ಸಾಮಾನ್ಯವಾಗಿ ಕೆಲವು ನಕ್ಕರೆ ಅವರು ಆಕರ್ಷಕರಾಗಿ ಕಾಣುವುದು ಅವರ ಹಲ್ಲುಗಳಿಂದ ಏಕೆಂದರೆ ಅವರ ಹಲ್ಲುಗಳು ಬಿಳಿಬಣ್ಣದಿಂದ ಕೂಡಿದ್ದು ಅಷ್ಟು ಸುಂದರವಾಗಿ ಕಾಣುತ್ತವೆ. ಅಂತಹ ವ್ಯಕ್ತಿಗಳು ಎಲ್ಲರನ್ನು ತನ್ನತ್ತ ಸೆಳೆಯುವಂತಹ ವ್ಯಕ್ತಿತ್ವ ಒಳಗೊಂಡಿರುತ್ತಾರೆ, ಆದರೆ ಕೆಲವು ವ್ಯಕ್ತಿಗಳು ಮನಃಪೂರ್ವಕವಾಗಿ ಸಂಪೂರ್ಣವಾಗಿ ನಗಲು ಕಾರಣ ಅವರ ಹಲ್ಲುಗಳು ಹಳದಿ ಬಣ್ಣದಿಂದ ಕೂಡಿರದ್ದಾಗಿರುತ್ತದೆ. ಆದ್ದರಿಂದ ಅಂತಹ ವ್ಯಕ್ತಿಗಳು ನಗುವಾಗ ಕೈ ಅಡ್ಡತಂದು ನಗುವಂತದ್ದು. ಈ ಹಳದಿ ಬಣ್ಣಗಟ್ಟಿದ ಹಲ್ಲುಗಳ ಪರಿಹಾರಕ್ಕಾಗಿ ನೀವು ಮನೆಯಲ್ಲಿ ಪರಿಹಾರ ಮಾಡಿಕೊಳ್ಳಬಹುದು.

ನೀವು ಮಾಡಬೇಕಾದ್ದು ಇಷ್ಟೇ ಒಂದು ಬಟ್ಟಲಿನಲ್ಲಿ ನೀವು ಬಳಸುವ ಒಂದು ಅರ್ಧ ಚಮಚದಷ್ಟು ಪೇಸ್ಟ್ ಹಾಕಿಕೊಂಡು ಅದಕ್ಕೆ ಅರ್ಧ ಚಮಚದಷ್ಟು ಉಪ್ಪನ್ನು ಬೆರೆಸಬೇಕು. ನಂತರ ನಾಲ್ಕೈದು ಸಿಪ್ಪೆತೆಗೆದ ಬೆಳ್ಳುಳ್ಳಿ ಕಾಳುಗಳನ್ನು ಜಜ್ಜಿ ಪೇಸ್ಟ್ ಮಾಡಿಕೊಂಡು ಇದಕ್ಕೊಂದಷ್ಟು ಅರಿಶಿನ ಮತ್ತು ನಿಂಬೆರಸವನ್ನು ಸೇರಿಸಿ, ಎಲ್ಲವನ್ನು ಮಿಶ್ರಣವಾಗಿಸಿ ನೀವು ದಿನನಿತ್ಯ ಹಲ್ಲು ಹುಜ್ಜುವ ಹಾಗೇ ಈ ಪೇಸ್ಟ್ ಅನ್ನು ಬಳಸಿದರೆ ನಿಮ್ಮ ಹಳದಿ ಬಣ್ಣಗಟ್ಟಿದ ಹಲ್ಲುಗಳು ಬಿಳಿ ಬಣ್ಣಕ್ಕೆ ಬಂದು ಹೊಳಪನ್ನು ಹೊಂದುತ್ತವೆ. ಈ ಅರಿಶಿನ ಮತ್ತು ನಿಂಬೆರಸ ಆಯುರ್ವೇದ ಔಷಧಿ ರೀತಿಯಲ್ಲಿ ಕೆಲಸ ಮಾಡುತ್ತದೆ.

ಇನ್ನು ಬೆಳ್ಳುಳ್ಳಿಯಲ್ಲಿ ಆಂಟಿಬಯೋಟಿಕ್, ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫಾಮೆಂಟರಿ ಅಂಶ ಹೆಚ್ಚಾಗಿರುವುದಿರಂದ ದಂತದಲ್ಲಿರುವ ಕ್ಯಾವಿಟಿ ಮತ್ತು ನೋವನ್ನು ತಡೆಯುತ್ತದೆ. ಬ್ಯಾಕ್ಟಿರಿಯಾಗಳು ಬರದೇ ಹಾಗೆ ಈ ಬೆಳ್ಳುಳ್ಳಿಯು ನಿಯಂತ್ರಿಸುತ್ತದೆ. ಹಲ್ಲುಗಳು ಹಳದಿ ಬಣ್ಣ ತಿರುಗಲು ಕಾರಣ ಧೂಮಪಾನ, ಗುಟ್ಕಾ, ಪಾನ್ ರೀತಿಯ ದುಷ್ಚಟಗಳು ಹೆಚ್ಚು ಕಾಫಿ ಹಾಗು ಚಹಾ ಸೇವನೆಯಿಂದ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಆದ್ದರಿಂದ ಆದಷ್ಟು ಈ ರೀತಿಯ ದುಷ್ಚಟಗಳಿಂದ ದೂರವಿದ್ದು ನಿಮ್ಮ ಹಲ್ಲಿನ ಜೊತೆಗೆ ಒಸಡುಗಳ ಆರೋಗ್ಯವನ್ನು ಕಾಪಾಡಬಹುದಾಗಿದೆ.