ಮಾಸ್ಕ್ ಹಾಕದಿದ್ದಕ್ಕೆ ಅಮಿರ್ ಖಾನ್ ಅವರಿಗೆ ಮಂಗಳಾರತಿ ಮಾಡಿದ

ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್ ಗೆ ಕರೆಕ್ಷನ್ ಮಾಡಿದ ಟ್ವಿಟ್ಟಿಗರು! ಸಾರ್ವಜನಿಕ ಜೀವನದಲ್ಲಿ ಇರುವ ಸೆಲೆಬ್ರಿಟಿಗಳು ಕುಂತರು, ನಿಂತರೂ ಸುದ್ದಿಯಾಗುತ್ತದೆ. ಅಂದ ಮೇಲೆ ಸಾರ್ವಜನಿಕ ವೇದಿಕೆ, ಸ್ಥಳಗಳಲ್ಲಿ ಕಾಣಿಸಿಕೊಂಡಾಗ, ಅವರ ವೇಷಭೂಷಣ, ನಡವಳಿಕೆ, ಹೇಳಿಕೆಗಳ ಮೇಲೆ ಬಹಳ ಎಚ್ಚರಿಕೆಯಿಂದಲೇ ಇರಬೇಕು. ಇಲ್ಲವಾದಲ್ಲಿ ಟ್ರೋಲಿಗರಿಗೆ ಆಹಾರವಾಗುವುದು ತಪ್ಪಲ್ಲ. ಅದೇ ರೀತಿ ಈ ಭಾರಿ ನೆಟ್ಟಿಗರಿಗೆ ತಗ್ಲಾಕೊಂಡಿದ್ದು ಬಾಲಿವುಡ್ ನ ಪ್ರಖ್ಯಾತ ನಟ ಮಿಸ್ಟರ್ ಪರ್ಫೆಕ್ಟ್ ಎಂದೇ ಕರೆಸಿಕೊಳ್ಳುವ ಅಮೀರ್ ಖಾನ್ ತಮ್ಮ ಬೇಜವಬ್ದಾರಿತನದಿಂದ ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚೆಗೇ ಅಮೀರ್ ಖಾನ್ ಅವರು ತಮ್ಮ ಮನೆಯ ಬಳಿ ಒಂದಷ್ಟು ಹುಡುಗರು ಕ್ರಿಕೆಟ್ ಆಡುವುದನ್ನು ನೋಡಿ ತಾವು ಸಹ ಅವರ ಜೊತೆ ಗಲ್ಲಿಕ್ರಿಕೆಟ್ ಆಡಲು ಫೀಲ್ಡ್ ಗಿಳಿದಿದ್ದಾರೆ. ಇದು ತಪ್ಪಲ್ಲ ಆದರೆ ಮಾಸ್ಕ್ ಹಾಕದೆ ಬ್ಯಾಟಿಂಗ್ ಆಡುತ್ತಿದ್ದಾರೆ. ಇದು ಅಷ್ಟು ಸುದ್ದಿ ಕೂಡ ಆಗುತ್ತಿರಲಿಲ್ಲ ಯಾವಾಗ ಈ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡರೋ ಅಲ್ಲಿಂದ ನೆಟ್ಟಿಗರು ಈ ಫೋಟೋ ನೋಡಿ ಅಪಹಾಸ್ಯವಾಗಿ ವ್ಯಂಗ್ಯ ಮಾಡಿದ್ದಾರೆ.

ಅಮೀರ್ ಖಾನ್ ಅವರು ಕೊರೋನ ಲಸಿಕೆ ಪಡೆದಿರಬೇಕು ಎಂದು ಒಂದು ಕಡೆ ವ್ಯಂಗ್ಯ ಮಾಡಿದರೆ, ಮತ್ತೊಂದೆಡೆ ಅಮೀರ್ ಖಾನ್ ಅವರಿಗೆ ಈ ಸಮಯದಲ್ಲಿ ಮಾಸ್ಕ್ ಹಾಕಿಕೊಳ್ಳುವ ಅವಶ್ಯಕತೆ ಇಲ್ಲವೇ ಎಂಬ ಪ್ರಶ್ನೆಯನ್ನ ಎತ್ತಿದ್ದಾರೆ. ಇನ್ನೊಂದೆಡೆ ಅಮೀರ್ ಖಾನ್ ಅವರನ್ನು ಅವರ ಅಭಿಮಾನಿಗಳು ಕ್ರಿಕೆಟ್ ಆಡುವಾಗ ಮಾಸ್ಕ್ ಏಕೆ ಹಾಕಬೇಕು, ಅದರಿಂದ ಉಸಿರಾಡಲು ಕಷ್ಟವಾಗುವುದಿಲ್ಲವೇ ಎಂದು ತಮ್ಮ ನೆಚ್ಚಿನ ನಟನನ್ನು ಅಭಿಮಾನಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ. ಇನ್ನು ಕಳೆದ ಬಾರಿ ಅಮೀರ್ ಖಾನ್ ಅವರು ಶೂಟಿಂಗ್ ನಿಮಿತ್ತ ಟರ್ಕಿ ದೇಶಕ್ಕೆ ಹೋಗಿದ್ದಾಗ ಅಲ್ಲಿನ ಅಧ್ಯಕ್ಷರ ಪತ್ನಿಯೊಂದಿಗೆ ಫೋಟೋ ತೆಗಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಆ ಸಂಧರ್ಭದಲ್ಲಿಯೂ ಸಹ ಅಮೀರ್ ಖಾನ್ ಮಾಸ್ಕ್ ಹಾಕಿಕೊಳ್ಳದೆ ಇದ್ದುದ್ದರಿಂದ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.

%d bloggers like this: