ಮನೆಯಲ್ಲಿ ಸಿಕ್ಕ ಸಿಕ್ಕ ಕಡೆ ಗಣಪತಿ ಮೂರ್ತಿ ಇಡಬೇಡಿ, ಈ ನಿಯಮ ಕಡ್ಡಾಯವಾಗಿ ಪಾಲಿಸಿ

ಯಾವುದೇ ಶುಭಕಾರ್ಯಗಳಲ್ಲಿ ಪ್ರಥಮ ಪೂಜೆಗೆ ಪ್ರಾಶಸ್ತ್ಯ ನೀಡುವ ದೇವರಾಗಿರುವ ಗಣಪತಿ ದೇವರ ವಿಗ್ರಹವನ್ನು ಸರ್ವಜನರೂ ಪೂಜಿಸುತ್ತಾರೆ. ಆದರೆ ಈ ಗಣೇಶ ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜಿಸಬೇಕಾದರೆ ಅದಕ್ಕೆ ವಿವಿಧ ರೀತಿಯ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಯಾವ ದಿಕ್ಕಿನಲ್ಲಿ ಗಣೇಶ ಮೂರ್ತಿಯನ್ನು ಇಟ್ಟರೆ ಒಳಿತು ಎಂಬುದನ್ನು ಅರಿಯುವುದು ಪ್ರಮುಖವಾಗಿರುತ್ತದೆ. ಮನೆಯ ಸಿಕ್ಕ ಸಿಕ್ಕ ಜಾಗದಲ್ಲಿ ಗಣಪತಿ ಮೂರ್ತಿಯನ್ನು ಸ್ಥಾಪನೆ ಮಾಡಿದರೆ ಮನೆಯಲ್ಲಿ ದುಷ್ಪರಿಣಾಮ ಬೀರುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಗಣೇಶ ಮೂರ್ತಿಗಳು ದೊರೆಯುತ್ತವೆ. ಉದಾಹರಣೆಗಾಗಿ ಎಡಮುರಿ ಗಣಪತಿ ಬಲಮುರಿ ಗಣಪತಿ ಹಾಗೂ ವಿಶೇಷ ಗಣಪತಿ ಎಂದು ಮೂರು ರೂಪದ ಗಣೇಶನ ವಿಗ್ರಹಗಳು ಹೆಚ್ಚು ಮಾರಾಟವಾಗುತ್ತವೆ. ಆದರೆ ಈ ಗಣೇಶ ಮೂರ್ತಿಗಳ ಹಿನ್ನೆಲೆ ಬಗ್ಗೆ ಬಹಳಷ್ಟು ಮಂದಿಗೆ ತಿಳಿದಿರುವುದಿಲ್ಲ.

ಯಾವ ದಿಕ್ಕಿನಲ್ಲಿ ಈ ವಿಗ್ರಹಗಳನ್ನು ಪ್ರತಿಷ್ಠಾಪಿಸಬೇಕು ಎಂಬುದು ಕೂಡ ತಿಳಿದಿರುವುದಿಲ್ಲ. ಈ ವಿಚಾರದ ಬಗ್ಗೆ ತಿಳಿಯುವುದಾದರೆ ಮೊದಲನೇಯದಾಗಿ ಎಡೆಮುರಿ ವಿನಾಯಕ ಅಂದರೆ ಗಣೇಶನ ಸೊಂಡಿಲು ಎಡಭಾಗಕ್ಕೆ ತಿರುಗಿದ್ದರೆ ಅದನ್ನು ಎಡಮುರಿ ಗಣೇಶ ಎಂದು ಕರೆಯುತ್ತಾರೆ. ಎಡಮುರಿ ಇದು ಉತ್ತರದ ದಿಕ್ಕನ್ನು ಪ್ರತಿನಿಧಿಸುತ್ತದೆ ಅಂದರೆ ಚಂದ್ರನಾಡಿ. ಈ ಚಂದ್ರನಾಡಿಯು ಆನಂದಮಯ ಮತ್ತು ಶಾಂತಿಯ ಸಂಕೇತವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಈ ಗಣೇಶ ವಿಗ್ರಹವನ್ನು ಹೆಚ್ಚಾಗಿ ಪೂಜಿಸುತ್ತಾರೆ. ಆದರೆ ಅಪ್ಪಿತಪ್ಪಿಯೂ ಕೂಡ ಈ ವಿಗ್ರಹವನ್ನು ಆಗ್ನೇಯ ದಿಕ್ಕಿನಲ್ಲಿ ಇಡಬಾರದು. ಉತ್ತರ, ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಶುಭ ವಾಗಿರುತ್ತದೆ. ಬಲಮುರಿ ಗಣಪತಿಯನ್ನು ಹೆಚ್ಚಾಗಿ ಮನೆಯಲ್ಲಿ ಪೂಜಿಸುವುದಿಲ್ಲ.

ಗಣೇಶನ ಸೊಂಡಿಲು ಬಲಭಾಗಕ್ಕೆ ಇದ್ದರೆ ಅದನ್ನುವಬಲಮುರಿ ಗಣಪತಿ ಎಂದು ಕರೆಯುತ್ತಾರೆ. ಇದನ್ನು ದಕ್ಷಿಣಾಭಿಮುಖ ಗಣಪತಿ ಎಂದೂ ಸಹ ಕರೆಯುತ್ತಾರೆ. ಬಲಮುರಿ ಅಂದರೆ ದಕ್ಷಿಣದ ದಿಕ್ಕುವಾಗಿದ್ದು, ಇದನ್ನು ಸೂರ್ಯನಾಡಿ ಎಂದು ಕರೆಯುತ್ತಾರೆ ಅಂದರೆ ಸದಾ ಸಕ್ರೀಯವಾಗಿರುವುದು ಎಂದು ಅರ್ಥ ಬರುತ್ತದೆ. ಕೊನೆಯದಾಗಿ ಗಣೇಶನ ಸೊಂಡಿಲು ನೇರವಾಗಿದ್ದರೆ, ಅದು ಪೂಜೆಮಾಡಲು ಶ್ರೇಷ್ಠಕರ ದೇವರೆಂದು ಕರೆಯುತ್ತಾರೆ. ಈ ನೇರಸೊಂಡಿಲು ಹೊಂದಿರುವ ಗಣಪತಿ ದೇವರನ್ನು ಮನೆಯಲ್ಲಿ ಪೂಜಿಸುವುದು ತುಂಬಾ ವಿಶೇಷವಾಗಿರುತ್ತದೆ. ಇನ್ನು ಗಣಪತಿ ದೇವರ ವಿಗ್ರಹಗಳನ್ನು ಮನೆಯ ಮುಂಭಾಗದಲ್ಲಿರುವ ಮೆಟ್ಟಿಲುಗಳ ಕೆಳಭಾಗದಲ್ಲಿಟ್ಟು ಪೂಜಿಸಬಾರದು. ವಾಸ್ತು ಪ್ರಕಾರ ಮನೆಯಲ್ಲಿ ಈ ಗಣಪತಿ ದೇವರನ್ನು ಈಶಾನ್ಯ ಭಾಗದಲ್ಲಿ ಇಟ್ಟು ಪೂಜಿಸುವುದರಿಂದ ಉತ್ತಮ ಫಲಗಳನ್ನು ಪಡೆಯಬಹುದು ಎಂದು ವಾಸ್ತುತಜ್ಞರು ತಿಳಿಸುತ್ತಾರೆ.

%d bloggers like this: