ಮಾರ್ಚ್ ತಿಂಗಳು ಈ‌ ರಾಶಿಯವರಿಗೆ ಲಾಭ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು

ಈ 2022ನೇ ವರ್ಷದ ಮಾರ್ಚ್ ತಿಂಗಳಿನಲ್ಲಿ ದ್ವಾದಶ ರಾಶಿ ಚಕ್ರಗಳಲ್ಲಿ ಅತ್ಯಂತ ಪ್ರಮುಖ ರಾಶಿ ಆಗಿರುವ ಈ ರಾಶಿಯ ವ್ಯಕ್ತಿಗಳಿಗೆ ನಿರೀಕ್ಷೆಗೂ ಮೀರಿದ ಶುಭಫಲಗಳು ಎದುರಾಗಲಿದೆ. ಹೌದು ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಯ ಆಧಾರದ ಮೇಲೆ ವ್ಯಕ್ತಿಗಳ ಜೀವನದಲ್ಲಿ ಸಂಭವಿಸುವಂತಹ ಮತ್ತು ಸಂಭವಿಸಬಹುದಾದಂತಹ ಒಳಿತು ಕೆಡುಕುಗಳನ್ನು ತಿಳಿಸಿಲಾಗುತ್ತದೆ. ಇದನ್ನ ಎಲ್ಲಾರು ನಂಬಬೇಕು ಎಂದು ಹೇಳಲಾಗುವುದಿಲ್ಲ. ಜ್ಯೋತಿಷ್ಯದ ಮೇಲೆ ಇರುವ ನಂಬಿಕೆಯು ಆಯಾಯ ವ್ಯಕ್ತಿಯ ಅವರವರ ವೈಯಕ್ತಿಕ ಅನಿಸಿಕೆ ಅಭಿಪ್ರಾಯವಾಗಿದ್ದು, ಅವರವರ ಭಾವಕ್ಕೆ ಭಕ್ತಿಗೆ ಒಳಪಟ್ಟಿರುತ್ತದೆ. ಹಾಗಾದರೆ ಈ ಆರಂಭವಾಗುವ ಮಾರ್ಚ್ ತಿಂಗಳಿನಲ್ಲಿ ಬಹುತೇಕ ಶುಭಫಲಗಳನ್ನೇ ಅನುಭವಿಸುವ ಆ ರಾಶಿಯ ವ್ಯಕ್ತಿಗಳು ಯಾರೆಂದು ತಿಳಿಯುವುದಾದರೆ.

ಹೌದು ದ್ವಾದಶ ರಾಶಿ ಚಕ್ರಗಳಲ್ಲಿ ಪ್ರಥಮ ರಾಶಿಯಾಗಿರುವ ಮೇಷ ರಾಶಿಯ ವ್ಯಕ್ತಿಗಳಿಗೆ ಈ ಮಾರ್ಚ್ ತಿಂಗಳಿನಿಂದ ನಿರೀಕ್ಷೆಗೂ ಮೀರಿದ ಒಳ್ಳೆಯ ಸಂಗತಿಗಳನ್ನು ಅನುಭವಿಸುತ್ತಾರೆ. ಈ ರಾಶಿಯ ವ್ಯಕ್ತಿಗಳು ತಮ್ಮ ಉದ್ಯೋಗದಲ್ಲಿ ಬಡ್ತಿ ಪಡೆಯಲು ಬಹುತೇಕ ವರ್ಷಗಳಿಂದ ಶ್ರಮ ಪಡುತ್ತಲೇ ಇರುತ್ತಾರೆ. ಆದರೆ ಇವರ ಶ್ರಮಕ್ಕೆ ಬೆಂಬಲ ದಕ್ಕುತ್ತಿರಲಿಲ್ಲ. ಆದರೆ ಮಾರ್ಚ್ ತಿಂಗಳಿನಲ್ಲಿ ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಅದರಂತೆ ಈ ರಾಶಿಯ ಜನರ ಜೀವನದಲ್ಲಿ ಹೊಸದೊಂದು ತಿರುವು ಕಾಣಬಹುದಾಗಿರುತ್ತದೆ. ಮಾರ್ಚ್ ತಿಂಗಳ ಮಧ್ಯಂತರದಲ್ಲಿ ಮೇಷ ರಾಶಿಯ ವ್ಯಕ್ತಿಗಳ ಜೀವನದಲ್ಲಿ ಅವರ ದಿಕ್ಕನ್ನ ಬದಲಾಯಿಸಬಹುದಾದ ವ್ಯಕ್ತಿ ಪರಿಚಯವಾಗಲಿದ್ದಾರೆ. ಇವರಿಂದ ನಿಮ್ಮ ಜೀವನ ಉತ್ತಮ ದಿಕ್ಕಿನಲ್ಲಿ ಸಾಗುತ್ತದೆ. ಆದಷ್ಟು ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ನಿಮ್ಮ ನಿರ್ದಿಷ್ಟ ಗುರಿಯತ್ತ ಗಮನ ಹರಿಸಿ ಅಂದುಕೊಂಡಂತೆ ಎಲ್ಲವೂ ಕೂಡ ಒಳಿತೇ ಆಗುತ್ತದೆ.

ಇನ್ನು ವ್ಯಾಪಾರ ವಹಿವಾಟು ನಡೆಸುವ ವ್ಯಕ್ತಿಗಳಿಗೆ ಮಾರ್ಚ್ ತಿಂಗಳಿನಿಂದ ಉತ್ತಮ ಆದಾಯ ಹರಿದು ಬರಲಿದೆ. ವಿಧ್ಯಾರ್ಥಿಗಳ ಜೀವನದಲ್ಲಿ ಪ್ರಗತಿ ಕಾಣಲಿದೆ. ಅದೇ ರೀತಿಯಾಗಿ ಪ್ರೀತಿಸುತ್ತಿರುವ ವ್ಯಕ್ತಿಗಳಿಗೆ ಪೋಷಕರಿಂದ ಸಮ್ಮತಿ ದೊರೆತು ನಿಮ್ಮ ಮದುವೆಗೆ ಹಸಿರು ನಿಶಾನೆ ಸಿಗಲಿದೆ ಎನ್ನಬಹುದು. ಈ ರಾಶಿಯವರು ಆರ್ಥಿಕವಾಗಿ ಬಹುತೇಕ ಅಭಿವೃದ್ದಿ ಕಾಣಲಿದ್ದಾರೆ ಎನ್ನಬಹುದು. ಆದರೆ ಪೂರ್ವಾರ್ಜಿತ ಆಸ್ತಿ ಪಾಸ್ತಿಗಳ ಹಂಚಿಕೆಯಲ್ಲಿ ವ್ಯಾಜ್ಯ ಆರಂಭವಾಗುವ ಸಾಧ್ಯತೆ ಇರುತ್ತದೆ. ಆದಷ್ಟು ಸೌಹಾರ್ದತೆಯಿಂದ ಕೂತು ಬಗೆಹರಿಸಿಕೊಂಡರೆ ಉತ್ತಮ ಎಂದು ತಿಳಿಸುತ್ತಾರೆ. ಇನ್ನು ಅನಾರೋಗ್ಯದಲ್ಲಿದ್ದ ಸಂಕಟ ಪಡುತ್ತಿದ್ದ ಮನೆಯ ಹಿರಿಯ ಸದಸ್ಯರು ಚೇತರಿಕೆ ಕಂಡು ಮನೆಯಲ್ಲಿ ಕೊಂಚ ಸಮಾಧಾನಕರ ವಾತಾವರಣ ನಿ ರ್ಮಾಣ ಆಗಲಿದೆ. ಒಟ್ಟಾರೆಯಾಗಿ ಮಾರ್ಚ್ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಬಹುತೇಕ ಶುಭಫಲಗಳು ಲಭಿಸಲಿದೆ.

%d bloggers like this: