ಮನೆಯಲ್ಲಿ ಗೃಹಿಣೆಯರು ತಿಳಿಯದೆ ಮಾಡುವ ಕೆಲವು ಆಲಸ್ಯತನದಿಂದಾಗಿ ಮನೆಯ ಯಜಮಾನನಿಗೆ ಸದಾ ಆರ್ಥಿಕ ಸಂಕಷ್ಠ ಎದುರಾಗುತ್ತಿರುತ್ತದೆ, ಹೌದು ಮನೆಯಲ್ಲಿ ಹೆಣ್ಣುಮಕ್ಕಳು ಲಕ್ಷ್ಮಿ ಸ್ವರೂಪ ಎಂದು ಹೇಳುತ್ತಾರೆ. ಆದರೆ ಅದೇ ಹೆಣ್ಣು ಮಕ್ಕಳು ಮಾಡುವ ಕೆಲವು ಆಲಸ್ಯತನ ಬೇಜವಬ್ದಾರಿತನ ಆ ಮನೆಯ ದಾರಿದ್ರ್ಯಕ್ಕೆ ಆಹ್ವಾನ ಕೊಟ್ಟಾಂತಾಗುತ್ತದೆ. ಹಾಗಾದರೆ ಮಹಿಳೆಯರು ಯಾವ ಕೆಲಸಗಳು ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತವೆ ಎನ್ನುವುದಾದರೆ ಮೊದಲನೆಯದಾಗಿ ಅಡುಗೆ ಕೋಣೆಯಲ್ಲಿ ಹಲವಾರು ಪಧಾರ್ಥಗಳನ್ನು ಕ್ರಮವಾಗಿ ಜೋಡಿಸಿರುತ್ತಾರೆ. ಆದರೆ ಈ ಉಪ್ಪಿನ ಡಬ್ಬದ ಪಕ್ಕದಲ್ಲಿ ಅರಿಶಿನ ವನ್ನು ಇಟ್ಟರೆ ಅದು ಲಕ್ಷ್ಮಿಯ ವಾಸಸ್ಥಾನವನ್ನು ಭಂಗ ಗೊಳಿಸಿದಂತೆ ಆಗುತ್ತದೆ.

ಹೌದು ಉಪ್ಪು ಸಾಕ್ಷಾತ್ ಲಕ್ಷ್ಮಿಯ ಸ್ವರೂಪ ಆದ್ದರಿಂದ ಅದನ್ನು ಉಪ್ಪನ್ನು ಅರಿಶಿನ ಡಬ್ಬಿಯ ಪಕ್ಕದಲ್ಲಿ ಇಡಕೂಡದು ಎಂದು ಹಿರಿಯರು ಹೇಳುತ್ತಾರೆ, ಕೆಲವೊಮ್ಮೆ ಮನೆಯಲ್ಲಿ ಖಾಲಿಯಾಗಿರುವ ಉಪ್ಪು ಅಥವಾ ಅರಿಶಿನವನ್ನು ಖಾಲಿಯಾಗಿದೆ ಎಂದು ಹೇಳಬಾರದು ಇದು ಮನೆಯ ಪ್ರಗತಿಗೆ ಶೋಭೆ ತರುವಂತದ್ದಲ್ಲ. ಉಪ್ಪು ಖಾಲಿಯಾಗಿದೆ ಎನ್ನುವ ಬದಲು ತಂದಿಟ್ಟರೆ ಒಳಿತು ಬಾಯಿಯ ಮುಖೇನ ಖಾಲಿ ಎನ್ನುವ ಪದ ಬಳಸಬೇಡಿ. ಇನ್ನು ಉಪ್ಪನ್ನು ಮುಸ್ಸಂಜೆ ವೇಳೆ ಉಪ್ಪನ್ನು ಕೊಡುವುದು ಮತ್ತು ಕೊಳ್ಳುವುದನ್ನು ಮಾಡಲೇಬೇಡಿ. ಉಪ್ಪನ್ನು ಖರೀದಿಸುವುದಾರೆ ಶುಕ್ರವಾರ ಬೆಳಿಗ್ಗೆ ತಂದರೆ ಸಾಕ್ಷಾತ್ ಲಕ್ಷ್ಮಿಯೇ ಮನೆಗೆ ಆಗಮನ ವಾದಂತೆ ಆಗುತ್ತದೆ.



ನಿಮ್ಮ ಸಂಬಳದ ಮೊದಲನೆಯ ಖರ್ಚು ಈ ಉಪ್ಪು ಖರೀದಿಗೆ ಬಳಸಿದರೆ ನಿಮ್ಮ ಹಣ ಇನ್ನಷ್ಟು ವೃದ್ದಿಯಾಗುತ್ತದೆ. ಇನ್ನು ಕೆಲವು ಮನೆಯಲ್ಲಿ ಮಹಿಳೆಯರು ಸಣ್ಣಪುಟ್ಟ ಉಳಿಕೆ ಹಣವನ್ನು ಸಂಗ್ರಹಿಸುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ, ಇದು ಉತ್ತಮ ಹವ್ಯಾಸವೇ ಆದರೆ ಕೂಡಿಡುವ ಹಣವನ್ನು ವಾಯುವ್ಯ ಅಥವಾ ಆಗ್ನೇಯ ಮೂಲದಲ್ಲಿ ಸಂಗ್ರಹಿಸಿಟ್ಟರೆ ಆ ಮನೆಯ ಆರ್ಥಿಕತೆಯು ಇನ್ನಷ್ಟು ಸಮೃದ್ದಿಯಾಗುತ್ತದೆ. ಅಡುಗೆಮನೆಯಲ್ಲಿ ಗ್ಯಾಸ್ ಅನ್ನು ಯಾವ ಮೂಲೆಯಲ್ಲಿ ಇಟ್ಟರೆ ಉತ್ತಮ ಎನ್ನುವುದಾದರೆ, ವಾಸ್ತುಶಾಸ್ತ್ರದ ಪ್ರಕಾರ ಆದಷ್ಟು ವಾಯುವ್ಯ ದಿಕ್ಕು ಅಥವಾ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಅನಿಲವನ್ನು ಇರಿಸಿದರೆ ಶ್ರೇಷ್ಠಕರವಾಗಿರುತ್ತದೆ ಎಂದು ಹಿರಿಯ ವಾಸ್ತುತಜ್ಞರು ತಿಳಿಸುತ್ತಾರೆ.