ರಾಜಕೀಯ ರಂಗದಲ್ಲಿ ಏನೇ ಕೆಲಸ ಮಾಡಿದರೂ ಅದರ ಹಿಂದೆ ಮುಂದಿನ ಚುನಾವಣೆಯ ಉದ್ದೇಶ ಇರುವುದನ್ನು ನಾವು ಹಿಂದಿನಿಂದಲೂ ಗಮನಿಸಿದ್ದೇವೆ. ಈಪಕ್ಷ ಆಪಕ್ಷ ಎನ್ನದೆ ಎಲ್ಲ ಪಕ್ಷದ ನಾಯಕರು ಇದೇ ನಿಯಮಗಳನ್ನು ಅನುಸರಿಸುತ್ತ ಬಂದಿದ್ದಾರೆ. ಕಳೆದ ತಿಂಗಳು ನಮ್ಮ ರಾಜ್ಯದ ಮುಖ್ಯಮಂತ್ರಿ ಬಿಎಸ್ಯಡಿಯೂರಪ್ಪ ಅವರು ಮರಾಠ ಅಭಿವೃದ್ದಿ ಪ್ರಾಧಿಕಾರ ಸ್ಥಾಪಿಸುವ ಪ್ರಸ್ತಾಪವನ್ನು ಮಾಡಿದರು, ಆಗ ಇಡೀ ಕರ್ನಾಟಕವೇ ಅದನ್ನು ವಿರೋಧಿಸಿತು. ಸರ್ವ ಜನಾಂಗದ ಶಾಂತಿಯ ತೋಟ ಎಂದೇ ಕರೆಸಿಕೊಳ್ಳುವ ನಮ್ಮ ರಾಜ್ಯದಲ್ಲಿ ಒಂದು ಗುಂಪಿನ ಜನರ ಓಲೈಕೆಗೆ ಸರ್ಕಾರ ಮುಂದಾಗಿದ್ದನು ಕಂಡು ನಮ್ಮ ರಾಜ್ಯದ ಎಲ್ಲ ಜನ ಒಕ್ಕೊರಲಿನಿಂದ ಅದನ್ನು ವಿರೋಧಿಸಿದ್ದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾಪ ಮಾಡಿದ ಬೆನ್ನಲ್ಲೇ ಯಡಿಯೂರಪ್ಪ ಅವರಿಗೆ ಸಾಲುಸಾಲು ಸಮಸ್ಯೆಗಳು ಎದುರಾದವು, ಎಲ್ಲಾ ಜಾತಿಯ ಸ್ವಾಮೀಜಿಗಳು ನಾಯಕರು ತಮಗೂ ಕೂಡ ಅಭಿವೃದ್ಧಿ ಪ್ರಾಧಿಕಾರ ಬೇಕು ಎಂದು ಯಡಿಯೂರಪ್ಪ ಅವರಿಗೆ ಮುಗಿಬಿದ್ದವು, ಮುಖ್ಯಮಂತ್ರಿ ಅವರು ಮಾಡಿದ ಒಂದು ನಿರ್ಧಾರ ಅವರಿಗೆ ತಲೆಬಿಸಿಯಾಗಿ ಪರಿಣಮಿಸಿತ್ತು. ಈಗ ಮತ್ತೊಂದು ಕಂಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎದುರಾಗಿದೆ. ಹೌದು ಮರಾಠಿ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪಿಸುವ ಪ್ರಸ್ತಾಪದ ಹಿನ್ನೆಲೆಯಲ್ಲಿ ಇದೀಗ ತೆಲುಗು ವಿಜ್ಞಾನ ಸಮಿತಿ ಯಡಿಯೂರಪ್ಪ ಅವರಿಗೆ ಮನವಿ ಒಂದನ್ನು ಮಾಡಿದೆ.

ಹೌದು ಅದೇನೆಂದರೆ ನಮ್ಮ ರಾಜ್ಯದಲ್ಲಿ ತೆಲುಗು ಮಾತನಾಡುವ ತೆಲುಗಿಗರು ಸಾಕಷ್ಟಿದ್ದು ಅವರ ಏಳಿಗೆಗಾಗಿ ಸರ್ಕಾರ ತೆಲುಗು ಅಭಿವೃದ್ಧಿ ನಿಗಮವನ್ನ ಸ್ಥಾಪಿಸ ಬೇಕೆಂದು ತೆಲುಗು ವಿಜ್ಞಾನ ಸಮಿತಿ ಮನವಿ ಮಾಡಿದೆ. ತೆಲುಗು ವಿಜ್ಞಾನ ಸಮಿತಿಯ ಅಧ್ಯಕ್ಷರಾದಂತಹ ರಾಧಾಕೃಷ್ಣ ರಾಜು ಅವರು ಮಾತನಾಡಿ ತೆಲುಗು ಭಾಷಿಕರು ಕನ್ನಡ ನಾಡಿನಲ್ಲಿ ಬಹಳ ಹಿಂದಿನಿಂದಲೂ ಒಗ್ಗಟ್ಟಾಗಿ ಸಾಮರಸ್ಯದಿಂದ ಜೀವನ ನಡೆಸಿಕೊಂಡು ಬಂದಿದ್ದಾರೆ, ಶ್ರೀಕೃಷ್ಣದೇವರಾಯನ ಕಾಲದಿಂದಲೂ ಈ ಜನರಲ್ಲಿ ಬೆರೆತು ಒಂದಾಗಿ ಜೀವನ ನಡೆ ಸಿದ್ದಾರೆ, ಹೀಗಾಗಿ ತೆಲುಗು ಭಾಷಿಕರ ಅಭಿವೃದ್ಧಿಗಾಗಿ ತೆಲುಗು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತೆಲುಗು ಜನಾಂಗದವರು ಹಿಂದುಳಿದಿದ್ದು ಅವರ ಆರ್ಥಿಕ ಸಾಮಾಜಿಕ ಅಭಿವೃದ್ಧಿಯ ಅವಶ್ಯಕತೆ ತುಂಬಾ ಇದೆ ಹೀಗಾಗಿ ಅವರಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಲೆ ಬೇಕೆಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ, ಈಗಾಗಲೇ ಕನ್ನಡಿಗರಲ್ಲಿ ಬೆಂಕಿ ಹತ್ತಿದ್ದು ಈ ತೆಲುಗು ವಿಜ್ಞಾನ ಸಮಿತಿಯ ಹೊಸ ಬೇಡಿಕೆಗೆ ಯಡಿಯೂರಪ್ಪ ಅವರು ಸ್ಪಂಡಿಸುವರೋ ಅಥವಾ ಸ್ಪಂದಿಸುವುದಿಲ್ಲವೊ ಎಂಬುದನ್ನು ಕಾದುನೋಡಬೇಕು.