ಮತ್ತೊಮ್ಮೆ ದಾಖಲೆ ಬರೆದ ಮಹಾಭಾರತ ಸೀರಿಯಲ್, ಕೊನೆಯ ಅದ್ಬುತ ಸಂಚಿಕೆಗಳು ಪಡೆದ ರೇಟಿಂಗ್ ಎಷ್ಟು ಗೊತ್ತಾ

ಈ ಕೋರೋನಾ ಕಾರಣದಿಂದ ಲೊಕ್ಡೌನ್ ಆದ ಪ್ರಾರಂಭದಿಂದಲೂ ಟಿವಿ ಮಾಧ್ಯಮಗಳು ಜನರನ್ನು ಮನೆಯಲ್ಲಿಯೇ ರಂಜಿಸಲು ವಿಧ ವಿಧದ ಪ್ರಯತ್ನಗಳನ್ನು ಮಾಡುತ್ತಿವೆ. ಅದರಲ್ಲೂ ಬೇರೆ ಬಾಷೆಯಲ್ಲಿ ಯಶಸ್ಸು ಕಂಡ ಅದ್ಭುತ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿದ್ದು ನಮ್ಮ ಕನ್ನಡಿಗರನ್ನು ತುಂಬಾ ಆಕರ್ಷಿಸಿದೆ.

ಅದರಲ್ಲೂ ಪ್ರಮುಖವಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಮಹಾಭಾರತ ಸೀರಿಯಲ್ ಪ್ರಾರಂಭವಾದಾಗಿನಿಂದಲೂ ಇಲ್ಲಿಯವರೆಗೆ ಗಣನೀಯ ಮಟ್ಟದ ಯಶಸ್ಸನ್ನು ಕಾಣುತ್ತ ಬಂದಿವೆ. ಅದರಲ್ಲಿ ಬರುವ ಪಾತ್ರಗಳನ್ನು ಮತ್ತು ದೃಶ್ಯವೈಭವಗಳನ್ನು ಕನ್ನಡಿಗರು ತಮ್ಮ ಚಾಚು ತೋಳುಗಳಿಂದ ಅಪ್ಪಿಕೊಂಡಿದ್ದಾರೆ.

ಡಬ್ಬಿಂಗ್ ಧಾರಾವಾಹಿ ಆದರೂ ಕೂಡ ಇದು ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಅದರಲ್ಲೂ ಕುರುಕ್ಷೇತ್ರ ಯುದ್ಧ ಪ್ರಾರಂಭವಾದ ಸಂಚಿಕೆಯಿಂದ ಇಲ್ಲಿಯವರೆಗೆ ನೋಡುಗರ ಪ್ರಮಾಣ ತುಸು ಹೆಚ್ಚೇ ಆಗಿದೆ. ಹೌದು ಇತರ ಎಲ್ಲ ಡಬ್ಬಿಂಗ್ ಧಾರವಾಹಿಗಳ ರೇಟಿಂಗ್ ಅನ್ನು ಮುರಿದು ಮಹಾಭಾರತ ಧಾರಾವಾಹಿ 7 ಟಿ ಪಿ ಆರ್ ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದೆ.

ಮೊದಲು ಒಂದು ಗಂಟೆಗಳ ಕಾಲ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಇತ್ತೀಚಿಗೆ ಅರ್ಧಗಂಟೆಗಳ ಅವಧಿಗೆ ಕಡಿತಗೊಂಡರೂ ಕೂಡ ಅದು ತನ್ನ ಅಭಿಮಾನ ವರ್ಗವನ್ನು ಕೊಂಚವೂ ಕಡಿಮೆಗೊಳಿಸಿಕೊಂಡಿಲ್ಲ. ಇನ್ನು ಇದನ್ನು ಹೊರತುಪಡಿಸಿ ಮಹಾನಾಯಕ ಅಂಬೇಡ್ಕರ್ ರಾಧಾಕೃಷ್ಣ ಸೀತೆಯರಾಮ ಧಾರಾವಾಹಿಗಳು ಮಹಾಭಾರತ ಧಾರಾವಾಹಿಯ ರೀತಿಯ್ಲಲ್ಲೇ ಯಶಸ್ಸಿನಲ್ಲಿ ಮುನ್ನುಗುತ್ತಿವೆ.

%d bloggers like this: