ಕನ್ನಡ ಕಿರುತೆರೆಯ ಜನಪ್ರಿಯ ಜೋಡಿ ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಹೌದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ರಾಧಾ ರಮಣದಲ್ಲಿ ನಾಯಕ ನಾಯಕಿಯಾಗಿ ನಟಿಸುತ್ತಿದ್ದ ನಟಿ ಶ್ವೇತಾ ಪ್ರಸಾದ್ ಮತ್ತು ನಟ ಸ್ಕಂದ ಅಶೋಕ್ ಜೋಡಿ ಕಿರುತೆರೆ ಪ್ರೇಕ್ಷಕರಿಗೆ ಬಹಳ ಅಚ್ಚು ಮೆಚ್ಚಾಗಿತ್ತು. ರಾಧಾ ರಮಣ ಧಾರಾವಾಹಿ ಮುಕ್ತಾಯಗೊಂಡ ನಂತರ ಈ ಜೋಡಿಯನ್ನು ವೀಕ್ಷಕರು ಬಹಳ ಮಿಸ್ ಮಾಡಿಕೊಂಡಿದ್ದರು. ನಟಿ ಶ್ವೇತಾ ಪ್ರಸಾದ್ ಅವರು ಕಿರುತೆರೆ ಮಾತ್ರವಲ್ಲದೇ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಜಾನ್ಹವಿಯಾಗಿ, ರಾಧಾ ರಮಣದಲ್ಲಿ ರಾಧಾ ಪಾತ್ರದಾರಿಯಾಗಿ ಕನ್ನಡ ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡ ನಟಿ ಶ್ವೇತಾ ಪ್ರಸಾದ್ ರೇಡಿಯೋ ಜಾಕಿ ಪ್ರದೀಪ್ ಅವರನ್ನ ಮದುವೆಯಾಗಿದ್ದಾರೆ.

ಆಗಾಗ ಒಂದಷ್ಟು ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದ ಶ್ವೇತಾ ಇದೀಗ ಮತ್ತೆ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಹೌದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧೇ ಶ್ಯಾಮ ಧಾರಾವಾಹಿಯಲ್ಲಿ ಯಶಸ್ವಿ ಜೋಡಿಗಳಾದ ನಟ ಸ್ಕಂದ ಅಶೋಕ್ ಮತ್ತು ನಟಿ ಶ್ವೇತಾ ಪ್ರಸಾದ್ ಮತ್ತೆ ಒಟ್ಟಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿ ರಾಧಾ ರಮಣದಲ್ಲಿ ಸೀರಿಯಲ್ ನಲ್ಲಿ ಸಖತ್ ಕ್ಯೂಟ್ ಫೇರ್ ಆಗಿತ್ತು. ಇದೀಗ ನಟ ಸ್ಕಂದ ಅಶೋಕ್ ಮತ್ತು ನಟಿ ಶ್ವೇತಾ ಪ್ರಸಾದ್ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ.



ನಟಿ ಶ್ವೇತಾ ಪ್ರಸಾದ್ ಅವರು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಈ ಹೊಸ ಧಾರಾವಾಹಿಯ ಪ್ರೋಮೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿದೆ. ಈ ರಾಧೆ ಶ್ಯಾಮ ಧಾರಾವಾಹಿ ನಿರ್ದೇಶಕರೇ ಈ ಹಿಂದೆ ರಾಧಾರಮಣ ಧಾರಾವಾಹಿ ನಿರ್ದೇಶನ ಮಾಡಿದ್ದರು. ನಟ ಸ್ಕಂದ ಅಶೋಕ್ ಮತ್ತು ನಟಿ ಶ್ವೇತಾ ಪ್ರಸಾದ್ ಅವರು ಈ ಸೀರಿಯಲ್ ಮೂಲಕವೇ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು. ಈ ಜನಪ್ರಿಯ ಜೋಡಿಯನ್ನು ಮತ್ತೆ ತೆರೆಮೇಲೆ ತರಬೇಕು ಎಂಬ ನಿರ್ದೇಶಕರ ಇಚ್ಚೆಯಂತೆ ಸ್ಕಂದ ಅಶೋಕ್ ಮತ್ತು ಶ್ವೇತಾ ಪ್ರಸಾದ್ ಅವರನ್ನು ಜೊತೆಯಾಗಿಸಿದ್ದಾರೆ. ಈ ಜೋಡಿ ರಾಧೆ ಶ್ಯಾಮದಲ್ಲಿ ಆರು ಸಂಚಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.