ಮಂಕಾದ ಥಿಯೇಟರ್ಗಳಿಗೆ ಭರ್ಜರಿಯಾಗಿ ಮರುಜೀವ ನೀಡಿದೆ ನಮ್ಮ ಕನ್ನಡದ ಈ ಚಿತ್ರ

ಕೋರೋಣ ಹೆಮ್ಮಾರಯ ಆರ್ಭಟಕ್ಕೆ ಇಡೀ ದೇಶವೇ ಕೆಲವು ತಿಂಗಳುಗಳ ಕಾಲ ಸ್ತಬ್ಧವಾಗಿತ್ತು. ಆದರೆ ಇದೀಗ ಒಂದೊಂದೇ ನಿಧಾನವಾಗಿ ಸಹಜ ಸ್ಥಿತಿಯತ್ತ ಬರುತ್ತಿವೆ. ಅದರಲ್ಲೂ ಥಿಯೇಟರ್ಗಳ ಸಮಸ್ಯೆ ತುಂಬಾ ದೊಡ್ಡದು. ಹಲವು ತಿಂಗಳುಗಳ ನಂತರ ಸಿನಿಮಾ ಮಂದಿರಗಳು ಓಪನ್ ಆದರೂ ಕೂಡ ಜನ ಇನ್ನೂಕೋರೋಣಗೆ ಹೆದರಿ ಅವುಗಳತ್ತ ಮುಖ ಮಾಡಲಿಲ್ಲ. ದೊಡ್ಡ ನಟರ ದೊಡ್ಡ ಚಿತ್ರಗಳು ಬಿಡುಗಡೆ ಸಿದ್ಧವಾಗಿದ್ದರೂ ಕೂಡ ಪ್ರೇಕ್ಷಕರ ಆಗಮನದ ಕೊರತೆಯ ಭಯಕ್ಕೆ ತೆರೆಗೆ ಅಪ್ಪಳಿಸುತ್ತಿಲ್ಲ, ಆದರೆ ನಮ್ಮ ಕನ್ನಡದ ಒಂದು ಸಿನಿಮಾ ಇದೀಗ ಈ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಕನ್ನಡ ಸಿನಿ ರಸಿಕರ ಮನೆಗೆದ್ದು ಎಲ್ಲರನ್ನು ಥಿಯೇಟರ್ಗೆ ತಂದು ಕೂರಿಸುತ್ತಿದೆ. ಹೌದು ಎಲ್ಲರೂ ಹೆದರಿ ಕೈಕಟ್ಟಿಕೊಂಡು ಕುಳಿತಾಗ ಆಕ್ಟ್ 1978 ಎಂಬ ನಮ್ಮ ಕನ್ನಡದ್ದೇ ಆದ ಒಂದು ಸೋಶಿಯಲ್ ತ್ರಿಲ್ಲರ್ ಸಿನಿಮಾ ಜಾದು ಮಾಡಿದೆ ಮತ್ತು ಉಳಿದ ಚಿತ್ರಗಳ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಧೈರ್ಯ ತುಂಬಿದೆ.

ಹೌದು ಭ್ರಷ್ಟ ವ್ಯವಸ್ಥೆಯ ವಿರುದ್ಧವಾಗಿ ಕಥೆಯನ್ನು ಹೆಣೆದು ಮಾಡಲಾದ ಸಸ್ಪೆನ್ಸ್ ಥ್ರಿಲ್ಲರ್ ಆಕ್ಟ್ 1978 ಎಂಬ ಚಿತ್ರ ಈಗ ಎಲ್ಲ ಸಿನಿಕ ರಸಿಕರನ್ನು ಮತ್ತೆ ಮರಳಿ ಚಿತ್ರಮಂದಿರಗಳಿಗೆ ಬರುವಂತೆ ಮಾಡುತ್ತಿದೆ. ನಾತಿಚರಮಿ ಎಂಬ ಸಾಲುಸಾಲು ಪ್ರಶಸ್ತಿಗಳನ್ನು ಗೆದ್ದ ಚಿತ್ರದ ನಿರ್ದೇಶಕ ಮನ್ಸೂರ್ ಅವರು ಮತ್ತೊಮ್ಮೆ ಆಕ್ಟ್ 1978 ಸಿನಿಮಾದಿಂದ ಯಶಸ್ಸನ್ನು ಕಂಡಿದ್ದಾರೆ. ಸುಲಭ ಕಥೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಅವರ ಪ್ರಯತ್ನಕ್ಕೆ ಎಲ್ಲೆಡೆ ಶಹಭಾಶ್ಗಿರಿ ವ್ಯಕ್ತವಾಗಿದೆ. ಈ ಆಕ್ಟ್ 1978 ಚಿತ್ರ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಬೇರೆ ನಿರ್ಮಾಪಕರಲ್ಲಿ ಭರವಸೆ ಮೂಡಿದ್ದು ಈಗ ಸಾಲು ಸಾಲು ಚಿತ್ರಗಳು ಬಿಡುಗಡೆ ಆಗುವ ಸಾಧ್ಯತೆ ಲಕ್ಷಣಗಳು ಕಾಣುತ್ತಿವೆ, ಒಟ್ಟಾರೆಯಾಗಿ ಹೇಳುವುದಾದರೆ ಯಾವುದೇ ದೊಡ್ಡ ನಟರಿಲ್ಲದೆ ಇಂತಹ ಕಷ್ಟದ ಸಂದರ್ಭದಲ್ಲಿಯೂ ಈ ಚಿತ್ರ ಮಾಡಿರುವ ಸಾಧನೆ ನಿಜಕ್ಕೂ ಶ್ಲಾಘನೀಯ.

%d bloggers like this: