ಮನೆಯಿಂದ ಕೆಲಸ ಮಾಡುವ ಅವಧಿ ಮತ್ತೆ ವಿಸ್ತೀರ್ಣ

ಪ್ರತಿಷ್ಠಿತ ದೈತ್ಯ ಸಂಸ್ಥೆ ಗೂಗಲ್ ತನ್ನ ಸಿಬ್ಬಂದಿಗಳಿಗೆ 2021 ಮುಂದಿನ ವರ್ಷದ ಅಂತ್ಯದವರೆಗೂ ಮನೆಯಲ್ಲಿಯೆ ಕೆಲಸ ಮಾಡುವಂತೆ ಸೂಚನೆ ಹೊರಡಿಸಿದೆ. ಅವಶ್ಯಕತೆ ಬಿದ್ದಾಗ ಮಾತ್ರ ಕಂಪನಿಗೆ ಬಂದು ಕರ್ತವ್ಯ ನಿರ್ವಹಿಸಬಹುದಾಗಿದೆ, ಇನ್ನು ಕೊರೋನ ವೈರಸ್ ಹರಡುವ ಭೀತಿಯಿಂದಾಗಿ ಕಳೆದೊಂದು ವರ್ಷದಿಂದ ಎಲ್ಲಾ ಕಾರ್ಪೋರೇಟ್ ಕಂಪನಿಗಳ ಬಹುತೇಕ ಸಿಬ್ಬಂದಿಗಳು ವರ್ಕ್ ಫ್ರಮ್ ಹೋಮ್ ನಲ್ಲಿ ತೊಡಗಿಕೊಂಡಿದ್ದಾರೆ. ಕಾರ್ಪೋರೇಟ್ ಕಂಪನಿಗಳ ಕೆಲಸ ಕಾರ್ಯಗಳು ಆನ್ಲೈನ್ ಮುಖಾಂತರೇ ಹೆಚ್ಚು ವಹಿವಾಟನ್ನು ನಡೆಸುತ್ತವೆ.

ಆದ್ದರಿಂದ ಕಂಪನಿಗಳಿಗೆ ಕಾರ್ಯ ನಿರ್ವಹಣೆಯಲ್ಲಿ ಕೊರೋನ ಪರಿಣಾಮದಿಂದಾಗಿ ಯಾವುದೇ ಪರಿಣಾಮ ಬೀರುವುದಲ್ಲ. ಬಹತೇಕ ಕಂಪನಿಗಳು ತನ್ನ ಸಿಬ್ಬಂದಿಗಳನ್ನು ಇಂತಹ ಸಂಧರ್ಭದಲ್ಲಿಯೂ ಸಹ ಪರಿಣಾಮಕಾರಿಯಾಗಿ ದುಡಿಸಿಕೊಳ್ಳುತ್ತಿವೆ. ಇನ್ನು ವರ್ಕ್ ಫ್ರಂ ಹೋಮ್ ಅವಧಿಯನ್ನು ವಿಸ್ತರಣೆ ಮಾಡಿದ ಮೊದಲ ಸಂಸ್ಥೆ ಗೂಗಲ್. ಗೂಗಲ್ ತನ್ನ ಸಿಬ್ಬಂದಿಗಳಿಗೆ 2021ರ ಜೂನ್ ವರೆಗೆ ಮನೆಯಲ್ಲಿಯೇ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿತ್ತು.

ಈಗ ಮತ್ತೆ ವರ್ಕ್ ಫ್ರಂ ಹೋಮ್ ಅವಧಿಯನ್ನು ವಿಸ್ತರಿಸಿ ಮುಂದಿನ ವರ್ಷದ ಅಂತ್ಯದವರೆಗೂ ಮುಂದುವರಿಸಲಾಗುವುದು ಎಂದು ಆಲ್ಫಾಬೆಟ್ ಸಿ ಇ ಓ ಸುಂದರ್ ಪಿಚ್ಚೈ ಅವರು ಕಂಪನಿಯ ಸಿಬ್ಬಂದಿಗಳಿಗೆ ಇ ಮೇಲ್ ಮುಖಾಂತರ ಮಾಹಿತಿ ತಿಳಿಸಿದ್ದಾರೆ. ಕೊರೋನ ವೈರಸ್ ಈಗಾಗಲೇ ದೇಶದಾದ್ಯಂತ ನಿಯಂತ್ರಣಕ್ಕೆ ಬರುತ್ತಿದ್ದು, ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಇಳಿಮುಖ ಕಾಣುತ್ತಿದೆ. ಮತ್ತೊಂದೆಡೆ ಕೊರೋನ ಲಸಿಕೆಯು ಕೂಡ ಸಿದ್ದವಾಗಿ ವಿತರಣೆಯ ಪ್ರಕ್ರಿಯೆಗಳು ನಡೆಯುತ್ತಿವೆ.

ಎಲ್ಲವೂ ಮತ್ತೆ ಎಂದಿನಂತೆ ಸರಿಹೋದರೆ ಮುಂದಿನ ವರ್ಷದಿಂದ ಸಿಬ್ಬಂದಿಗಳ ಅನುಕೂಲ ನೋಡಿಕೊಂಡು ವಾರದಲ್ಲಿ ಮೂರುದಿನಗಳ ಕಾಲ ಮನೆಯಲ್ಲಿ ಮತ್ತು ಮೂರು ದಿನಗಳ ಕಾಲ ಕಂಪನೆಯಲ್ಲಿ ಕೆಲಸ ಮಾಡುವ ಯೋಜನೆ ಮಾಡಿಕೊಳ್ಳುತ್ತೇವೆ. ಈ ರೀತಿ ಕೆಲಸದ ಅವಧಿಯನ್ನು ವಿಂಗಡಿಸಿಕೊಂಡು ಕಾರ್ಯ ನಿರ್ವಹಿಸಿದರೆ ಸಿಬ್ಬಂದಿಗಳಿಗೆ ಹೊರೆಯಾಗುವುದಿಲ್ಲ ಮತ್ತು ಕಾರ್ಯ ಚಟುವಟಿಕೆಗಳು ಕೂಡ ವೇಗವಾಗಿ ನಡೆದು ಉತ್ಪದನಾ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಗೂಗಲ್ ಸಂಸ್ಥೆ ಅಭಿಪ್ರಾಯ ವ್ಯಕ್ತ ಪಡಿಸಿದೆ.

%d bloggers like this: