ಮನೆಯಲ್ಲಿ ಅಶಾಂತಿ, ಆರ್ಥಿಕ ಸಮಸ್ಯೆ ಇದ್ದರೆ ದೇವರ ಕೊನೆಯಲ್ಲಿ ಇದನ್ನು ಇಡಿ

ನೀವು ಮನೆಯಲ್ಲಿ ಪ್ರತಿನಿತ್ಯ ಪೂಜೆ, ಪುನಸ್ಕಾರಗಳನ್ನು ಮಾಡುತ್ತೀರಿ, ಅದಲ್ಲದೆ ಮನೆಯ ಮಹಿಳೆಯರು ಸೋಮವಾರ, ಶುಕ್ರವಾರ ವಾರ ಒಪ್ಪತ್ತು ಎಂದು ಪೂಜೆ ಪುನಸ್ಕಾರ ಮಾಡುತ್ತಾರೆ. ಮನೆಯ ಒಳಿತಿಗಾಗಿ ಮನೆಯ ಯಜಮಾನನಿಗೆ ಒಳಿತಾಗಲಿ ಎಂದು ಆದರೆ ನೀವು ಎಷ್ಟೇ ದುಡಿದರೂ ಸಹ ನಿಮ್ಮ ಕೈಯಲ್ಲಿ ಹಣ ಉಳಿತಾಯ ಆಗುತ್ತಿಲ್ಲ ಏನಾದರೊಂದು ಸಮಸ್ಯೆಗಳು ಎದುರಾಗಿ ಆರ್ಥಿಕ ಪರಿಸ್ಥಿತಿ ಡೋಲಾಯಮಾನ ಸ್ಥಿತಿ ತಲುಪಿದಂತಾಗುತ್ತದೆ. ಆರ್ಥಿಕ ಪರಿಸ್ಥಿತಿ ಹದೆಗೆಟ್ಟು ಸದಾ ಮನೆಯಲ್ಲಿ ಜಗಳ, ಕಲಹ, ಮನಸ್ತಾಪಗಳು ಉಂಟಾಗುತ್ತವೆ. ಮನೆಯ ನೆಮ್ಮದಿಯ ವಾತಾವರಣ ಹಾಳಾಗಿದ್ದಿದ್ದರೆ ನೀವು ಈ ಎರಡು ವಸ್ತುವನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟು ಪ್ರಯತ್ನಿಸಿ ನಿಮ್ಮ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ.

ಆ ವಸ್ತುಗಳು ಅಕ್ಕಿ ಮತ್ತು ಅರಿಶಿನ ಕೊಂಬು ಹೌದು ತಾಮ್ರದ ಅಥವಾ ಬೆಳ್ಳಿಯ ಒಂದು ಪುಟ್ಟ ಚೆಂಬಿನಲ್ಲಿ ಮೂರು ಲೋಟದಷ್ಟು ಅಕ್ಕಿಯನ್ನು ತುಂಬಿ ಅದರ ಮೇಲೆ ಒಂದು ಅರಿಶಿನ ಕೊಂಬನ್ನು ಇಟ್ಟು ಪ್ರತಿನಿತ್ಯ ಪೂಜಿಸುತ್ತಾ ಬನ್ನಿ ನಿಮ್ಮೆಲ್ಲಾ ದಾರಿದ್ರ್ಯತನ ದೂರವಾಗಿ ಮನೆಯಲ್ಲಿ ಲಕ್ಷ್ಮಿಯು ಸ್ಥಿರವಾಗಿ ನಿಂತು ಮನೆಯ ಎಲ್ಲಾ ಸಂಕಷ್ಠಗಳು ನಿವಾರಣೆಯಾಗುತ್ತವೆ. ಅಂದಹಾಗೆ ಅಕ್ಕಿಯು ಸಾಕ್ಷಾತ್ ಅನ್ನಪೂರ್ಣೆಶ್ವರಿಯ ಸ್ವರೂಪ ವಾಗಿರುವುದರಿಂದ ಆ ಅನ್ನಪೂರ್ಣೇಶ್ವರಿಯ ಸಂಪೂರ್ಣ ಅನುಗ್ರಹ ನಿಮ್ಮ ಮೇಲಿದ್ದು ತಿನ್ನುವ ಅನ್ನಕ್ಕೆ ಯಾವತ್ತೂ ದಾರಾದ್ರ್ಯ ಬರದೇ ಆ ಮನೆಯು ಸಮೃದ್ದಿಯಾಗಿ ಬೆಳೆಯುತ್ತದೆ.

ಅಂದಹಾಗೆ ಈ ಅರಿಶಿನ ಕೊಂಬು ಮಹಾಲಕ್ಷ್ಮಿಯ ಪ್ರಿಯವಾದ ವಸ್ತು ಆದ್ದರಿಂದ ಅಕ್ಕಿ ಮತ್ತು ಅರಿಶಿನ ಕೊಂಬನ್ನು ದಿನನಿತ್ಯ ಪೂಜಿಸುವುದರಿಂದ ನೀವು ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ ನಿಮ್ಮ ಮನೆಯಲ್ಲಿ ಮಹಿಲಕ್ಷ್ಮಿಯು ಸ್ಥಿರವಾಗಿ ನಿಂತು ನಿಮ್ಮ ಎಲ್ಲಾ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ತದನಂತರ ಈ ಅಕ್ಕಿ ಮತ್ತು ಅರಿಶಿನ ಕೊಂಬನ್ನು ಸೋಮವಿರ ಅಥವಾ ಮಂಗಳವಾರದಂದು ತೆಗೆದು ಅರಳೀಮರದ ಬುಡಕ್ಕೆ ಇಟ್ಟಿ ಬರಬೇಕು ಇದೇ ರೀತಿ ತಪ್ಪದೇ ಎರಡು ಮೂರು. ವಾರಗಳ ಕಾಲ ಮಾಡುತ್ತಾ ಬಂದರೆ ನಿಮ್ಮ ಎಲ್ಲಾ ದೋಷ ಪರಿಹಾರವಾಗಿ ಮಕ್ಕಳ ವಿಧ್ಯಾಭ್ಯಾಸ ಪ್ರಗತಿಯತ್ತ ಸಾಗಿ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರೆವೇರುತ್ತವೆ.

%d bloggers like this: