ಮೈಕ್ರೋಮ್ಯಾಕ್ಸ್ ಫೋನ್ ಮತ್ತೆ ಮಾರುಕಟ್ಟೆಗೆ ನವೆಂಬರ್ 24ರಿಂದ ಹೊಸ ವಿನ್ಯಾಸ ಮತ್ತು ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ. ಮೈಕ್ರೋಮ್ಯಾಕ್ಸ್ ಇನ್ ನೋಟ್ ಒನ್ ಮತ್ತು ಮೈಕ್ರೋಮ್ಯಾಕ್ಸ್ ಇನ್ ಒನ್ಬಿ ಎಂಬ ಬ್ರಾಂಡ್ ನೊಂದಿಗೆ ಫ್ಲಿಪ್ ಕಾರ್ಟ್ ಮತ್ತು ಮೈಕ್ರೋ ಮ್ಯಾಕ್ಸಿನೋ ಎಂಬ ವೆಬ್ಸೈಟ್ ಮೂಲಕ ಮಾರಾಟಕ್ಕೆ ಸಜ್ಜಾಗಿದೆ. ಈ ಎರಡು ಮೊಬೈಲ್ ಗಳು ಅತ್ಯಂತ ಪರಿಣಾಮಕಾರಿ ಲಕ್ಷಣಗಳನ್ನು ಹೊಂದಿದ್ದು ಅಡ್ವಾನ್ಸ್ ಆಗಿವೆ ಎಂದು ಮೈಕ್ರೋಮ್ಯಾಕ್ಸ್ ಇಂಡಿಯಾದ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಫ್ಲಿಪ್ ಕಾರ್ಟ್ ಮತ್ತು ಆನ್ಲೈನ್ ನಲ್ಲಿ ನವೆಂಬರ್ ಮೂರರಿಂದ ಮುಂಗಡವಾಗಿ ಬುಕ್ಕಿಂಗ್ ಮಾಡಬಹುದಾಗಿದ್ದು ಇವುಗಳ ಬೆಲೆಯು 6.999 ರೂಗಳಿಂದ ಆರಂಭವಾಗಿ 10999 ರೂಗಳವರೆಗೂ ಲಭ್ಯವಿದೆ. ಮೈಕ್ರೋಮ್ಯಾಕ್ಸ್ ಇನ್ ನೋಟ್ ಎಂಬ ಈ ಹೊಸ ಫೀಚರ್ ಹೊಂದಿರುವ ಈ ಮೊಬೈಲ್ 6.67. ಇಂಚು ಅಗಲ ಹೊಂದಿದ್ದು ಅಲ್ಟ್ರಾ ಬೈಟ್ ಎಫ್ ಎಚ್ಡಿ ಡಿಸ್ ಪ್ಲೇ ಹೊಂದಿದೆ. ಇದರ ಸ್ಟೋರೇಜ್ 4 ಜಿಬಿ ರ್ಯಾಮ್ ಮತ್ತು 128 ಜಿಬಿ ಪ್ರೊಸೆಸರ್ ವರೆಗೂ ಸ್ಟೋರೇಜ್ ಸ್ಪೇಸ್ ಹೊಂದಿದೆ. ಇದು ವಿಶೇಷವಾಗಿ 16 ಎಂಪಿ ಮೆಗಾ ಪಿಕ್ಸೆಲ್ ವೈಡ್ ಏಂಜಲ್ ನಲ್ಲಿ ಸೆಲ್ಫಿ ಕ್ಯಾಮರಾ ಪ್ಯಾಕ್ ಮಾಡುವುದರ ಜೊತೆಗೆ 5000 Mah ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಹೊಸ ಅಪ್ಡೇಟ್ ತಂತ್ರಜ್ಞಾನದೊಂದಿಗೆ ರೂಪಿಸಲಾಗಿದೆ. ಮೈಕ್ರೋಮ್ಯಾಕ್ಸ್ ಇನ್ ಒನ್ ಬಿ ಈ ಮೊಬೈಲ್ ಕೂಡ 6.5 ಇಂಚು ಅಗಲ ಹೊಂದಿರುವ ಎಚ್ ಡಿ ಡಿಸ್ ಪ್ಲೇ ಒಳಗೊಂಡಿದೆ. 2mp ಮೆಗಾ ಫಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು 64GB ವರೆಗೂ ಸ್ಟೋರೇಜ್ ಮಾಡಬಹುದಾಗಿದೆ. ಇನ್ನು ಚಾರ್ಜಿಂಗ್ ವಿಷಯದಲ್ಲಿ 5000 mah ಬ್ಯಾಟರಿ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ.