸ್ ಗೆ ಡಾಲ್ಚಿನ್ನಿ ಎಣ್ಣೆ, ಚಕ್ಕೆ ಪುಡಿಯನ್ನು ಹಾಕಿ ಮುಚ್ಚಿದರೆ ಇರುವೆಗಳ ನಿಯಂತ್ರಣ ಮಾಡಬಹುದು. ಇದೇ ರೀತಿ ಇರುವೆಗಳ ನಿಯಂತ್ರಣಕ್ಕಾಗಿ ಪುದೀನಾ ಎಲೆಯನ್ನ ಬಿಸಿನೀರಿನಲ್ಲಿ ಕುದಿಸಿ ಆನೀರನ್ನು ಇರುವೆ ಗೂಡಿಗೆ ಹಾಕಬಹುದು ಇದರಿಂದಾಗಿ ಇರುವೆಗಳಿಂದಾಗುವ ಕಿರಿಕಿರಿಯಂತಹ ಸಮಸ್ಯೆಗಳಿಗೆ ಮನೆಯಲ್ಲಿಯೇ ಪರಿಣಾಮಕಾರಿಯಾಗಿ ರಾಮಭಾಣವಾಗಿಸಬಹುದು.

%d bloggers like this: