ಮಾರುತಿ ಸುಜುಕಿಯ ಹೊಸ ಕಾರಿಗೆ ಭಾರಿ ಬೇಡಿಕೆ, ಒಂದೇ ತಿಂಗಳಲ್ಲಿ ಬರೊಬ್ಬರಿ 15 ಸಾವಿರ ಜನ ಬುಕ್ಕಿಂಗ್

ಇತ್ತೀಚೆಗೆ ಕಾರು ಮಾರಕಟ್ಟೆಯಲ್ಲಿ ಅನೇಕ ವಿದೇಶಿ ಕಂಪನಿಯ ಹೊಸ ಹೊಸ ಕಾರುಗಳು ಭಾರತೀಯ ಮಾರಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ವಿದೇಶಿ ಮತ್ತು ಸ್ವದೇಶಿ ಕಂಪನಿಗಳ ಐಷಾರಾಮಿ ದುಬಾರಿ ಕಾರುಗಳ ನಡುವೆ ಮಾರುತಿ ಸುಜುಕಿಯ ಸೆಲೆರಿಯೋ ಕಾರು ಕೂಡ ಕಳೆದ ತಿಂಗಳಷ್ಟೇ ಲಾಂಚ್ ಆಗಿದೆ. ಈ ಸೆಲಿರಿಯೋ ಕಾರು ಬಿಡುಗಡೆಯಾದ ಒಂದೇ ತಿಂಗಳಲ್ಲಿ ಬರೋಬ್ಬರಿ ಹದಿನೈದು ಸಾವಿರಕ್ಕೂ ಹೆಚ್ಚು ಯುನಿಟ್ ಗಳ ಮುಂಗಡ ಕಾಯ್ದಿರಿಸುವಿಕೆ ಮಾಡಿಕೊಂಡಿದೆ. ಈ ಸಿಲಿರಿಯೋ ಕಾರಿನಲ್ಲಿ ಹನ್ನೆರಡಕ್ಕೂ ಹೆಚ್ಚು ಸುರಕ್ಷತಾ ಫೀಚರ್ ಗಳಿವೆಯಂತೆ. ಆಧುನಿಕ ಕಾಲಕ್ಕೆ ತಕ್ಕಂತೆ ಎಲ್ಲಾ ರೀತಿಯ ಅಡ್ವಾನ್ಸ್ಸ್ಡ್ ಟೆಕ್ನಾಲಜಿಯನ್ನು ಹೊಂದಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನ್ಯೂ ಜನರೇಶನ್ ಸಿಲಿರಿಯೋ ಕಾರು ಪೆಟ್ರೋಲ್ ಮಾದರಿಯಲ್ಲಿ ಹೆಚ್ಚು ಮೈಲೇಜ್ ನೀಡುತ್ತದೆಯಂತೆ.

ಈ ಕಾರು ಹೆಚ್ಚು ಮೈಲೇಜ್ ನೀಡುತ್ತದೆ ಎಂಬ ಕಾರಣದಿಂದಲೇ ಈ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆಯಂತೆ. ಸೆಲೆರಿಯೋ ಹ್ಯಾಚ್,ಬ್ಯಾಕ್ ಮಾದರಿಯು ಎಲ್.ಎಕ್ಸ್.ಐ. ವಿ.ಎಕ್ಸ್ ಐ ಮತ್ತು ಜೆ಼ಢ್ ಎಕ್ಸ್ ಐಪ್ಲಸ್ ಸೇರಿದಂತೆ ವಿವಿಧ ವೇರಿಯೆಂಟ್ ಗಳಲ್ಲಿ ದೊರೆಯುತ್ತದೆ. ಈ ಕಾರಿನ ಆರಂಭಿಕ ಶೋ ರೂಮಿನ ಬೆಲೆ 4.99 ಲಕ್ಷ ರೂಗಳಿಂದ ಆರಂಭವಾಗಿ ಟಾಪ್ ಎಂಡ್ ಮಾಡೆಲಿನ 6.94 ಲಕ್ಷ ರೂಗಳವರೆಗೆ ಇದೆ. ಈ ಹೊಸ ಮಾರುತಿ ಸುಜುಕಿ ನ್ಯೂ ಜನರೇಶನ್ ಸೆಲೆರಿಯೋ ಕಾರಿನಲ್ಲಿ ಕೆಟೆನ್ಸಿ ಡ್ಯೂಯಲ್ ಜೆಟ್ 1.0 ಲೀಟರಿನ ಸಿಲಿಂಡರ್ ಪೆಟ್ರೋಲ್ ‌ಎಂಜಿನ್ ಹೊಂದಿದ್ದು, ಹೆಚ್ಚಿನ ಇಂಧನ ದಕ್ಷತೆಯನ್ನೊಂದಿದೆ. ಫೈವ್ ಸ್ಪೀಡ್ ಆಟೋ ಮ್ಯಾನ್ಯೂವಲ್ ಗೇರ್ ಬಾಕ್ಸ್ ಆಯ್ಕೆಯನ್ನೊಂದಿದ್ದು 24.97 ಕಿಮೀ ಮೈಲೇಜ್ ನೀಡುತ್ತದೆ.

ತನ್ನ ಎಲ್ಲಾ ಪ್ರತಿಸ್ಪರ್ಧಿ ಕಾರುಗಳಿಗೆ ಈ ಮಾರುತಿ ಸುಜುಕಿ ಸೆಲೆರಿಯೋ ಕಾರು ಭಾರಿ ಪೈಪೋಟಿ ನೀಡುವುದರಲ್ಲಿ ಅನುಮಾನವೇ ಇಲ್ಲ. ಈ ಕಾರಿನ ವಿನ್ಯಾಸ ಇದರ ಅಳತೆಗಳನ್ನು ತಿಳಿಯುವುದಾದರೆ 3,695 ಎಂಎಂ ಉದ್ದ 1655 ಎಂಎಂ ಅಗಲ 1555 ಎಂಎಂ ಎತ್ತರ 2435 ಎಂಎಂ ವ್ಹೀಲ್ ಬೇಸ್ ಅನ್ನು ಒಳಗೊಂಡಿದೆ. ಈ ಸೆಲೆರಿಯಾ ಕಾರು ಒಟ್ಟಾರೆಯಾಗಿ ಏಳು ರೀತಿಯ ವೇರಿಯೆಂಟ್ ಗಳಲ್ಲಿ ದೊರೆಯುತ್ತದಂತೆ ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಗ್ಲಿಸ್ಟೆನಿಂಗ್ ಗ್ರೇ, ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ , ಕೆಫೀನ್ ಬ್ರೌನ್ ಸಿಂಗಲ್ ಟೋನ್ ನಲ್ಲಿ ಲಭ್ಯವಿದೆ. ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಂಪನಿಯು 7.0 ಇಂಚಿನ ಸ್ಮಾರ್ಟ್ ಪ್ಲೇ ಸ್ಟೂಡಿಯೋ ಇನ್ಫೋಟೈನ್ ಮೆಂಟ್ ವ್ಯವಸ್ಥೆಯನ್ನು ಕೂಡ ಸೆಲೆರಿಯೋ ಕಾರಿನಲ್ಲಿ ಅಳವಡಿಸಿದೆ.

ಇನ್ನು ಮುಖ್ಯವಾಗಿ ಸೆಲೆರಿಯೋ ಕಾರಿನ ಸುರಕ್ಷತೆಯ ಫೀಚರ್ ತಿಳಿಯುವುದಾದರೆ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ ಬ್ರೇಕ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಜೊತೆಗೆ ಹಿಲ್ ಹೋಲ್ಡ್ ಅಸಿಸ್ಟ್ ಹೋಲ್ಡ್ ಫೀಚರ್ ಅಳವಡಿಸಲಾಗಿದೆ. ಈ ಕಾರಿಗಾಗಿ ಈಗಾಗಲೇ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಗ್ರಾಹಕರು ಅಡ್ವಾನ್ಸ್ ಬುಕಿಂಗ್ ಮಾಡಿದ್ದು ಮಾರುತಿ ಸುಜುಕಿ ಕಂಪನಿಯ ಈ ಸೆಲೆರಿಯೋ ಕಾರನ್ನ ವಿತರಣೆ ಮಾಡಲು ಒಂದು ತಿಂಗಳ ಕಾಲಾವಕಾಶ ಪಡೆದಿದೆ ಎಂದು ತಿಳಿದು ಬಂದಿದೆ.

%d bloggers like this: