ಮನೆಯಲ್ಲಿ ಉಪ್ಪಿನ ಜೊತೆ ಈ ವಸ್ತು ಇಟ್ಟು ತಪ್ಪು ಮಾಡಬೇಡಿ, ಹಣವನ್ನೆಲ್ಲಾ ಕಳೆದುಕೊಳ್ಳುತ್ತೀರಿ

ಮನೆಯಲ್ಲಿ ಪ್ರಧಾನ ಪಾತ್ರ ವಹಿಸುವುದು ಅಡುಗೆ ಕೋಣೆ, ಈ ಅಡುಗೆ ಕೋಣೆಯು ಮನೆಯ ಪ್ರವೇಶ ದ್ವಾರದ ಬಳಿ ಇರುವುದು ಉತ್ತಮವಲ್ಲ, ಹಾಗೇನಿದ್ದರು ಅಡುಗೆ ಕೋಣೆಯು ಪ್ರವೇಶ ದ್ವಾರದ ಬಳಿ ಇದ್ದು ಬದಲಾಯಿಸಲು ಸಾಧ್ಯವಾಗದೇ ಇದ್ದಾಗ ಆಗ ನೀವು ಅಡುಗೆ ಕೋಣೆಗೆ ಸ್ಕರ್ಟನ್ ಬಳಸುವುದು ಉತ್ತಮ ವಾಗಿರುತ್ತದೆ. ವಾಸ್ತು ಪ್ರಕಾರ ಅಡುಗೆ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಇರುವುದು ಒಳ್ಳೆಯದು ಹಾಗೂ ಮನೆಗೆ ಬರುವ ಜನರ ಕಣ್ಣಿಗೆ ನೀವು ಅಡುಗೆ ಮಾಡುವ ಸ್ಟೌವ್ ಕಾಣಬಾರದು. ಆಗ್ನೇಯ ದಿಕ್ಕಿನಲ್ಲಿ ನೀರಿನನಲ್ಲಿ ಇದ್ದರೆ ಅಲ್ಲಿ ಸ್ಟೌವ್ ಇರಕೂಡದು ಏಕೆಂದರೆ ಜಲ ಮತ್ತು ಅಗ್ನಿ ತದ್ವಿರುದ್ದ ಆದ್ದರಿಂದ ಇವೆರಡು ಆದಷ್ಟು ಅಂತರದಲ್ಲಿದ್ದರೆ ಆ ಮನೆಗೆ ಉತ್ತಮವಾಗಿರುತ್ತದೆ.

ಪ್ರಮುಖವಾದ ವಿಷಯಕ್ಕೆ ಬರುವುದಾದರೆ ಅರಿಶಿನ ಮತ್ತು ಉಪ್ಪು ಎರಡನ್ನು ಅಕ್ಕಪಕ್ಕದಲ್ಲಿ ಇಡಬಾರದು ಇವೆರಡು ಅಕ್ಕಪಕ್ಕದಲ್ಲಿದ್ದರೆ ಮನೆಯ ದಾರಿದ್ರ್ಯತನಕ್ಕೆ ಕಾರಣವಾಗುತ್ತದೆ. ಮನೆಯ ಕಲಹ, ಜಗಳಗಳು ಏರ್ಪಡುವಂತಹ ಸಂಧರ್ಭಗಳು ಸೃಷ್ಠಿಯಾಗುತ್ತವೆ. ಅಡುಗೆಯಲ್ಲಿ ಬಳಸುವು ಉಪ್ಪು ಮತ್ತು ಅರಿಶಿನ ಇವೆರಡು ಪ್ರಧಾನವಾದ ಪಧಾರ್ಥವಾಗಿದೆ ಇವುಗಳಿಗೆ ವಿಶೇಷವಾದ ಮಹತ್ವವು ಇದೆ. ಉಪ್ಪು ನೀವು ಮಾಡುವ ಪಧಾರ್ಥಕ್ಕೆ ರುಚಿ ನೀಡಿದರೆ, ಅರಿಶಿನ ನೀವು ಮಾಡುವ ಪಧಾರ್ಥಕ್ಕೆ ಬಣ್ಣ ನೀಡಿ ಔಷಧಿ ಅಂಶವಿರುವ ಗುಣವೊಂದಿದ್ದು ದೇಹಕ್ಕೆ ಪೋಷಕಾಂಶಗಳನ್ನು ನೀಡುತ್ತದೆ. ನಮ್ಮ ಸಂಪ್ರದಾಯದಲ್ಲಿ ಉಪ್ಪಿಗೆ ಪೂಜ್ಯ, ಗೌರವ ಸ್ಥಾನ ನೀಡುತ್ತೇವೆ.

ಅದೇ ಕಾರಣಕ್ಕೆ ಉಪ್ಪು ಏನಾದರು ನೆಲದ ಮೇಲೆ ಬಿದ್ದಿದ್ದರೆ ಅದನ್ನು ತುಳಿಯದೆ ನಮಸ್ಕರಿಸುತ್ತೇವೆ. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ನಾಣ್ಣುಡಿಯು ನಮ್ಮಲ್ಲಿ ಉಂಟು. ಇನ್ನು ಅರಿಶಿನ ವಿಚಾರಕ್ಕೆ ಬಂದರೆ ಇದಕ್ಕೂ ಕೂಡ ಮಹತ್ವವನ್ನು ಕೊಟ್ಟು ಯಾವುದೇ ಶುಭಕಾರ್ಯಗಳಿಗೆ ಮೊದಲು ಪ್ರಾಶಸ್ತ್ಯ ಕೊಟ್ಟು ಕಾರ್ಯ ಆರಂಭಿಸುವುದು ಅರಿಶಿನ ಸ್ಪರ್ಶಸಿ ನಂತರ ಶುಭಕಾರ್ಯ ಅರಂಭಿಸುತ್ತಾರೆ. ಆದರೆ ಉಪ್ಪು ಮತ್ತು ಅರಿಶಿನವನ್ನು ಅಕ್ಕಪಕ್ಕ ದಲ್ಲಿಟ್ಟರೆ ಮನೆಯು ಆರ್ಥಿಕ ಸಂಕಷ್ಠಕ್ಕೆ ಸಿಲುಕುವುದು ಕಟ್ಟಿಟ್ಟ ಬುತ್ತಿ ಎಂದು ಹಿರಿಯರು ಹಾಗೂ ವಾಸ್ತು ತಜ್ಞರು ತಿಳಿಸುತ್ತಾರೆ.

%d bloggers like this: