ಕೊರೊನಾ ಬಂದು ಒಂದು ವರ್ಷಗಳೇ ಕಳೆದಿವೆ ಆದರೆ ಆ ಮಹಾಮಾರಿ ವೈರಸ್ ಮಾತ್ರ ಕಡಿಮೆಯಾಗುತ್ತಿಲ್ಲ ಹಾಗೂ ಜನರಲ್ಲಿಯೂ ಸಹ ಭಯ ಕಡಿಮೆ ಆಗುತ್ತಿಲ್ಲ, ಈ ಜೀವನವನ್ನು ನೋಡುತ್ತಿದ್ದರೆ ಕೊರೋನ ಸಂಪೂರ್ಣವಾಗಿ ತೊಲಗಿ ಎಂದಿನಂತೆ ಜೀವನ ಶೈಲಿ ಯಾವಾಗ ಬರುತ್ತದೆ ಎಂಬುದೇ ಎಲ್ಲರಿಗೂ ಚಿಂತೆಯಾಗಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಮಾಸ್ಕ ಕಡ್ಡಾಯವಾಗಿ ಧರಿಸಲೇಬೇಕು. ಕಾರ್ಯಕ್ರಮಗಳನ್ನು ಸಹ ಬೆರಳೆಣಿಕೆಯಷ್ಟು ಜನರನ್ನು ಹೊಂದಿರುತ್ತವೆ. ಕೊರೊನ ಇಂದ ಲಕ್ಷಾಂತರ ಜನ ಕೆಲಸಗಳನ್ನು ಕಳೆದುಕೊಂಡಿದ್ದಾರೆ ಹಾಗೂ ಎಷ್ಟೋ ಉದ್ಯೋಗಿಗಳಿಗೆ ಶೇಕಡ ಅರ್ಧದಷ್ಟು ಸಂಬಳ ಕಡಿತವಾಗಿದೆ. ಇನ್ನು ಮಧ್ಯಮ ವರ್ಗದಿಂದ ಕೆಳಗಿರುವ ಜನರು ಪರಿಸ್ಥಿತಿಯಂತೂ ಕೇಳಲೇಬೇಡಿ.

ಆದರೆ ಖುಷಿಯ ವಿಚಾರ ಒಂದೇ ಅಂದರೆ ಸಪ್ಟೆಂಬರ್ ಹಾಗೂ ಅಕ್ಟೋಬರ್ ಗಿಂತ ಈಗ ಕೊರೊನ ಕೇಸ್ಗಳು ಭಾರತದಲ್ಲಿ ತೀರ ಇಳಿಮುಖ ಕಂಡಿವೆ. ನಿಧಾನವಾಗಿ ಎಲ್ಲ ವರ್ಗದ ಕಾರ್ಯ ಕಛೇರಿಗಳು ಮತ್ತೆ ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಆದರೆ ಈಗ ಬಂದಿರುವುದು ಶಾಲಾ ಕಾಲೇಜುಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಮಾರ್ಚ್ 2ನೇ ವಾರದಲ್ಲಿ ಭಾರತದಾದ್ಯಂತ ಶಾಲಾ ಕಾಲೇಜುಗಳು ಮುಚ್ಚಿದವು. ಬರೋಬ್ಬರಿ ಒಂಬತ್ತು ತಿಂಗಳಾದರೂ ಶಾಲೆ ಕಾಲೇಜು ತೆಗೆಯಲು ಆಗುತ್ತಿಲ್ಲ, ಇದರಿಂದ ಎಷ್ಟೋ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನದ ಬಗ್ಗೆ ಭಯ ಹುಟ್ಟುತ್ತಿದೆ.

ಪ್ರಾಥಮಿಕ ಶಾಲೆಯ ಮಕ್ಕಳು ಕೊರೊನ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದಿಲ್ಲ ಎಂಬ ಕಾರಣಕ್ಕೆ ಶಾಲೆಗಳನ್ನು ಸರ್ಕಾರ ತೆರೆಯುತ್ತಿಲ್ಲ ಆದರೆ ನಿಧಾನವಾಗಿ ಡಿಗ್ರಿ ಕಾಲೇಜುಗಳನ್ನು ತೆರೆಯಲು ನಿರ್ಧರಿಸಿದೆ. ಈಗ ಮಧ್ಯಪ್ರದೇಶದ ಸರ್ಕಾರ ಪ್ರಕಟಣೆಯೊಂದನ್ನು ಹೊರಡಿಸಿದ್ದು ಮಾರ್ಚ್ 31ರ ತನಕ ಮಧ್ಯಪ್ರದೇಶದಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ಶಾಲೆಗಳನ್ನು ಬಿಲ್ಕುಲ್ ತೆಗೆಯುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಅಂದರೆ ಮಧ್ಯಪ್ರದೇಶ ರಾಜ್ಯದಲ್ಲಿ ಇನ್ನೂ ನಾಲ್ಕು ತಿಂಗಳು ಶಾಲೆಗಳು ಬಾಗಿಲು ಮುಚ್ಚಿರುತ್ತದೆ.

ಇತ್ತ ಕರ್ನಾಟಕ ಸರ್ಕಾರದ ಬಗ್ಗೆ ಹೇಳುವುದಾದರೆ ಕಳೆದ ತಿಂಗಳೇ ನಮ್ಮ ರಾಜ್ಯ ಸರ್ಕಾರ ಡಿಸೆಂಬರ್ ಅಂತ್ಯದ ವರೆಗೆ ಶಾಲೆಗಳನ್ನು ತೆರೆಯಲ್ಲ ಎಂದು ಹೇಳಿದ್ದು ಡಿಸೆಂಬರ್ ಕೊನೆಯ ವಾರದಲ್ಲಿ ಮತ್ತೆ ಸಭೆ ಕರೆದು ಪರಿಸ್ಥಿತಿಗನುಗುಣವಾಗಿ ಮುಂದಿನ ಹೇಳಿಕೆ ನೀಡುತ್ತೇವೆ ಎಂದು ಹೇಳಿದ್ದಾರೆ. ಕೊರೊನಾದಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂಬುದು ಎಷ್ಟು ನಿಜವೋ ಈಗ ಶಾಲೆಗಳನ್ನು ತೆರೆದರೆ ವೈರಸ್ ಅಪಾಯ ಕಾದಿದೆ ಎಂಬುದು ಅಷ್ಟೇ ನಿಜ. ಶಾಲೆಗಳನ್ನು ತೆರೆಯುತ್ತಿದೆ ಇಲ್ಲವೋ ಎಂಬುದು ಗೊತ್ತಾಗಲಿದೆ.