ಮನೆಯಲ್ಲಿ ನೆಮ್ಮದಿ ನೆಲೆಸಬೇಕೆಂದರೆ ಈ ಫೋಟೋಗಳನ್ನು ಇಡಬೇಕು

ನಿಮ್ಮ ಮನೆಯಲ್ಲಿರುವ ಭಾವಚಿತ್ರಗಳು ನಿಮ್ಮ ಸೌಭಾಗ್ಯವನ್ನು ಬದಲಿಸುತ್ತದೆ ಹಾಗಾಗಿ ಯಾವ ಚಿತ್ರವನ್ನು ನಿಮ್ಮ ಮನೆಯಲ್ಲಿ ಇಟ್ಟರೆ ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ನಿಮ್ಮ ಮನೆಯಲ್ಲಿರುವ ಭಾವಚಿತ್ರಗಳು ನಿಮ್ಮ ದಿನವನ್ನು ಆರಂಭಿಸುತ್ತವೆ ಅಂದಮೇಲೆ ಆ ಭಾವಚಿತ್ರಗಳು ದಿನದ ಒಳಿತು-ಕೆಡುಕುಗಳ ಮೇಲೆ ಪ್ರಭಾವ ಬೀರುತ್ತದೆ. ಹಾಗಾದರೆ ಯಾವ ಭಾವಚಿತ್ರಗಳ ದೃಷ್ಟಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಉಪಯುಕ್ತವಾಗಿದೆ. ಮನೆಗಳಲ್ಲಿ ಕುಟುಂಬ ಸಮೇತ ಶ್ರೀರಾಮನು ದರ್ಬಾರು ನಡೆಸುತ್ತಿರುವ ಚಿತ್ರವನ್ನ ಮನೆಯಲ್ಲಿ ಇಟ್ಟರೆ ನಿಮ್ಮ ಮನೆಯ ಕುಟುಂಬದ ಸದಸ್ಯರಲ್ಲಿ ಪ್ರೀತಿ ವಿಶ್ವಾಸ ವಾತ್ಸಲ್ಯ ಹೆಚ್ಚಾಗಿರುತ್ತದೆ.

ಶ್ರೀ ಕೃಷ್ಣನು ಆಕಳಿನ ಜೊತೆ ಕೊಳಲು ಊದುತ್ತಿರುವ ಚಿತ್ರ ಇರಿಸುವುದರಿಂದ ನಿಮ್ಮ ಮನೆಗೆ ಧನಪ್ರಾಪ್ತಿ ಮತ್ತು ಸೌಭಾಗ್ಯವು ನಿಮ್ಮದಾಗುತ್ತದೆ. ನಿಮ್ಮ ಮನೆಯ ಭಾಗ್ಯದ ಬಾಗಿಲು ತೆರೆಯುತ್ತದೆ. ಇನ್ನು ಸಮುದ್ರದ ತೀರದಲ್ಲಿ ಏಳು ಅಶ್ವಗಳು ಓಡುತ್ತಿರುವ ಚಿತ್ರವನ್ನು ಇಟ್ಟರೆ ನಿಮ್ಮ ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿ ಕಾಣುತ್ತದೆ. ಈ ಚಿತ್ರವನ್ನು ನೀವು ಪೂರ್ವದಿಕ್ಕಿನಲ್ಲಿ ಇಡಬೇಕು. ತಾಯಿ ಯಶೋದಳ ಜೊತೆ ಬಾಲ್ಯದ ಶ್ರೀಕೃಷ್ಣನ ಚಿತ್ರವನ್ನು ಗರ್ಭಿಣಿಯರ ಕೋಣೆಯಲ್ಲಿ ಇಟ್ಟರೆ ತಾಯಿ ಮತ್ತು ಮಕ್ಕಳ ಬಾಂಧವ್ಯ ವೃದ್ಧಿಯಾಗುತ್ತದೆ. ಇನ್ನು ಕೆರೆ ಅಥವಾ ನದಿಯಲ್ಲಿ ಹಂಸ ತೇಲಾಡುತ್ತಿರುವ ಚಿತ್ರವನ್ನು ಮನೆಯಲ್ಲಿ ಇಟ್ಟರೆ ಆ ಮನೆಯಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ.

ಮಹಾಭಾರತದ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಕುಟುಂಬದಲ್ಲಿ ಕಲಹಗಳು ಜಗಳಗಳು ಏರ್ಪಡುತ್ತವೆ. ಹೂಗುಚ್ಛದ ಚಿತ್ರವನ್ನು ಮಲಗುವ ಕೋಣೆಯಲ್ಲಿ ಇರುವುದರಿಂದ ಗಂಡ ಹೆಂಡತಿಯರ ನಡುವೆ ಪ್ರೀತಿ, ಪ್ರೇಮ, ಅನುರಾಗ ಹೆಚ್ಚಾಗುತ್ತದೆ. ಇನ್ನು ಹರಿಯುವ ನದಿ ನೀರಿನ ಜರಿಯ ಚಿತ್ರವನ್ನು ಮನೆಯಲ್ಲಿ ಇಟ್ಟರೆ ಧನ ಹಾನಿಯಾಗುತ್ತದೆ. ಜೊತೆಗೆ ನಿಮ್ಮ ಮನಸ್ಸು ಸದಾ ಚಂಚಲತೆಯಿಂದ ಕೂಡಿರುತ್ತದೆ. ಇನ್ನು ಶಿವನ ಮತ್ತೊಂದು ರೂಪ ನಟರಾಜನ ಚಿತ್ರವನ್ನು ನಿಮ್ಮ ಮನೆಯಲ್ಲಿ ಇಡಬಾರದು ಶಿವನ ತಾಂಡವ ರೂಪ ಇದಾಗಿರುವುದರಿಂದ ಇದು ಮನೆಯ ನಾಶವನ್ನು ಸೂಚಿಸುತ್ತದೆ.

ಮಕ್ಕಳ ಕೋಣೆಯಲ್ಲಿ ಸರಸ್ವತಿ ಚಿತ್ರವನ್ನು ಇಡುವುದರಿಂದ ಅದರಲ್ಲೂ ಉತ್ತರದಿಕ್ಕಿನಲ್ಲಿ ಇಟ್ಟರೆ ಮಕ್ಕಳ ಏಕಾಗ್ರತೆ ಜ್ಞಾನ ವೃದ್ಧಿಯಾಗುತ್ತದೆ, ಭಗವಂತನ ಧನ್ವಂತರಿ ಅಮೃತ ಕಳಶದೊಂದಿಗೆ ಇರುವ ಚಿತ್ರವನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಧನಪ್ರಾಪ್ತಿ ಉಂಟಾಗುತ್ತದೆ.

ಮನೆಯಲ್ಲಿ ಅಳುತ್ತಿರುವ ಮಕ್ಕಳ ಚಿತ್ರವನ್ನು ಇಡಕೂಡದು ಇದರಿಂದ ಮನೆಯಲ್ಲಿ ಮಾನಸಿಕ ಸಮಸ್ಯೆಗಳು ಹಿಂಸೆ ಆರಂಭವಾಗುತ್ತದೆ, ತಾಯಿ ಲಕ್ಷ್ಮೀದೇವಿ ನಿಂತಿರುವ ಚಿತ್ರವನ್ನು ಮನೆಯಲ್ಲಿ ಇಡಕೂಡದು ಕಾರಣ ಲಕ್ಷ್ಮೀದೇವಿ ಚಂಚಲೆ ಆಗಿರುವುದರಿಂದ ನಿಮ್ಮಮನೆಯನ್ನು ಬಿಟ್ಟು ಹೋಗಬಹುದು. ಆದ್ದರಿಂದ ಕುಳಿತಿರುವ ಲಕ್ಷ್ಮಿ ಚಿತ್ರವನ್ನು ಇಡಬೇಕು. ಇನ್ನು ಅಡುಗೆ ಕೋಣೆಯಲ್ಲಿ ಅನ್ನಪೂರ್ಣೇಶ್ವರಿ ಚಿತ್ರವನ್ನು ಇರಿಸುವುದರಿಂದ ನಿಮ್ಮ ಮನೆಯಲ್ಲಿ ಸದಾ ಅನ್ನಪೂರ್ಣೇಶ್ವರಿ ಮಾತೆ ಸದಾ ಇರುತ್ತಾಳೆ, ಅನ್ನಕ್ಕೆ ದಾರಿದ್ರ್ಯ ಬರುವುದಿಲ್ಲ ಮತ್ತು ಆಹಾರದ ಕೊರತೆ ಉಂಟಾಗುವುದಿಲ್ಲ.

ಮನೆಯಲ್ಲಿ ಕಾಡು ಪ್ರಾಣಿಗಳ ಚಿತ್ರವನ್ನು ಇಡಕೂಡದು ಇದು ಮನೆಯಲ್ಲಿ ನಕರಾತ್ಮಕ, ಹಿಂಸಾತ್ಮಕವಾದ ವಾತಾವರಣ ನಿರ್ಮಿಸುತ್ತದೆ. ಲವ್ ಬರ್ಡ್ಸ್ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಗಂಡ ಹೆಂಡತಿಯರ ನಡುವೆ ಅನ್ಯುನ್ಯತೆ ಹೆಚ್ಚಾಗಿ ಪ್ರೀತಿ ಪ್ರೇಮದಿಂದ ಜೀವನ ನಡೆಸುತ್ತಾರೆ.

ತಾಜ ಮಹಲ್ ಚಿತ್ರವನ್ನು ಇಡುವುದರಿಂದ ಮನೆಯಲ್ಲಿ ಅಶುಭವಾಗುತ್ತದೆ ಏಕೆಂದರೆ ತಾಜ್ ಮಹಲ್ ಸಮಾಧಿಯ ನೆಲೆಯಾಗಿದೆ, ಮನೆಯಲ್ಲಿ ಮುಳುಗುವ ಹಡಗು ಚಿತ್ರಗಳನ್ನು ಇಡಬಾರದು ಇದು ಮನೆಯ ಆರ್ಥಿಕತೆಯ ಪ್ರಗತಿಯನ್ನು ಕುಂದಿಸುತ್ತದೆ.

%d bloggers like this: