ಮನೆಯಲ್ಲಿಯೇ ತಯಾರಿಸಿ ಪರಿಣಾಮಕಾರಿಯಾದ ಗುಡ್ ನೈಟ್ ಕಾಯಿಲ್, ಹೇಗೆಂದು ನೋಡಿ

ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಅನೇಕ ತೊಂದರೆಗಳನ್ನು ಮಾಡುತ್ತಿವೆ ಅಲ್ಲದೆ ಪ್ರಾಣ ಹಾನಿ ಕೂಡಾ ಹೆಚ್ಚಾಗುತ್ತಿದೆ. ಇದರಿಂದ ಈಗ ಹಳ್ಳಿಗಳು ಸೇರಿದಂತೆ ಎಲ್ಲ ನಗರಪ್ರದೇಶಗಳಲ್ಲಿ ಸೊಳ್ಳೆಗಳ ಬಗ್ಗೆ ಮತ್ತು ಸ್ವಚ್ಛತೆಯ ಬಗ್ಗೆ ಅತಿಯಾದ ಕಾಳಜಿ ಮೂಡುತ್ತಿದೆ. ಮನೆಯಲ್ಲಿ ನಾವು ಸೊಳ್ಳೆಗಳನ್ನು ಓಡಿಸಲು ಗುಡ್ ನೈಟ್ ಕಾಯಿಲ್, ಸೊಳ್ಳೆಯ ಅಗರಬತ್ತಿಗಳನ್ನು ಬಳಸುತ್ತೇವೆ, ಆದರೆ ಅವು ರಾಸಾಯನಿಕಗಳಿಂದ ಕೂಡಿರುತ್ತವೆ. ಇವುಗಳ ಅತಿಯಾದ ಬಳಕೆಯಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಬಂದೊದಗಬಹುದು. ಆದ್ದರಿಂದ ಈಗ ನಾವು ಹೇಳುವ ಮನೆಯಲ್ಲಿಯೇ ಸರಳವಾಗಿ ಮಾಡಬಹುದಾದ ಮತ್ತು ಪರಿಣಾಮಕಾರಿಯಾದ ವಿಧಾನವನ್ನು ನೋಡಿ. ಗುಡ್ ನೈಟ್ ಕಾಯಿಲ್ ಗಳು ಖಾಲಿಯಾದ ಕೂಡಲೇ ನಾವು ಅಂಗಡಿಗಳಿಗೆ ಹೋಗಿ ಇನ್ನೊಂದು ಲಿಕ್ವಿಡ್ ತಂದು ಹಾಕುತ್ತೇವೆ. ಇದನ್ನು ಮಾಡುವ ಬದಲು ನೀವು ಮನೆಯಲ್ಲಿ ಹೇಗೆ ತಯಾರಿಸಬೇಕು ಎಂಬುದನ್ನು ನಾವು ತಿಳಿಸುತ್ತೇವೆ. ಗುಡ್ ನೈಟ್ ಮಿಷನ್ ಖಾಲಿಯಾದ ನಂತರ ಅದನ್ನು ಎಸೆಯುವ ಬದಲು ಅದನ್ನು ನಾವು ಮರಳಿ ಉಪಯೋಗಿಸಬೇಕು.

ಹೇಗೆಂದರೆ ಅದರ ಒಳಗೆ ಒಂದು ಕಪ್ಪು ಬಣ್ಣದ ಕಡ್ಡಿ ಇರುತ್ತದೆ. ಅದನ್ನು ತೆಗೆಯಬೇಕು, ನಂತರ ತುಂಬಾ ಪರಿಣಾಮಕಾರಿಯಾದ ಮತ್ತು ಕ್ರಿಮಿನಾಶಕ ಗುಣಗಳನ್ನು ಹೊಂದಿರುವ ಕರ್ಪೂರ ಇಲ್ಲಿ ಬಳಸಬೇಕು. ಸ್ವಲ್ಪ ಕರ್ಪೂರಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ಪುಡಿಮಾಡಿ ಆ ಲಿಕ್ವಿಡ್ ಬಾಟಲಿಗೆ ಹಾಕಬೇಕು. ನಂತರ ಆ ಬಾಟಲಿಗೆ ಕಹಿಬೇವಿನ ಎಣ್ಣೆಯನ್ನು ಹಾಕಿಕೊಳ್ಳಬೇಕು. ಅಂದಹಾಗೆ ಈ ಕಹಿ ಬೇವಿನ ಎಣ್ಣೆಯನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು ಅಥವಾ ಈಗ ಎಲ್ಲ ಔಷಧಿ ಕೇಂದ್ರಗಳಲ್ಲೂ ಕೂಡ ಇದು ದೊರೆಯುತ್ತದೆ. ಇದರ ಜೊತೆಗೆ ಸ್ವಲ್ಪ ಸುಗಂಧಭರಿತ ಎಣ್ಣೆಯನ್ನು ಸಹ ಬಾಟಲಿಗೆ ಹಾಕಿಕೊಳ್ಳಿ. ಈಗ ಈ ಬಾಟಲಿಯನ್ನು ಮತ್ತೆ ಗುಡ್ ನೈಟ್ ಮಶಿನಿಗೆ ಹಾಕಿ. ಈ ಮಷೀನ್ ಅನ್ನು ಈಗ ಸ್ವಿಚ್ ನಲ್ಲಿ ಹಾಕಿ. ಇಷ್ಟೇ ನೋಡಿ ಯಾವುದೇ ರಾಸಾಯನಿಕಗಳಿಲ್ಲದ ಮನೆಯಲ್ಲಿ ತಯಾರಿಸಲಾದ ಮತ್ತು ಪರಿಣಾಮಕಾರಿಯಾದ ಸೊಳ್ಳೆ ಓಡಿಸುವ ವಿಧಾನ ರೆಡಿಯಾಯಿತು.

%d bloggers like this: