ಮತ್ತೊಮ್ಮೆ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ, ಎರಡು ವರ್ಷದಲ್ಲಿ ನಾಲ್ಕು ಸಲ RRR ಚಿತ್ರ ಮುಂದೂಡಿಕೆ

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಆರ್.ಆರ್.ಆರ್ ಸಿನಿಮಾಗೆ ಕೊರೋನ ವೈರಸಿನ ರೂಪಾಂತರಿ ಓಮೈಕ್ರಾನ್ ವೈರಸ್ ನ ಆತಂಕ ಎದುರಾಗಿದೆ. ರಾಜ್ಯದಲ್ಲಿ ಈ ಓಮೈಕ್ರಾನ್ ವೈರಸ್ ಮುಂಜಾಗೃತ ಕ್ರಮವಾಗಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇದರಿಂದಾಗಿ ಈಗಾಗಲೇ ಚಿತ್ರ ಮಂದಿರಗಳಿಗೆ ಕಠಿಣ ಮಾರ್ಗ ಸೂಚಿ ಅನ್ವಯ ಪ್ರದರ್ಶನದ ಸಮಯಗಳು ಕೂಡ ಅದಲು ಬದಲಾಗಿವೆ‌. ಇದರಿಂದಾಗಿ ಈಗಾಗಲೇ ರಿಲೀಸ್ ಆಗಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾಗಳಿಗೆ ಪೆಟ್ಟು ಬಿದ್ದಿದೆ. ಜೊತೆಗೆ ಬಿಡುಗಡೆಗೆ ಸಿದ್ದವಾಗಿರುವ ಬಿಗ್ ಸ್ಟಾರ್ ಬಿಗ್ ಬಜೆಟ್ ಚಿತ್ರಗಳಿಗೆ ಕೂಡ ಭಾರಿ ಹೊಡೆತ ಎದುರಾಗಿದೆ.

ಇಡೀ ಭಾರತೀಯ ಚಿತ್ರರಂಗವೇ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರುವ ಆರ್.ಆರ್.ಆರ್ ಸಿನಿಮಾ ಇದೇ ಜನವರಿ 7ರಂದು ಅದ್ದೂರಿಯಾಗಿ ರಿಲೀಸ್ ಆಗಲು ಸಿದ್ದವಾಗಿತ್ತು. ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ನಿರ್ದೇಶನದ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಮಲ್ಟಿ ಸ್ಟಾರ್ ನಟರ ಅಭಿನಯ ಇರುವ ಈ ಆರ್.ಆರ್.ಆರ್ ಸಿನಿಮಾ ಭಾರಿ ನಿರೀಕ್ಷೆ ಉಂಟು ಮಾಡಿದೆ. ಈಗಾಗಲೇ ಟೀಸರ್, ಟ್ರೇಲರ್ ಮತ್ತು ಸಾಂಗ್ಸ್ ಗಳಿಂದಾಗಿ ಸಾಕಷ್ಟು ಕ್ರೇಜ಼್ ಕ್ರಿಯೆಟ್ ಮಾಡಿದೆ. ಕೆಲವೇ ದಿನಗಳಲ್ಲಿ ಬೆಳ್ಳಿ ಪರದೆಯ ಮೇಲೆ ರಾರಾಜಿಸಬೇಕಾಗಿದ್ದ ಈ ಆರ್‌.ಆರ್.ಆರ್ ಸಿನಿಮಾ ಇದೀಗ ಮುಂದೂಡಿಕೆ ಆಗಿದೆ ಎಂದು ಚಿತ್ರತಂಡ ತಿಳಿಸಿದೆ. ಹೌದು ಇದೇ ಜನವರಿ2 ಅಂದರೆ ಇಂದು ಭಾನುವಾರ ರಾಜಧಾನಿ ಬೆಂಗಳೂರಿನಲ್ಲಿ ಆರ್.ಆರ್.ಆರ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತದೆ ಎಂದು ಚಿತ್ರತಂಡ ತಿಳಿಸಿತ್ತು.

ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿತ್ತು. ಇದೀಗ ಚಿತ್ರದ ರಿಲೀಸ್ ಡೇಟ್ ಮುಂದೂಡಿರುವ ಕಾರಣ ಈ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಕೂಡ ರದ್ದು ಮಾಡಲಾಗಿದೆಯಂತೆ. ಇನ್ನು ಈ ಆರ್.ಆರ್.ಆರ್ ಚಿತ್ರದ ಪ್ರಮೋಶನ್ ಕಾರ್ಯ ದೇಶದ ಹಲವು ಭಾಗಗಳಲ್ಲಿ ಭರ್ಜರಿಯಾಗಿ ನಡೆದಿದೆ. ಟಾಲಿವುಡ್ ಖ್ಯಾತ ನಿರ್ದೇಶಕ ಎಸ್ಎಸ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಆರ್.ಆರ್.ಆರ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ಸ್ಸ್ ಆದಂತಹ ನಟ ಅಜಯ್ ದೇವಗನ್, ನಟಿ ಆಲಿಯಾ ಭಟ್, ಶ್ರೀಯಾ ಶರಣ್, ರಾಹುಲ್ ರಾಮಕೃಷ್ಣ ಸೇರಿದಂತೆ ಹಾಲಿವುಡ್ ನಟರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಡಿವಿವಿ ಎಂಟರ್ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ಡಿವಿವಿ ದಾನಯ್ಯ ಅವರು 400 ಕೋಟಿ ರೂ.ವೆಚ್ಚದಲ್ಲಿ ಈ ಆರ್ ಆರ್.ಆರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಈ ಮಲ್ಟಿ ಸ್ಟಾರ್ ಆರ್.ಆರ್.ಆರ್ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ರಾಗ ಸಂಯೋಜನೆ ಮಾಡಿದ್ದು, ರಾಜಮೌಳಿ ಅವರ ತಂದೆ ಕೆವಿ ವಿಜಯೆಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಒಟ್ಟಾರೆಯಾಗಿ ಇದೇ ಜನವರಿ 7ರಂದು ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಜೋಡಿಯಾಗಿ ನಟಿಸಿರುವ ಮಲ್ಟಿ ಸ್ಟಾರ್ಸ್ ಸಿನಿಮಾವನ್ನು ಕಣ್ತುಂಬಿಕೊಳ್ಳಲಿದ್ದೇವೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಈ ಸ್ಟಾರ್ಸ್ ಫ್ಯಾನ್ಸ್ ಗಳಿಗೆ ಭಾರಿ ನಿರಾಸೆ ಆಗಿದೆ.

%d bloggers like this: