ಮನೆಯಲ್ಲೇ ಕುಳಿತು ನೋಡಿ 777 ಚಾರ್ಲಿ ಚಿತ್ರ,‌ ಈ ದಿನ ಓಟಿಟಿ ಅಲ್ಲಿ ಬಿಡುಗಡೆ

ಕಳೆದ ತಿಂಗಳು ದೇಶಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿ ಯಶಸ್ಸು ಪಡೆದು, ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಇದೀಗ ಇಪ್ಪತ್ತೈದು ದಿನಗಳನ್ನ ಪೂರೈಸಿದೆ. ಇದರ ಹಿನ್ನೆಲೆಯಲ್ಲಿ ಚಿತ್ರತಂಡ ತಮ್ಮ ಸಕ್ಸಸ್ ಹಂಚಿಕೊಳ್ಳಲು ಇತ್ತೀಚೆಗೆ ಪ್ರೆಸ್ ಮೀಟ್ ಕೂಡ ಆಯೋಜನೆ ಮಾಡಿತ್ತು. ಈ ಪ್ರೆಸ್ ಮೀಟ್ ನಲ್ಲಿ ರಕ್ಷಿತ್ ಶೆಟ್ಟಿ ಅವರು 777 ಚಾರ್ಲಿ ಸಿನಿಮಾ ಎಲ್ಲಾ ಕಡೆ ಉತ್ತಮ ಮೆಚ್ಚುಗೆ ಪಡೆದುಕೊಂಡಿದೆ. ಒಟ್ಟಾರೆಯಾಗಿ 777 ಚಾರ್ಲಿ ಸಿನಿಮಾ ದೇಶಾದ್ಯಂತ 150 ಕೋಟಿ ಕಲೆಕ್ಷನ್ ಮಾಡಿದೆ ಎಂದು ತಿಳಿಸಿದರು. ಅದರ ಜೊತೆಗೆ ಲಾಭಾಂಶದಲ್ಲಿ ಶೇಕಡಾ 10 ರಷ್ಟನ್ನು ತಮ್ಮ ಚಿತ್ರತಂಡದ ಎಲ್ಲರೊಟ್ಟಿಗೆ ಹಂಚಿಕೊಳ್ಳುವ ನಿರ್ಣಯವನ್ನ ತಿಳಿಸಿದ್ರು. ಇದರ ಜೊತೆಗೆ 777 ಚಾರ್ಲಿ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ಗೆ ಬರುವ ಸೂಚನೆ ಕೂಡ ತಿಳಿಸಿದ್ರು.

ಅದರಂತೆ ಕಿರಣ್ ರಾಜ್ ಸಾರಥ್ಯದಲ್ಲಿ ಮೂಡಿಬಂದ ಈ 777 ಚಾರ್ಲಿ ಚಿತ್ರ ಇದೇ ಜುಲೈ 29ರಂದು ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಹೌದು 777 ಚಾರ್ಲಿ ಸಿನಿಮಾ ವೂಟ್ ಸೆಲೆಕ್ಟ್2 ಓಟಿಟಿಗೆ ಮಾರಾಟವಾಗಿದ್ದು, 29 ರಂದು ಸ್ಟ್ರೀಮಿಂಗ್ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಇದರ ನಡುವೆ ರಕ್ಷಿತ್ ಶೆಟ್ಟಿ ಅವರು ಒಂದು ಪೋಸ್ಟ್ ಹಂಚಿಕೊಂಡಿದ್ರು. ಅದೇನಪ್ಪ ಅಂದ್ರೆ ಐಎಂಡಿಬಿ ರೇಟಿಂಗ್ಸ್ ನಲ್ಲಿ ಚಾರ್ಲಿ ಸಿನಿಮಾ 66ನೇ ಸ್ಥಾನವನ್ನು ಪಡೆದುಕೊಂಡಿತ್ತು. ರಾಜಮೌಳಿ ಅವರ ಆರ್.ಆರ್.ಆರ್ ಸಿನಿಮಾ 169ನೇ ಸ್ಥಾನವನ್ನು ಪಡೆದಕೊಂಡಿತ್ತು. ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಚಿತ್ರ ವಿಶ್ವದ ಅತ್ಯುತ್ತಮ ಚಿತ್ರ ಎಂಬ ಪಟ್ಟಿಯಲ್ಲಿ 66ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಹೊಸದೊಂದು ದಾಖಲೆಯನ್ನ ಮಾಡಿತ್ತು 777 ಚಾರ್ಲಿ ಸಿನಿಮಾ.

777 ಚಾರ್ಲಿ 9.2 ಅಂಕ ಪಡೆದು ಜಗತ್ತಿನ ಅತ್ಯುತ್ತಮ ಚಿತ್ರ ಎಂಬ ಪಟ್ಟಿ ಯಲ್ಲಿ 66ನೇ ಸ್ಥಾನ ಪಡೆದಿರೋದು ಕನ್ನಡಿಗರಾದ ನಮಗೆ ನಿಜಕ್ಕೂ ಕೂಡ ಹೆಮ್ಮೆಯ ವಿಚಾರ ಅನ್ಬೋದು. ಅವನೇ ಶ್ರೀ ಮನ್ನಾರಾಯಣ ಚಿತ್ರದ ನಂತರ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ ರಕ್ಷಿತ್ ಶೆಟ್ಟಿ 777 ಚಾರ್ಲಿ ಚಿತ್ರದ ಮೂಲಕ ಗೆಲುವಿನ ನಗೆ ಬೀರಿದ್ದಾರೆ. 777 ಚಾರ್ಲಿ ಚಿತ್ರ ನೋಡಿದ ಪ್ರತಿಯೊಬ್ಬ ಸಿನಿ ಪ್ರೇಕ್ಷಕರು ಭಾವುಕತೆಯಿಂದ ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಥಿಯೇಟರ್ ನಲ್ಲಿ 777 ಚಾರ್ಲಿ ಚಿತ್ರ ನೋಡಿ ಖುಷಿಯಾಗಿದ್ದ ಸಿನಿ ಪ್ರೇಕ್ಷಕರು ಮತ್ತೊಮ್ಮೆ ತಮ್ಮ ಮನೆಯಲ್ಲಿ ಕುಟುಂಬ ಸಮೇತ ನೋಡಬಹುದಾಗಿದೆ. ಒಟ್ಟಾರೆಯಾಗಿ 777 ಚಾರ್ಲಿ ಸಿನಿಮಾ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರ ಹೊಮ್ಮಿ ಯಶಸ್ಸು ಕಂಡಿದೆ.

%d bloggers like this: