ಮಂಗಳಗ್ರಹದ ಪ್ರಭಾವ, ಜನೆವರಿಯಿಂದ ಈ ರಾಶಿಯವರಿಗೆ ಶುಭ ಫಲ ದೊರೆಯಲಿದೆ ಆದರೆ

ವೃಶ್ಚಿಕ ರಾಶಿ ಭವಿಷ್ಯ 2021 ಜನವರಿಯಿಂದ ಫಲಾಫಲಗಳು ಹೇಗಿದೆ ಎಂಬುದನ್ನು ತಿಳಿಯುವುದಾದರೆ ವೃಶ್ಚಿಕ ರಾಶಿಯವರು ನೀರಿನಂಶ ರಾಶಿಯವರಾಗಿದ್ದಾರೆ. ಈ ವೃಶ್ಚಿಕ ರಾಶಿಯ ಅಧಿಪತಿ ಮಂಗಳಗ್ರಹವು ವೃಶ್ಚಿಕ ರಾಶಿಯ ಜನರ ಮೇಲೆ ಪ್ರಭಾವ ಬೀರುತ್ತದೆ, ನಿಮ್ಮ ನ್ಯುನತೆಯನ್ನು ಅರಿಯಲು ಗುರು ಮತ್ತು ಸೂರ್ಯ ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ನಿಮ್ಮ ಶಕ್ತಿ ಸಾಮರ್ಥ್ಯ ಮತ್ತು ನಿಮ್ಮಲ್ಲಿರುವ ಕುಂದು ಕೊರತೆಗಳನ್ನು ಅರಿತು ಸರಿಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಪ್ರಗತಿ ಕಾಣುತ್ತೀರಿ.

ಜನವರಿಯಿಂದ ನಿಮಗೆ ಶುಭಫಲಗಳು ಕಂಡರು ಸಹ ವರ್ಷದ ಮಧ್ಯದಲ್ಲಿ ಒಂದಷ್ಟು ಗೊಂದಲ, ಸಮಸ್ಯೆಗಳು ಎದುರಾಗುತ್ತವೆ. ವಿಶೇಷವಾಗಿ ಕುಟುಂಬದ ಸದಸ್ಯರಲ್ಲಿ ಮಾತುಕತೆ ನಡೆಸುವಾಗ ಎಚ್ಚರವಿರಲಿ ಹೆಚ್ಚು ಮಾತು ಒಳಿತಲ್ಲ. ನಿಮ್ಮ ಮಾತಿನ ಮೇಲೆ ಆದಷ್ಟು ಹಿಡಿತವಿದ್ದಷ್ಟು ನಿಮಗೆ ಗೌರವ ದಕ್ಕುತ್ತದೆ ಇಲ್ಲವಾದಲ್ಲಿ ಇಷ್ಟು ವರ್ಷ ಸಂಪಾದಿಸಿದ ಸ್ಥಾನ ಮಾನ ಕಳೆದುಕೊಳ್ಳುವ ಸಂಭವವಿದೆ. ನಿಮ್ಮ ಉದ್ಯೋಗದಲ್ಲಿ ಬದಲಾವಣೆ ಮಾಡಬಹುದಾಗಿದೆ. ನಿಮ್ಮ ಪ್ರತಿಭೆಯನ್ನು ಗುರುತಿಸುವ ಸಮಯ ಸನಿಹವಾಗಿದ್ದು ನಿಮ್ಮ ಮೇಲಾಧಿಕಾರಿಗಳು ನಿಮಗೆ ಬಡ್ತಿ ನೀಡುವುದರ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುತ್ತಾರೆ.

ಮನೆಗಳಲ್ಲಿ ಶುಭಕಾರ್ಯ ಜರುಗುವಂತದ್ದು ನಿಮಗೆ ಕುಟುಂಬದ ಸದಸ್ಯರು ನಿಮಗೆ ಸಾಥ್ ನೀಡುತ್ತಾರೆ. ಹೊಸ ಉದ್ಯೋಗ ಅಥವಾ ವ್ಯಾಪಾರ ವ್ಯವಹಾರ ಆರಂಭಿಸಲು ಇದು ನಿಮಗೆ ಸೂಕ್ತ ಸಮಯವಾಗಿದೆ, ರಾಹು ಗ್ರಹವು ನಿಮ್ಮ ರಾಶಿ ಮನೆಯಿಂದ ಏಳನೆ ಮನೆಗೆ ಸಂಚರಿಸುವುದರಿಂದ ನಿಮಗೆ ಅದೃಷ್ಟ ಲಭಿಸಬಹುದು. ವಿಧ್ಯಾರ್ಥಿಗಳು ಓದಿನಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಅತ್ಯಗತ್ಯವಾಗಿದೆ.

ನೀವು ಚಿನ್ನ ಮತ್ತು ಭೂ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ನಿರೀಕ್ಷೆ ಮಾಡಬಹುದು, ಆದರೆ ಕೋಪವನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಂಡರೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸಬಹುದು. ಹಣದ ಒಳಹರಿವು ಕೂಡ ಹೆಚ್ಚಾಗುತ್ತದೆ. ಅನಾವಶ್ಯಕ ಪ್ರವಾಸ ಮಾಡಬೇಡಿ ಅಗತ್ಯಬಿದ್ದರೆ ಮಾತ್ರ ಮುಂದುವರೆಯಿರಿ ಇದರಿಂದ ನಷ್ಟವೇ ಹೊರತು ಲಾಭದಾಯಕ ವಾದುದೇನಿಲ್ಲ.

ಶುಕ್ರ ಗ್ರಹವು ನಿಮ್ಮ ರಾಶಿಯಿಂದ ಮೂರನೇ ಮನೆಯ ಸ್ಥಾನ ಅಲಂಕರಿಸುವುದರಿಂದ ನಿಮಗೆ ಧೈರ್ಯ ಶಕ್ತಿ ಹೆಚ್ಚಾಗುತ್ತದೆ, ಪಾಲುದಾರಿಕೆ ವ್ಯವಹಾರಗಳಲ್ಲಿ ಎಚ್ಚರದಿಂದ ವ್ಯವಹಸಿದರೆ ಉತ್ತಮವಾದ ಲಾಭ ಪಡೆಯಬಹುದಾಗಿದೆ. ಇನ್ನು ವೃಶ್ಚಿಕರಾಶಿಯವರ ಕೆಲವು ದೋಷ, ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ಮಂಗಳವಾರ ಉಪವಾಸ ಮಾಡುವುದರ ಜೊತೆಗೆ ಗಣೇಶನ ಪ್ರಾರ್ಥನೆ ಮಾಡುವುದರಿಂದ ನಿಮ್ಮ ಸಕಲ ಸಂಕಷ್ಠಗಳನ್ನು ವಿಘ್ನಕಾರಕ ವಿನಾಯಕನು ನಿಮ್ಮ ಮೇಲೆ ಅನುಗ್ರಹಿಸಿ ನಿಮಗೆ ಶುಭಫಲ ನೀಡುತ್ತಾನೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: