ಮನೆಯಲ್ಲಿ ಕನ್ನಡಿ ಹಾಗು ಗಡಿಯಾರವನ್ನು ಈ ದಿಕ್ಕಿನಲ್ಲಿ ಇಡಬೇಕು ಇಲ್ಲದಿದ್ದರೆ ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ

ಮನೆಯಲ್ಲಿ ಒಡೆದ ವಸ್ತುಗಳಿಂದಾಗುವ ಅಪಾಯ ಅಷ್ಟಿಷ್ಟಲ್ಲ ಯಾವುದೇ ಕಾರಣಕ್ಕೂ ನೀವು ಒಡೆದಿರುವ ಕನ್ನಡಿ ಅಥವಾ ಗಡಿಯಾರವನ್ನು ಮನೆಯಲ್ಲಿ ಇಡಕೂಡದು. ಇದರಿಂದ ಆರ್ಥಿಕ ನಷ್ಟ,ಮನೆಯಲ್ಲಿ ಅಶಾಂತಿ, ಅನಾರೋಗ್ಯ ಹೀಗೆ ಸಾಲು ಸಾಲುಗಳು ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಹೌದು ನೀವು ಧನಹೀನರಾಗಿ ಬದಲಾಗುವುದಕ್ಕೆ ಮುಖ್ಯಕಾರಣ ಮನೆಯಲ್ಲಿರುವ ಗಡಿಯಾರ ಮತ್ತು ಕನ್ನಡಿಯನ್ನು ನಿಯೋಜನೆ ಮಾಡುವುದರಲ್ಲಿ ತಪ್ಪು ಮಾಹಿತಿ ಹೊಂದಿರುವುದಾಗಿದೆ. ನೀವು ನಿಮ್ಮ ಮನೆಯ ಗಡಿಯಾರವನ್ನು ಯಾವ ಜಾಗದಲ್ಲಿ ಇಟ್ಟರೆ ಒಳಿತು, ಕೆಡಕು ಎಂಬುದನ್ನು ತಿಳಿಯುವುದಾದರೆ ಮನೆಯಲ್ಲಿ ಗಡಿಯಾರವು ಉತ್ತರ ಮತ್ತು ಪೂರ್ವದ ದಿಕ್ಕಿನ ನಡುವೆ ಇರಬೇಕು.

ಇದರಿಂದ ಮನೆಯ ನಕರಾತ್ಮಕತೆ ತೊಲಗಿ ಸಕರಾತ್ಮಕ ವಾತವರಣ ಏರ್ಪಡುತ್ತದೆ. ಗಡಿಯಾರದ ಸಮಯ ಯಾವಾಗಲೂ ಐದು ಹತ್ತು ನಿಮಿಷ ವೇಗ ವಾಗಿರಬೇಕು. ನೀವು ಏನಾದರು ಗಡಿಯಾರದ ಸಮಯವನ್ನು ತಡವಾಗಿ ನಿಲ್ಲಿಸಿದ್ದರೆ ನಿಮ್ಮ ಇಡೀ ದಿನದ ಅಥವಾ ಜೀವನದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಇದರ ಜೊತೆಗೆ ಗಡಿಯಾರದ ಗಾಜುಗಳು ಬಣ್ಣದಿಂದ ಕೂಡಿರಬಾರದು ಮತ್ತು ಗಡಿಯಾರದ ಗಾಜು ಒಡೆದಿರಬಾರದು ಹಾಗೇನಿದ್ದರು ಒಡೆದಿದ್ದರೆ, ಮನೆಯಲ್ಲಿ ಇಲ್ಲಸಲ್ಲದ ಸಮಸ್ಯೆಗಳು ಕಾಡಲಾರಂಭಿಸುತ್ತವೆ.

ಇನ್ನು ಗಡಿಯಾರ ಮತ್ತು ಕನ್ನಡಿಯನ್ನು ಬಾತ್ ರೂಮ್ ಬಾಗಿಲ ಹಿಂಬದಿಯಲ್ಲಿ ನೇತಾಕಬಾರದು, ಕನ್ನಡಿಯನ್ನು ಉತ್ತರ ಅಥವಾ ಈಶಾನ್ಯ ಭಾಗದಲ್ಲಿ ಇಡಬೇಕು ಇದರಿಂದ ನಿಮಗೆ ಸಾಮಾಜಿಕ ವಲಯದಲ್ಲಿ ಸಿಗಬೇಕಾದ ಸ್ಥಾನ ಮಾನ, ಮನ್ನಣೆ ದೊರೆಯುವಂತಾಗುತ್ತದೆ. ನಿಮ್ಮ ಮನೆಯ ಗಡಿಯಾರ ಮತ್ತು ಕನ್ನಡಿ ಅಲ್ಯುಮಿನಿಯಂ ಲೋಹದಿಂದ ಕೂಡಿದ್ದರೆ ಪಶ್ಚಿಮ ವಲಯದಲ್ಲಿ ಮತ್ತು ವಾಯುವ್ಯ ವಲಯದಲ್ಲಿ ಇರಿಸಿದರೆ ಉತ್ತಮವಾಗಿರುತ್ತದೆ.

%d bloggers like this: