ಮತ್ತೊಮ್ಮೆ ಗೆದ್ದ ರಕ್ಷಿತ್ ಶೆಟ್ಟಿ ಅವರು, 24 ದಿನದಲ್ಲಿ ಅವರ 777ಚಾರ್ಲಿ ಚಿತ್ರ ಗಳಿಸಿರುವ ಹಣ ಎಷ್ಟು ಗೊತ್ತೇ

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿ ಭರ್ಜರಿಯಾಗಿ ಇಪ್ಪತ್ತೈದು ದಿನಗಳನ್ನು ಪೂರೈಸಿದೆ. ಕೆಜಿಎಫ್2 ಚಿತ್ರದ ನಂತರ ಕನ್ನಡದಲ್ಲಿ ರಿಲೀಸ್ ಆದ ಪ್ಯಾನ್ ಇಂಡಿಯಾ ಸಿನಿಮಾ ಆಗಿ ರಿಲೀಸ್ ಆಗಿರುವ ಸಿನಿಮಾ ಅಂದ್ರೆ ಅದು 777 ಚಾರ್ಲಿ ಚಿತ್ರ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಭಾಂಧವ್ಯ ಕುರಿತು ಕಥೆ ಎಣೆಯಲಾದ ಈ ಚಿತ್ರಕ್ಕೆ ಕಿರಣ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್2 ಚಿತ್ರ ವರ್ಲ್ಡ್ ವೈಡ್ ಬರೋಬ್ಬರಿ 1300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಮೈಲಿಗಲ್ಲನ್ನ ಸೃಷ್ಟಿ ಮಾಡಿತ್ತು. ಇದೇ ರೀತಿಯಾಗಿ ಭಾರಿ ನಿರೀಕ್ಷೆ ಹುಟ್ಟು ಹಾಕಿದ ಸಿನಿಮಾ 777 ಚಾರ್ಲಿ ಸಿನಿಮಾ. ಪಂಚ ಭಾಷೆಗಳಲ್ಲಿ ರಿಲೀಸ್ ಆದ ಈ ಚಿತ್ರ ಕೂಡ ಕೆಜಿಎಫ್ ಅಂತೆಯೇ ದಾಖಲೆಯ ಕಲೆಕ್ಷನ್ ಮಾಡುತ್ತದೆ ಎಂದು ಸಿನಿಪ್ರಿಯರು ಅಂದಾಜಿಸಿದ್ದರು.

ಆದರೆ ಕೆಲವು ಗೊಂದಲ ಮೂಡಿತ್ತು. ಯಾಕೆಂದರೆ ಕೆಜಿಎಫ್ ಸರಣಿ ಸಿನಿಮಾ ಮಾಸ್ ಜಾನರ್ ಆಗಿತ್ತು. ಅದಲ್ಲದೆ ಕೆಜಿಎಫ್2 ಚಿತ್ರಕ್ಕೆ ಕೆಜಿಎಫ್ ಭಾಗ1ರ ಪ್ರಭಾವ ಇತ್ತು. ಕೆಜಿಎಫ್1 ನೋಡಿದ ಪ್ರೇಕ್ಷಕರಿಗೆ ಭಾಗ2 ನೋಡಬೇಕು ಅನ್ನೋ ಕುತೂಹಲ ಇತ್ತು. ಆದರೆ 777 ಚಾರ್ಲಿ ಚಿತ್ರಕ್ಕೆ ಈ ರೀತಿಯ ಅಡ್ವಾಂಟೇಜ್ ಇರಲಿಲ್ಲ. ಇದೆಲ್ಲದರ ನಡುವೆ ಕೂಡ ಚಾರ್ಲಿ ಚಿತ್ರ ಟ್ರೇಲರ್ ನಿಂದಾನೇ ಭಾರಿ ನಿರೀಕ್ಷೆ ಹುಟ್ಟು ಹಾಕಿತ್ತು. ಅದರಂತೆ 777 ಚಾರ್ಲಿ ರಿಲೀಸ್ ಅಗಿ ಎಲ್ಲೆಡೆ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತದೆ. ದೇಶ ಮಾತ್ರ ಅಲ್ಲದೆ ಹೊರ ದೇಶದಲ್ಲಿ ಕೂಡ ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ಭಾವುಕರಾಗಿ ಚಾರ್ಲಿ ಚಿತ್ರಕ್ಕೆ ಜೈಕಾರ ಹೇಳಿದ್ದಾರೆ. ಇದೀಗ 777 ಚಾರ್ಲಿ ಸಿನಿಮಾ ಯಶಸ್ವಿ 25 ದಿನಗಳನ್ನ ಪೂರೈಸಿದೆ. ಈ ಸಂಭ್ರಮದ ಹಿನ್ನೆಲೆಯಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ಕರೆದು ಬಾಕ್ಸ್ ಅಫೀಸ್ ನಲ್ಲಿ ಚಾರ್ಲಿ ಮಾಡಿದ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಟ ಕಮ್ ನಿರ್ಮಾಪಕ ರಕ್ಷಿತ್ ಶೆಟ್ಟಿ ಮಾತನಾಡಿ ಚಾರ್ಲಿ ಚಿತ್ರ ಇದುವರೆಗೆ 150 ಕೋಟಿ ಗಳಿಕೆ ಮಾಡಿದೆ.

ಇದರಲ್ಲಿ ನೂರು ಕೋಟಿಯಷ್ಟು ಹಣ ನಿರ್ಮಾಪಕರಿಗೆ ಸಿಗುತ್ತದೆ. ಇದರಲ್ಲಿ ಶೇಕಡ 10ರಷ್ಟು ಲಾಭಾಂಶವನ್ನು ನಮ್ಮ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ನೀಡಲಾಗುತ್ತದೆ. ಮತ್ತು ಶೇಕಡ 5ರಷ್ಟು ಲಾಭಾಂಶವನ್ನು ಚಾರ್ಲಿ ಹೆಸರಲ್ಲಿ ಬ್ಯಾಂಕ್ ನಲ್ಲಿಟ್ಟು ಅದರಲ್ಲಿರುವ ಬರುವ ಬಡ್ಡಿ ರೂಪದ ಹಣವನ್ನು ನಷ್ಟದಲ್ಲಿರುವ ಎನ್.ಜಿ.ಓ ಸಂಸ್ಥೆಗೆ ಪ್ರತಿ ತಿಂಗಳು ನೀಡುವ ಯೋಜನೆ ಇದೆ ಎಂದು ತಿಳಿಸಿದ್ದಾರೆ. ಇನ್ನು ಇಪ್ಪತ್ತೈದು ದಿನಗಳ ಸಂಭ್ರಮ ಮಾತ್ರ ಅಲ್ಲ ನಾವು ಐವತ್ತು ದಿನಗಳ ಸಂಭ್ರಮ ಕೂಡ ಮಾಡಲಿದ್ದೇವೆ. ಅದು ದೊಡ್ಡದಾಗಿರುತ್ತದೆ. ಇಪ್ಪತ್ತೈದು ದಿನಗಳು ಕಳೆದರು ಕೂಡ ವಾರಾಂತ್ಯದಲ್ಲಿ 777 ಚಾರ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕೋಟಿ ಗಟ್ಟಲೇ ಕಲೆಕ್ಷನ್ ಮಾಡುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಒಟ್ಟಾರೆಯಾಗಿ ರಕ್ಷಿತ್ ಶೆಟ್ಟಿ ಶ್ರೀ ಮನ್ನಾರಾಯಣ ಚಿತ್ರದ ನಂತರ ಬಿಗ್ ಸಕ್ಸಸ್ ಕಂಡು ಫುಲ್ ಖುಷ್ ಆಗಿದ್ದಾರೆ.

%d bloggers like this: