ಮತ್ತೆ ಕನ್ನಡ ಚಿತ್ರರಂಗಕ್ಕೆ ಬರ್ತಿದ್ದಾರೆ ಚಂದನವನದ ರಾಣಿ

ಮೋಹಕತಾರೆ ನಟಿ ರಮ್ಯಾ ಕನ್ನಡದ ಸಿನಿಮಾ ಇಂಡಸ್ಟ್ರಿ ನಟಿಯರಲ್ಲಿ ಸೂಪರ್ ಸ್ಟಾರ್ ಎಂದರೆ ತಪ್ಪಾಗಲಾರದು. ಇಂದಿಗೂ ಬಹು ದೊಡ್ಡ ಅಭಿಮಾನಿ ಬಳಗ ಹೊಂದಿರುವ ರಮ್ಯಾ, ಸ್ಯಾಂಡಲ್ವುಡ್ ಕ್ವೀನ್ ಎಂದೇ ಹೆಸರಾದವರು. ಇವರ ಕ್ರೇಜ್ ಎಷ್ಟು ಎಂದರೆ, ರಮ್ಯಾ ಅವರ ನಂತರ ಎಷ್ಟೋ ಟಾಪ್ ನಟಿಯರು ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡರೂ, ಇಂದಿಗೂ ಸ್ಯಾಂಡಲ್ವುಡ್ ಕ್ವೀನ್ ಎಂಬ ಟೈಟಲ್ ಉಳಿಸಿಕೊಂಡಿರುವ ಕೀರ್ತಿ ರಮ್ಯಾ ಅವರದ್ದು. 2003 ರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅಭಿ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ರಮ್ಯಾ, ಸುಮಾರು ಒಂದು ದಶಕದ ವರೆಗೂ ಟಾಪ್ ನಟಿಯಾಗಿ ಮೆರೆದವರು. ಸಾಕಷ್ಟು ಇಂಟರ್ವ್ಯೂ ಗಳಲ್ಲಿ, ಮುಂದಿನ ಫ್ಯೂಚರ್ ಪ್ಲಾನ್ ಏನು ಎಂದು ಕೇಳಿದಾಗ.

ರಮ್ಯಾ ಅವರು ಮದುವೆ ಮಾಡಿಕೊಂಡು ಮನೆಯಲ್ಲಿ ಗಂಡ ಹಾಗೂ ನಾಯಿಗಳ ಜೊತೆ ಹಾಯಾಗಿ ಕಾಲ ಕಳೆಯುತ್ತೇನೆ ಎನ್ನುತ್ತಿದ್ದರು. ಅಂತೆಯೇ ರೆಫಲ್ ಎಂಬುವವರ ಜೊತೆ ಇವರ ಒಡನಾಟ ಇರುವುದಾಗಿ ಕೇಳಿ ಬಂದಿತ್ತು. ಇವರಿಬ್ಬರು ಮದುವೆಯಾಗುತ್ತಾರೆ ಎಂದು ಸುದ್ದಿ ಕೇಳಿ ಬರುತ್ತಿತ್ತು. ಆದರೆ ಆ ಸುದ್ದಿ ನಿಜವಾಗಲಿಲ್ಲ. ಬದಲಾಗಿ ರಮ್ಯಾ ಅವರು 2012 ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದರು. ರಾಜಕೀಯದ ಪ್ರವೇಶ ಪಡೆದ ನಂತರ ರಮ್ಯಾ ಅವರು ಚಿತ್ರರಂಗದಿಂದ ನಿಧಾನವಾಗಿ ನಂಟು ಕಳೆದುಕೊಂಡರು. 2014 ರಲ್ಲಿ ಒಂದು ಹಾಗೂ 2016 ರಲ್ಲಿ ಒಂದು ಸಿನಿಮಾದಲ್ಲಿ ಅಷ್ಟೇ ನಟಿಸಿದರು. ಇದಾದ ಸ್ವಲ್ಪ ವರ್ಷಗಳ ಬಳಿಕ ನಟಿ ರಮ್ಯಾ, ಹಲವು ವೈಯಕ್ತಿಕ ಕಾರಣಗಳಿಂದ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರಗಳಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದರು. ಸೋಶಿಯಲ್ ಮೀಡಿಯಾ ಗಳಿಂದಲೂ ಕೂಡ ದೂರವಾಗಿದ್ದರು.

ಇದೀಗ ಮತ್ತೆ ಇನ್ಸ್ಟಾಗ್ರಾಮ್ ನಲ್ಲಿ ಆಕ್ಟಿವ್ ಆಗಿರುವ ರಮ್ಯಾ ಅವರಿಗೆ ಅವರ ಅಭಿಮಾನಿಗಳು ಮತ್ತೆ ಪರದೆಯ ಮೇಲೆ ಅವರನ್ನು ನೋಡುವ ಆಸೆ ವ್ಯಕ್ತಪಡಿಸುತ್ತಿದ್ದರು. ಇಂದಿಗೂ ಇವರಿಗೆ ಫ್ಯಾನ್ ಕ್ರೇಜ್ ಸ್ವಲ್ಪ ಕೂಡ ಕಡಿಮೆಯಾಗಿಲ್ಲ. ಅಭಿಮಾನಿಗಳ ಒತ್ತಾಯದ ಮೇರೆಗೆ ರಮ್ಯಾ ಅವರು ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲು ಇಚ್ಚಿಸಿದ್ದಾರೆ. ಕೇವಲ ಅಭಿಮಾನಿಗಳಷ್ಟೇ ಅಲ್ಲ ಚಿತ್ರದ ಹಲವು ನಟ ನಟಿಯರು ಇವರಿಗೆ ಕಮ್ ಬ್ಯಾಕ್ ಮಾಡಲು ಹೇಳಿದ್ದರು. ಕೆಲವು ದಿನಗಳ ಹಿಂದೆ, ರತ್ನನ್ ಪ್ರಪಂಚ ಸಿನಿಮಾವನ್ನು ಮೆಚ್ಚಿ ಪೋಸ್ಟ್ ಹಾಕಿದ ರಮ್ಯಾ ಅವರಿಗೆ ನಟ ಧನಂಜಯ್ ಅವರು, ಸಿನಿಮಾವನ್ನು ಮೆಚ್ಚುವುದಷ್ಟೇ ಅಲ್ಲ ಮತ್ತೆ ನಮ್ಮೊಂದಿಗೆ ಸಿನಿಮಾ ಮಾಡಬೇಕು ಎಂದು ಹೇಳಿದ್ದರು. ಹಲವು ನಿರ್ದೇಶಕರು, ನಿರ್ಮಾಪಕರು ಇದರ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು.

ತಾವು ಕಮ್ ಬ್ಯಾಕ್ ಮಾಡುವ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ ಅವರು, ತಾವು ಚಿತ್ರರಂಗಕ್ಕೆ ಮರಳುವ ಸುದ್ದಿಯನ್ನು ಖಾತ್ರಿ ಪಡಿಸಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ನಾನು ಸ್ವಲ್ಪ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದೇನೆ. ಅದನ್ನು ಈಗ ಕಡಿಮೆ ಮಾಡಿಕೊಳ್ಳಬೇಕಿದೆ. ನಟನೆಗೆ ಬೇಕಾದ ದೇಹದ ಸ್ಥಿತಿಯನ್ನು ಮರಳಿ ಪಡೆದುಕೊಳ್ಳಬೇಕಿದೆ. ಅದಕ್ಕಾಗಿ ನಾನು ವರ್ಕೌಟ್ ಮಾಡುತ್ತಿದ್ದೇನೆ ಎಂದಿದ್ದಾರೆ. ಚಿತ್ರದಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಬರುತ್ತಲೇ ಇವೆ. ನಾನು ಕೆಲವು ಚಿತ್ರಕಥೆಗಳನ್ನು ಓದುತ್ತಿದ್ದೇನೆ. ಶೀಘ್ರವಾಗಿ ಇದರ ಬಗ್ಗೆ ನಿಖರ ಮಾಹಿತಿಯನ್ನು ನೀಡುತ್ತೇನೆ. ನನ್ನ ಕಮ್ ಬ್ಯಾಕ್ ಸಿನಿಮಾದ ಬಗ್ಗೆ ಮಾರ್ಚ್ ನಲ್ಲಿ ನಾನು ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ರಮ್ಯಾ ಅವರು ಹೇಳಿದ್ದಾರೆ. ಇದನ್ನು ತಿಳಿದ ಮೋಹಕ ತಾರೆ ರಮ್ಯಾ ಅವರ ಅಭಿಮಾನಿಗಳು ದಿಲ್ ಕುಶ್ ಆಗಿದ್ದಾರೆ.

%d bloggers like this: