ಮತ್ತೊಬ್ಬ ದಕ್ಷಿಣ ಭಾರತದ ಸ್ಟಾರ್ ನಟಿಗೆ ಸಿಕ್ತು ದುಬೈನ ಪ್ರತಿಷ್ಠಿತ ಗೋಲ್ಡನ್ ವೀಸಾ

ಹೌದು ಜಗತ್ತಿನ ಪ್ರಮುಖ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ದುಬೈ ದೇಶ ಕೂಡ ಒಂದಾಗಿದೆ. ಈ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಅನೇಕ ಪ್ರತಿಷ್ಟಿತ ಕಂಪನಿಗಳು, ವಿಧ್ಯಾ ಸಂಸ್ಥೆಗಳು, ಉದ್ಯಮಗಳು, ಅತ್ಯಾಧುನಿಕ ನಗರ ಜೀವನ ಶೈಲಿ, ಆಕರ್ಷಕ ಪ್ರವಾಸಿ ತಾಣಗಳನ್ನ ಒಳಗೊಂಡಿದೆ‌. ಈ ದುಬೈ ದೇಶ ಎಂತವರನ್ನ ಕೂಡ ತನ್ನತ್ತ ಸೆಳೆಯದೇ ಬಿಡದು. ಅದರಲ್ಲೂ ಕೂಡ ಜಗತ್ತಿನ ಅನೇಕ ದೇಶದ ಜನರಿಗೆ ದುಬೈ ದೇಶಕ್ಕೆ ಭೇಟಿ ನೀಡಬೇಕು ಎಂಬುದೇ ಮಹಾದಾಸೆ ಕನಸು ಆಗಿರುತ್ತದೆ. ಆದರೆ ಈ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಕೆಲವು ಸಾಧಕರಿಗಿ ಗಣ್ಯರಿಗೆ ವಿಶೇಷವಾದ ವೀಸಾವೊಂದನ್ನ ನೀಡುತ್ತದೆ. ಈ ದುಬೈ ದೇಶದಲ್ಲಿ ಹೊರ ದೇಶದ ಪ್ರಮುಖ ವ್ಯಕ್ತಿಗಳಿಗೆ ವಿಶೇಷವಾಗಿ ವೀಸಾವೊಂದನ್ನು ನೀಡಲಾಗುತ್ತದೆ.

ಯುಎಇ ಸರ್ಕಾರವು ಗೋಲ್ಡನ್ ವೀಸಾ ವ್ಯವಸ್ಥೆಯನ್ನು 2019 ರಲ್ಲಿ ರಚನೆ ಮಾಡಿಕೊಂಡಿದೆ. ಈ ಗೋಲ್ಡನ್ ವೀಸಾವನ್ನು ಉದ್ಯಮಿಗಳು, ಹೂಡಿಕೆದಾರರು, ವೃತ್ತಿ ಪರರು, ವಿಜ್ಞಾನಿಗಳು, ಕ್ರೀಡಾಪಟುಗಳು ಸೇರಿದಂತೆ ಮನರಂಜನೆ ಕ್ಷೇತ್ರದಿಂದ ಖ್ಯಾತ ಕಲಾವಿದರು ಕೂಡ ಪಡೆಯಬಹುದಾಗಿರುತ್ತದೆ. ಈ ಗೋಲ್ಡನ್ ವೀಸಾವು ಹತ್ತು ವರ್ಷಗಳ ಅವಧಿಯನ್ನು ಒಳಗೊಂಡಿರುತ್ತದೆ. ಇದಕ್ಕಿಂತ ಹೆಚ್ಚು ವರ್ಷಗಳು ದುಬೈ ದೇಶದಲ್ಲಿ ನೆಲೆಸಬೇಕಾದರೆ ಈ ಗೋಲ್ಡನ್ ವೀಸಾವನ್ನು ನವೀಕರಣ ಮಾಡಿಕೊಳ್ಳುವ ಅವಕಾಶ ಇರುತ್ತದೆ. ದುಬೈ ದೇಶದ ಈ ಗೋಲ್ಡನ್ ವೀಸಾವನ್ನು ಈಗಾಗಲೇ ಅನೇಕ ಸಿನಿಮಾ ನಟರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅನೇಕ ಗಣ್ಯರು ಪಡೆದಿದ್ದಾರೆ‌.

ಅವರ ಪೈಕಿ ಭಾರತೀಯ ಚಿತ್ರರಂಗದ ಸ್ಟಾರ್ ಸಂಜಯ್ ದತ್, ಫರ್ಹಾ ಖಾನ್, ತ್ರಿಷಾ ಕೃಷ್ಣನ್, ಪ್ರಿಯಾಂಕಾ ಚೋಪ್ರಾ, ಟೆನಿಸ್ ತಾರೆ ಸಾನಿಯಾ ಮಿರ್ಜಾ, ಶಾರುಖ್ ಖಾನ್, ಬೋನಿ ಕಪೂರ್, ಜಾಹ್ನವಿ ಕಪೂರ್, ಮೋಹನ್ ಲಾಲ್, ಮಮ್ಮುಟಿ, ದುಲ್ಖರ್ ಸಲ್ಮಾನ್ ಗಾಯಕಿ ಕೆಎಸ್ ಚಿತ್ರಾ ಅವರು ದುಬೈ ದೇಶದ ಈ ಗೋಲ್ಡನ್ ವೀಸಾ ಪಡೆದಿದ್ದಾರೆ. ಇದೀಗ ಇವರ ಸಾಲಿಗೆ ದಕ್ಷಿಣ ಭಾರತದ ಮತ್ತೊಬ್ಬ ಸುಪ್ರಸಿದ್ದ ನಟಿಯಾದ ಅಮಲಾ ಪೌಲ್ ಕೂಡ ಸೇರ್ಪಡೆಗೊಂಡಿದ್ದಾರೆ. ಹೌದು ತಮಿಳು, ತೆಲುಗು ಮತ್ತು ಮಲೆಯಾಳಂ ಚಿತ್ರರಂಗದ ಬೇಡಿಕೆಯ ನಟಿಯಾಗಿರುವ ಅಮಲಾ ಪೌಲ್ ಅವರು ದುಬೈ ದೇಶದ ಪ್ರತಿಷ್ಠಿತ ಗೋಲ್ಡನ್ ವೀಸಾವನ್ನ ಪಡೆದಿದ್ದಾರೆ. ಈ ಬಗ್ಗೆ ನಟಿ ಅಮಲಾ ಪೌಲ್ ಅವರು ಇಂತಹ ವಿಶೇಷವಾದ ಗೌರವ ನನಗೆ ಲಭಿಸಿರುವುದು ಸಂತೋಷ ಮತ್ತು ಹೆಮ್ಮೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನಟಿ ಅಮಲಾ ಪೌಲ್ ಅವರು ಕನ್ನಡದಲ್ಲಿ ಕಿಚ್ಚ ಸುದೀಪ್ ಅವರೊಟ್ಟಿಗೆ ಹೆಬ್ಬುಲಿ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದರು.

%d bloggers like this: