ಮತ್ತೆ ಶುರುವಾಗುತ್ತಿದೆ ಎಲ್ಲರ ನೆಚ್ಚಿನ ಶಕ್ತಿಮಾನ್ ಧಾರಾವಾಹಿ

ಇಂದಿನ ಮಕ್ಕಳಿಗೆ ಕಾರ್ಟೂನ್ ಗಳೆಂದರೆ ಅಚ್ಚು ಮೆಚ್ಚು. ಇಂದಿನ ಮಕ್ಕಳನ್ನು ರಂಜಿಸಲು ಕಾರ್ಟೂನ್ ಗಳು ಪ್ರಸಾರವಾಗುವ ಸೆಪೆರೇಟ್ ಚಾನೆಲ್ ಗಳು ಇವೆ. ಆದರೆ 90 ರ ದಶಕದಲ್ಲಿ ಇಂದಿನ ಹಾಗೆ ಕಾರ್ಟೂನ್ ಚಾನೆಲ್ ಗಳು ಇರಲಿಲ್ಲ. 90 ರ ದಶಕದಲ್ಲಿ ಎಲ್ಲರ ಮಕ್ಕಳ ಫೆವರಿಟ್ ಎಂದರೆ ಅದು ಶಕ್ತಿಮಾನ್. ಕಿರುತೆರೆಯಲ್ಲಿ 90 ರ ದಶಕದಲ್ಲಿ ಶಕ್ತಿಮಾನ್ ಧಾರಾವಾಹಿ ಎಲ್ಲರ ಮನೆ ಮಾತಾಗಿತ್ತು. ಶಕ್ತಿಮಾನ್ ಧಾರಾವಾಹಿಯಲ್ಲಿ ಮುಖೇಶ್ ಖನ್ನ ಶಕ್ತಿಮಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಂದು ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಇಂದಿಗೂ 90 ರ ದಶಕದ ಮಕ್ಕಳ ನೆನಪಿನಲ್ಲಿದೆ. ಅಷ್ಟೊಂದು ಜನಪ್ರಿಯತೆಯನ್ನು ಗಳಿಸಿದ ಈ ಧಾರಾವಾಹಿ ಇಂದು ಬೆಳ್ಳಿತೆರೆಯ ಮೇಲೆ ಬರುವುದಕ್ಕೆ ಸಜ್ಜಾಗಿದೆ.

ಹೌದು ಧಾರಾವಾಹಿಯ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದ ಶಕ್ತಿಮಾನ್ ಧಾರಾವಾಹಿ ಈಗ ಸಿನಿಮಾ ಆಗಿ ಬೆಳ್ಳಿ ತೆರೆಯ ಮೇಲೆ ಎಲ್ಲರನ್ನೂ ರಂಜಿಸಲು ಸಜ್ಜಾಗುತ್ತಿದೆ. ಶಕ್ತಿಮಾನ್ ಸಿನಿಮಾ ಕುರಿತಂತೆ ಶಕ್ತಿಮಾನ್ ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಿದೆ. ಸೋನಿ ಪಿಕ್ಚರ್ಸ್ ಈ ಬಗ್ಗೆ ಘೋಷಣೆ ಮಾಡಿದ್ದು, ಟ್ವಿಟರ್ ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಸೂಪರ್ ಹಿರೋ ಧರಿಸಿರುವ ಲೋಗೋವನ್ನು ಕೂಡ ತೋರಿಸಲಾಗಿದೆ. ಸೂಪರ್ ಹೀರೋ ಆಗಿ ಎಲ್ಲರನ್ನೂ ಕಾಪಾಡುತ್ತಿದ್ದ ಶಕ್ತಿಮಾನ್ ಪಾತ್ರದಲ್ಲಿ ಮುಖೇಶ್ ಖನ್ನಾ ನಿಜವಾದ ಶಕ್ತಿಮಾನ್ ಹಾಗೆ ಕಾಣಿಸುತ್ತಿದ್ದರು.

ಇದೀಗ ಬೆಳ್ಳಿತೆರೆಯ ಬಿಗ್ ಸ್ಕ್ರೀನ್ ಮೇಲೆ ಯಾರು ಈ ಪಾತ್ರವನ್ನು ನಿಭಾಯಿಸಲಿದ್ದಾರೆ. ಯಾರು ಮುಕೇಶ್ ಖನ್ನ ಅವರ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ನಲ್ಲೂ ಕೂಡ ಶಕ್ತಿಮಾನ್ ಡ್ರೆಸ್ ಮಾತ್ರ ತೋರಿಸಲಾಗಿದ್ದು, ಈ ಪಾತ್ರ ಮಾಡುತ್ತಿರುವ ಹೀರೋ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ. ಹೀಗಾಗಿ ವೀಕ್ಷಕರಲ್ಲಿ ಕುತೂಹಲ ಇನ್ನೂ ಜಾಸ್ತಿಯಾಗಿದೆ. ಒಟ್ಟಾರೆಯಾಗಿ 90ರ ದಶಕದಲ್ಲಿ ಎಲ್ಲರನ್ನು ರಂಜಿಸಿದ್ದ ಶಕ್ತಿ ಮಾನ್ ಮತ್ತೆ ಈಗ ಬರಲು ಸಜ್ಜಾಗಿ ನಿಂತಿದೆ.

%d bloggers like this: