ಮಾರ್ಚ್ ಮೊದಲ ವಾರದಲ್ಲಿ ಥಿಯೇಟರ್ಗೆ ಬರಲಿದೆ ದಾನಿಶ್ ಸೇಠ್ ಅವರ ಹೊಸ ಕನ್ನಡ ಚಿತ್ರ 

ಐಪಿಎಲ್ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ವಿಭಿನ್ನವಾಗಿ ಸಂದರ್ಶನ ಮಾಡುವ ದಾನಿಶ್ ಸೇಠ್ ಕ್ರಿಕೆಟ್ ಅಭಿಮಾನಿಗಳಿಗೆ ಚಿರಪರಿಚಿತ. ಹೆಚ್ಚಾಗಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ದಾನಿಶ್ ಅವರು, ಸೋಶಿಯಲ್ ಮೀಡಿಯಾ ಗಳಲ್ಲಿ ತಮ್ಮದೇ ಆದ ಸ್ಟೈಲ್ ನಲ್ಲಿ ಕಾಮಿಡಿ ವಿಡಿಯೋ ಮಾಡುತ್ತಾ ಜನಪ್ರಿಯರಾಗಿದ್ದರು. ಇತ್ತೀಚೆಗೆ ರಕ್ಷಿತ್ ಶೆಟ್ಟಿ ನಿರ್ಮಿಸಿದ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಸಿನಿಮಾ ಕ್ರಿಕೆಟ್ ಹಾಗೂ ಸೋಶಿಯಲ್ ಮೀಡಿಯಾ ಮೂರು ಕ್ಷೇತ್ರಗಳಲ್ಲಿ ಸದಾ ಆಕ್ಟಿವ್ ಆಗಿರುವ ದಾನಿಶ್ ಅವರು, ಒಟಿಟಿಯಲ್ಲೂ ಫೇಮಸ್ ಆಗಿದ್ದಾರೆ. ಇವರ ಹಲವಾರು ಸಿನಿಮಾ ಮತ್ತು ವೆಬ್ ಸಿರೀಸ್ ಗಳು ಅಮೆಜಾನ್ ಪ್ರೈಮ್ ಸೇರಿದಂತೆ ಹಲವು ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಿವೆ.

ಹಂಬಲ್ ಪೊಲಿಟಿಷಿಯನ್ ನೊಗರಾಜ್ ಚಿತ್ರದಲ್ಲಿ ಜನರು ಇವರ ಕಾಮಿಡಿಯನ್ನು ಮೆಚ್ಚಿಕೊಂಡಿದ್ದಾರೆ. ತಮ್ಮ ವೆಬ್ ಸೀರಿಸ್ ಹಾಗೂ ಕಾಮಿಡಿ ವಿಡಿಯೋಗಳ ಮೂಲಕ ಸದ್ದಿಲ್ಲದೆ ಸಿನಿಮಾವೊಂದರಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಹೌದು ಸದ್ಯಕ್ಕೆ ದಾನಿಶ್ ಸೇಠ್ ಅಭಿನಯದ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ರಿಲೀಸ್ ಗಾಗಿ ಕಾಯುತ್ತಿದ್ದಾರೆ. ಇದನ್ನು ತಿಳಿದ ಸ್ಯಾಂಡಲ್ ಮಂದಿ ದಾನಿಶ್ ಸೇಠ್ ಅವರು ಸೋಲ್ಡ್ ಆಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ದಾನಿಶ್ ಅವರು ಯಾವುದೇ ಐಪಿಎಲ್ ಹರಾಜಿನಲ್ಲಿ ಅಥವಾ ಸಿನಿಮಾದಲ್ಲಿ ಸೋಲ್ಡ್ ಆಗಿಲ್ಲ. ಬದಲಾಗಿ ದಾನಿಶ್ ಅವರು ನಟಿಸುತ್ತಿರುವ ಚಿತ್ರದ ಹೆಸರೇ ‘ಸೋಲ್ಡ್’. ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಈ ಸಿನಿಮಾದಲ್ಲಿ ದಾನಿಶ್ ಅವರು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

ಯಾವಾಗಲೂ ಕಾಮಿಡಿ ಪಾತ್ರಗಳನ್ನು ಆರಿಸಿಕೊಳ್ಳುತ್ತಿದ್ದ ದಾನೀಶ್ ಅವರು ಈ ಬಾರಿ ತ್ರಿಲ್ಲರ್ ಪಾತ್ರವನ್ನು ಆಯ್ಕೆಮಾಡಿಕೊಂಡಿದ್ದಾರೆ. ಹಂಬಲ್ ಪೊಲಿಟಿಷಿಯನ್ ನಾಗರಾಜ್ ಚಿತ್ರದಲ್ಲಿ ರಾಜಕಾರಣಿಯ ಪಾತ್ರ ನಿರ್ವಹಿಸಿದರೂ ಕಾಮಿಡಿ ಟಚ್ ನೀಡಲಾಗಿತ್ತು. ಆದರೆ ಈ ಬಾರಿ ವಿಭಿನ್ನವಾಗಿ ಈ ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದಾರೆ. ಸೋಲ್ಡ್ ಚಿತ್ರವು ಮಾನವ ಕಳ್ಳಸಾಗಾಣಿಕೆಯ ಕುರಿತಾದ ಚಿತ್ರವಾಗಿದ್ದು, ಈ ಸಿನಿಮಾಗೆ ಥ್ರಿಲ್ಲರ್ ಟಚ್ ನೀಡಲಾಗಿದೆ. ವಿಶೇಷವೆಂದರೆ ಈ ಸಿನಿಮಾವನ್ನು ನಿರ್ದೇಶಿಸುತ್ತಿರುವುದು ಪ್ರೇರಣಾ ಅಗರ್ವಾಲ್. ದಾನಿಶ್ ಅವರು ಇದೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದ ಮೂಲಕ ಮತ್ತೊಬ್ಬ ಮಹಿಳಾ ನಿರ್ದೇಶಕಿ ಕನ್ನಡ ಚಿತ್ರರಂಗಕ್ಕೆ ಬಂದಂತಾಗಿದೆ.

ಈ ಚಿತ್ರದಲ್ಲಿ ದಾನಿಶ್ ಸೇಠ್ ಗೆ ನಾಯಕಿಯಾಗಿ ಕಾವ್ಯಾ ಶೆಟ್ಟಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರವನ್ನು ಕಾವ್ಯಾ ಶೆಟ್ಟಿ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೈಲರ್ ಎಲ್ಲರ ಗಮನಸೆಳೆಯುತ್ತಿದೆ. ಮುಂದಿನ ತಿಂಗಳು ಮಾರ್ಚ್ 4ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಒಂದೇ ತಿಂಗಳ ಅಂತರದಲ್ಲಿ ದಾನಿಶ್ ಅಭಿನಯದ ಎರಡು ಸಿನಿಮಾಗಳು ರಿಲೀಸ್ ಆದಂತಾಗುತ್ತದೆ. ಹೌದು ಕೆಲದಿನಗಳ ಹಿಂದೆ ದಾನಿಶ್ ನಟನೆಯ ಒನ್ ಕಟ್ ಟು ಕಟ್ ಚಿತ್ರ ಬಿಡುಗಡೆಯಾಗಿದೆ. ಸೋಲ್ಡ್ ಸಿನಿಮಾವು ಸಸ್ಪೆನ್ಸ್, ಕ್ರೈಂ, ಥ್ರಿಲ್ಲರ್ ಆಗಿರುವುದರಿಂದ ಬಹುತೇಕ ಡಾರ್ಕ್ ಶೇಡ್ ಗಳಲ್ಲಿಯೇ ಈ ಸಿನಿಮಾ ಸಾಗಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ ಸೋಲ್ಡ್ ಚಿತ್ರತಂಡ.

%d bloggers like this: