ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಲು ವಿಲ್ಯೆದೆಲೆಯಿಂದ ಈ ಸರಳ ಪೂಜೆ ಅನುಸರಿಸಿ

ಜೀವನದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆಗಳಿಂದ ಪಾರಾಗಲು, ಈ ಒಂದು ವಸ್ತುವನ್ನು ಬಳಸಿದರೆ ಸಾಕು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಬಹುದು. ಈ ವಸ್ತುವಿನ ಬೆಲೆ ಅತಿ ಕಡಿಮೆಯಾದರೂ ಸಹ ಇದರ ಮೌಲ್ಯ ಮಾತ್ರ ಅಪಾರ ಮಹತ್ವವನ್ನು ಪಡೆದಿದೆ. ಈ ವಸ್ತುವನ್ನು ಸಂಧ್ಯಾಕಾಲದಲ್ಲಿ ಐದು ಮುತ್ತೈದೆಯರಿಗೆ ಕೊಟ್ಟು, ಅವರು ಮನಃಪೂರ್ವಕವಾಗಿ ಸಂತೋಷಪಟ್ಟು, ನಿಮ್ಮನ್ನು ಹರಸಿದರೆ ಸಾಕು, ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸುಗುಮವಾಗಿ ನಡೆಯುತ್ತವೆ. ಬಂಗಾರದಂತಹ ನಾಣ್ಯವನ್ನು ಇದರ ಮೇಲೆ ಇಟ್ಟರೆ ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಶೀಘ್ರವಾಗಿ ನಡೆಯುತ್ತವೆ. ಇಂತಹ ಮಹತ್ವ ಪಡೆದಿರುವ ವಸ್ತು ಯಾವುದು ಗೊತ್ತಾ? ಹೌದು ನಮ್ಮ ಭಾರತೀಯ ಸಂಸ್ಕೃತಿ, ಸಂಪ್ರದಾಯದಲ್ಲಿ ವಿಳ್ಯಾದೆಲೆಗೆ ವಿಶೇಷವಾದ ಪ್ರಾಮುಖ್ಯತೆ ನೀಡಲಾಗಿದೆ. ಭಿನ್ನವಾಗಿರದ, ಮುಕ್ಕಾಗಿರದ, ರಂದ್ರಗಳಾಗದ ಎರಡು ವಿಳ್ಯಾದೆಲೆಗಳನ್ನು ತೆಗೆದುಕೊಂಡು ಅರಿಶಿನದ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಬೇಕು.

ನಂತರ ಪರಿಶುದ್ಧವಾದ ಶ್ರೀಗಂಧದ ಚಕ್ಕೆಯಿಂದ ಗಂಧವನ್ನು ತೇಯ್ದು ಅದಕ್ಕೆ ಅರಿಶಿಣವನ್ನು ಮಿಶ್ರಣ ಮಾಡಿಕೊಂಡು, ತುಳಸಿಕಡ್ಡಿ ಅಥವಾ ದಾಳಿಂಬೆ ಕಡ್ಡಿಯಿಂದ ಆ ವಿಳ್ಯಾದೆಲೆಯ ಮಧ್ಯಭಾಗದಲ್ಲಿ ಶ್ರೀಂ ಎಂಬ ಬೀಜಾಕ್ಷರ ಬರೆದು, ಈ ವಿಳ್ಯಾದೆಲೆಯನ್ನು ಉತ್ತಾರಾಭಿಮುಖವಾಗಿ ಇಟ್ಟು ವಿಳ್ಯಾದೆಲೆಯ ಕಡ್ಡಿಯ ತೂದಿ ನಿಮ್ಮ ಭಾಗಕ್ಕೆ ತೋರೀತ್ತಿರಬೇಕು, ಅಂದರೆ ನೀವು ಕೂತಿರುವ ಉತ್ತಾರಾಭಿಮುಖವಾಗಿ ಎದರು ಮಣೆಯಿಟ್ಟು, ಅದರ ಮೇಲೆ ಪದ್ಮಾಲಂಕಾರದ ರಂಗೋಲಿ ಹಾಕಬೇಕು. ಈ ರಂಗೋಲಿಯ ಮೇಲೆ ಒಂದು ಹಿಡಿಯಷ್ಟು ಅಕ್ಕಿಯನ್ನು ಇರಿಸಿ, ಈ ಅಕ್ಕಿಯ ಮೇಲೆ ಒಂದಚ್ಚು ಬೆಲ್ಲ ಇಟ್ಟು, ಮಹಾಲಕ್ಷ್ಮಿಯನ್ನು ಸ್ಮರಿಸಬೇಕು. ತದನಂತರ ನಿಮ್ಮ ಉಂಗುರ ಬೆರಳಿನಿಂದ ಬೀಜಾಕ್ಷರದ ಮೇಲೆ ಒಂದು ಹನಿ ಜೇನುತುಪ್ಪವನ್ನು ಲೇಪಿಸಿ ಶ್ರೀಂ ಎಂಬ ಬೀಜಾಕ್ಷರವನ್ನು 108 ಬಾರಿ ಪಠಿಸಿಬೇಕು.

ನಂತರದಲ್ಲಿ ಇದಕ್ಕೆ ನೈವೇದ್ಯವಾಗಿ ಬೆಲ್ಲ ಅಥವಾ ಕೆಂಪು ಕಲ್ಲುಸಕ್ಕರೆಯನ್ನು ಇಡಬೇಕು, ಮಾರನೇಯ ದಿನ ಈ ನೈವೇದ್ಯಯನ್ನು ನೀವು ನಿಮ್ಮ ಪರಿವಾರದವರು ಮಾತ್ರ ಇದನ್ನು ಪ್ರಸಾದದ ರೂಪದಲ್ಲಿ ಎಲ್ಲರೂ ಸೇವಿಸಬೇಕು. ನಂತರ ಈ ವಿಳ್ಯಾದೆಲೆಯನ್ನು ಒಂದು ತಾಮ್ರದ ಪಾತ್ರೆಯ ನೀರಿನಲ್ಲಿ ಇರಿಸಿ, ಅದರ ಮೇಲೆ ಬರೆದಿರುವ ಬೀಜಾಕ್ಷರ ಸಂಪೂರ್ಣವಾಗಿ ಕರಗಿದ ನಂತರ ಆ ಅರಿಶಿನದ ನೀರನ್ನು ನಿಮ್ಮ ಮನೆಯ ಎಲ್ಲಾ ದಿಕ್ಕುಗಳಿಗೂ ಪ್ರೋಕ್ಷಣೆ ಮಾಡಬೇಕು. ನಿಮಗೂ ನಿಮ್ಮ ಮನೆಯ ಸದಸ್ಯರಿಗೂ ಈ ಅರಿಶಿನದ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳಬೇಕು. ಈ ರೀತಿಯಾಗಿ ಒಂಭತ್ತು ಶುಕ್ರವಾರ, ಒಂಭತ್ತು ಮಂಗಳವಾರ ಜೊತೆಗೆ ನಾಲ್ಕು ಹುಣ್ಣಿಮೆಗಳು ಈ ರೀತಿಯ ವಿಳ್ಯಾದೆಲೆಯ ಯಂತ್ರವನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಿದರೆ ನಿಮ್ಮ ಇಷ್ಟಾರ್ಥಸಿದ್ದಿಗಳು ನೆರೆವೇರುತ್ತವೆ ಎಂದು ಜ್ಯೋತಿಷ್ಯಶಾಸ್ಥ್ರಜ್ಞರು ತಿಳಿಸಿದ್ದಾರೆ.

%d bloggers like this: