ಮತ್ತೆ ಮತ್ತೆ ‘ಸಬಾ’ ಜೊತೆ ಕಾಣಿಸಿಕೊಳ್ಳುತ್ತಿರುವ ಹೃತಿಕ್ ರೋಶನ್ ಅವರು, ಬಾಲಿವುಡ್ ಅಲ್ಲಿ ಶುರುವಾಗಿದೆ ಮದುವೆ ಸುದ್ದಿ

ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಹುಡುಗಿಯರ ಆಲ್ ಟೈಮ್ ಕ್ರಶ್. ಹೃತಿಕ್ ರೋಷನ್ ಅವರ ಡಾನ್ಸ್ ಗೆ ಫಿದಾ ಆಗದೇ ಇರುವವರಿಲ್ಲ. ಉಳಿದ ಸೆಲೆಬ್ರಿಟಿ ಗಳಂತೆ ಅಷ್ಟಾಗಿ ಸಾಮಾಜಿಕವಾಗಿ ಕಾಣಿಸಿಕೊಳ್ಳದ ಹೃತಿಕ್ ಅವರ ಬಗ್ಗೆ ಇತ್ತೀಚಿಗೆ ಸುದ್ದಿಯೊಂದು ಹರಿದಾಡುತ್ತಿದೆ. ಹೌದು ಈಗಾಗಲೇ ತಮ್ಮ ಪತ್ನಿಯಿಂದ ವಿಚ್ಚೇದನ ಪಡೆದಿರುವ ಇವರು ಮತ್ತೊಂದು ಮದುವೆಯಾಗುತ್ತಿದ್ದಾರಾ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದಾರೆ. 2000ದಲ್ಲಿ ಸುಸಾನ್ ಖಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹೃತಿಕ್ ರೋಷನ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ 2014ರಲ್ಲಿ ಈ ಜೋಡಿ ವಿಚ್ಚೇದನ ಪಡೆದಿತ್ತು. ಒಂದು ಬಾರಿ ವಿಚ್ಛೇದನ ಪಡೆದ ದಂಪತಿಗಳು ಎಂದಿಗೂ ಒಟ್ಟಾಗಿ ಕಾಣಿಸಿಕೊಳ್ಳುವುದಿಲ್ಲ.

ಆದರೆ ಹೃತಿಕ್ ಮತ್ತು ಸುಸಾನ್ ಇಬ್ಬರೂ ಹಲವು ಬಾರಿ ವಿಚ್ಛೇದನದ ನಂತರ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಇಬ್ಬರೂ ಮಕ್ಕಳನ್ನು ಟ್ರಿಪ್ ಗೂ ಕರೆದುಕೊಂಡು ಹೋಗಿದ್ದಾರೆ. ಆದರೆ ಈಗ ಹೃತಿಕ್ ಸಂಪೂರ್ಣವಾಗಿ ಮೂವ್ ಆನ್ ಆಗಿದ್ದಾರೆ ಎಂದು ಕೇಳಿಬರುತ್ತಿದೆ. ಹೌದು ನಟ ಹೃತಿಕ್ ರೋಷನ್ ಮತ್ತು ನಟಿ ಸಬಾ ಆಜಾದ್ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗುತ್ತಿದೆ. ಹೃತಿಕ್ ಅವರ ಗೆಳೆಯರೊಬ್ಬರ ಮೂಲಕ ಸಭಾ ಪರಿಚಯವಾಗಿದ್ದಾರೆ. ಇವರಿಬ್ಬರ ಟೇಸ್ಟ್ ಒಂದೇ ರೀತಿ ಇದ್ದಿದ್ದರಿಂದ ಬೇಗ ಇವರಿಬ್ಬರು ಹತ್ತಿರವಾಗಿದ್ದಾರೆ. ಆ ಬಳಿಕ ಅನೇಕ ಬಾರಿ ಇವರಿಬ್ಬರು ಭೇಟಿಯಾಗಿದ್ದಾರೆ. ಇದೀಗ ಇವರು ಡೇಟಿಂಗ್ ಶುರು ಹಚ್ಚಿಕೊಂಡಿದ್ದಾರೆ ಎಂದು ಸುದ್ದಿ ಹರಡುತ್ತಿದೆ.

ಇತ್ತೀಚೆಗೆ ಇವರಿಬ್ಬರು ಸುತ್ತಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿತ್ತು. ಆಗಲೇ ಹೃತಿಕ್ ಮತ್ತು ಸಬಾ ನಡುವೆ ಏನೋ ರಿಲೇಶನ್ಶಿಪ್ ಇದೆ ಎಂದು ಸುದ್ದಿ ಹುಟ್ಟಿಕೊಂಡಿತ್ತು. ಆದರೆ ಈಗ ಈ ಸಂಬಂಧ ತುಂಬಾನೇ ಮುಂದುವರೆದಿದೆ ಎಂದು ಕೇಳಿ ಬರುತ್ತಿದೆ. ಈ ವಿಚಾರವಾಗಿ ಪ್ರೂಫ್ ಎನ್ನುವಂತೆ ಫೋಟೋಗಳು ಕೂಡ ದೊರೆತಿವೆ. ಇದನ್ನು ನೋಡಿ ಅವರ ಅನೇಕ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ನಟ ಹೃತಿಕ್ ರೋಷನ್ ಅವರು ತಮ್ಮ ವೈಯಕ್ತಿಕ ವಿಚಾರವನ್ನು ಹೆಚ್ಚಾಗಿ ಗುಟ್ಟಾಗಿ ಇಡುವುದಕ್ಕೆ ನೋಡುತ್ತಾರೆ. ಯಾವುದೇ ವಿಷಯವನ್ನು ಮಾಧ್ಯಮದ ಮುಂದೆ ಬಾಯಿ ಬಿಡುವುದಿಲ್ಲ. ಮೊದಲಿನಿಂದಲೂ ಹೃತಿಕ್ ಅವರು ಹೀಗೆಯೇ ಗುಟ್ಟು ಕಾಪಾಡಿಕೊಂಡು ಬಂದಿದ್ದಾರೆ.

ಆದರೆ ಇವರು ಪಬ್ಲಿಕ್ ಫಿಗರ್ ಆದ್ದರಿಂದ ಇವರ ಎಲ್ಲಾ ವಿಚಾರಗಳು ಗುಟ್ಟಾಗಿ ಇರುವುದಕ್ಕೆ ಸಾಧ್ಯವಿಲ್ಲ. ಕೆಲವು ವಿಚಾರಗಳು ಸೋಶಿಯಲ್ ಮೀಡಿಯಾಗಳಲ್ಲಿ ಲೀಕ್ ಆಗಿಬಿಡುತ್ತವೆ. ಈಗ ಹೃತಿಕ್ ವಿಚಾರದಲ್ಲೂ ಅದೇ ಆಗಿದೆ. ನಟಿ ಸಬಾ ಅವರು ಕಳೆದ ಭಾನುವಾರದಂದು ಹೃತಿಕ್ ಅವರ ಮನೆಗೆ ಹೋಗಿ ಅವರ ಕುಟುಂಬದವರ ಜೊತೆ ಕಾಲ ಕಳೆದಿದ್ದಾರೆ. ಅಲ್ಲದೆ ಜೊತೆಗೆ ಊಟವನ್ನು ಮಾಡಿದ್ದಾರೆ. ಈ ಫೋಟೋಗಳು ಸದ್ಯಕ್ಕೆ ವೈರಲ್ ಆಗುತ್ತಿದೆ. ಈ ಫೋಟೋಗಳನ್ನು ನೋಡಿದ ಬಾಲಿವುಡ್ ಮಂದಿಗೆ ಹಾಗೂ ಅಭಿಮಾನಿಗಳಿಗೆ ಇವರಿಬ್ಬರು ಮದುವೆಯಾಗುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ. ನಿಜವಾಗಿಯೂ ಹೃತಿಕ್ ಹಾಗೂ ಸಬಾ ಡೇಟಿಂಗ್ ಮಾಡುತ್ತಿದ್ದಾರಾ, ಮದುವೆಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕು.

%d bloggers like this: