ಎಲ್ಲರಿಗೂ ಮಾದರಿ ಆಗುವ ಕೆಲಸ ಮಾಡಿದ ಕನ್ನಡದ ಹಾಸ್ಯ ಕಲಾವಿದ ದಂಪತಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಸಖತ್ ಹಿಟ್ ಶೋ, ಈ ರಿಯಾಲಿಟಿ ಶೋ ನಿಂದ ಎಷ್ಟೋ ಜನ ಕಲಾವಿದರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ರಂಗಭೂಮಿಯಲ್ಲಿ ಅಭಿನಯಿಸಿದ ಅನುಭವವಿಲ್ಲವಾದರೂ ಅನೇಕ ಜನ ಇಂದು ಕಾಮಿಡಿ ಕಿಲಾಡಿಗಳು ಶೋ ಮೂಲಕ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಗಳಿಸಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದವರು ಇಂದು ಸೆಲೆಬ್ರಿಟಿಗಳಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ಸ್ಪರ್ಧಿಗಳಾಗಿದ್ದ ಗೋವಿಂದೇಗೌಡ ಮತ್ತು ದಿವ್ಯಶ್ರೀ ಇವರಿಬ್ಬರು ಕಲಾವಿದರು ಕಾಮಿಡಿ ಕಿಲಾಡಿಗಳು ನಂತರ ಬಾಳಸಂಗಾತಿಗಳಾಗಿದರು. ಸ್ಪರ್ಧಿಗಳಾಗಿ ತಮ್ಮ ಜರ್ನಿ ಅನ್ನು ಆರಂಭಿಸಿ ಸ್ನೇಹಿತರಾಗಿ, ಅನಂತರ ಪೋಷಕರ ಒಪ್ಪಿಗೆಯನ್ನು ಪಡೆದುಕೊಂಡು ದಾಂಪತ್ಯ ಜೀವನಕ್ಕೆ ಎರಡು ಜೋಡಿ ಕಾಲಿಟ್ಟಿದ್ದರು.

ಪಕ್ಕಾ ಉತ್ತರ ಕರ್ನಾಟಕದ ಹುಡುಗ ಗೋವಿಂದೇಗೌಡ, ಮತ್ತು ದಕ್ಷಿಣ ಕರ್ನಾಟಕದ ಹುಡುಗಿ ದಿವ್ಯಶ್ರೀ. 2019ರಲ್ಲಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇವರ ನಿಶ್ಚಿತಾರ್ಥ ನಡೆದಿತ್ತು. ಹಾಗೆಯೇ ಅದೇ ವರ್ಷ ಮಾರ್ಚ್ 14ರಂದು ಶೃಂಗೇರಿಯಲ್ಲಿ ಇವರು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಂತರ ಇವರಿಬ್ಬರೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ಚಾಪ್ಟರ್1 ಮತ್ತು ಭರಾಟೆ ಸಿನಿಮಾ ದಲ್ಲಿ ಗೋವಿಂದೇಗೌಡ ನಟಿಸಿದ್ದರೆ, ಪುಣ್ಯಾತ್ಗಿತ್ತಿಯರು ಸಿನಿಮಾದಲ್ಲಿ ದಿವ್ಯಶ್ರೀ ನಟಿಸಿದ್ದಾರೆ. ಇತ್ತೀಚೆಗೆ ಇವರಿಬ್ಬರೂ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ಒಂದನ್ನು ನೀಡಿದ್ದರು. ಗೋವಿಂದೇಗೌಡ ಮತ್ತು ದಿವ್ಯಶ್ರೀ ಅವರು ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಬದುಕಿನ ಭರವಸೆಗೆ ಅರಸಿದೆ ಈ ಮನ, ಮನದಾಸೆಗೆ ಸ್ಪಂದನ ಕಂದನಾಗಮನ ಎಂದು ಸುಂದರವಾಗಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದರು. ಅಲ್ಲದೇ ಇವರ ಫೋಟೋಗಳು ಕೂಡ ಎಲ್ಲೆಡೆ ವೈರಲ್ ಆಗಿದ್ದವು. ನೇರಳೆ ಬಣ್ಣದ ಸೀರೆಯಲ್ಲಿ ದಿವ್ಯಶ್ರೀ ಮಿಂಚಿದರೆ, ಪಿಂಕ್ ಶರ್ಟ್ ವಿಥ್ ಬ್ಲಾಕ್ ಪ್ಯಾಂಟಿನಲ್ಲಿ ಗೋವಿಂದೇಗೌಡ ಫೋಟೋಗಳಲ್ಲಿ ಮಿಂಚುತ್ತಿದ್ದರು. ಈ ಫೋಟೋಗಳ ವಿಶೇಷತೆಯೇನೆಂದರೆ ಇವರಿಬ್ಬರು ಸರಳವಾಗಿ ಫೋಟೋಶೂಟ್ ಮಾಡಿಸಿದ್ದು, ಇಬ್ಬರು ಅರಳಿಮರದ ಕೆಳಗೆ ಕುಳಿತುಕೊಂಡು ಪುನೀತ್ ರಾಜಕುಮಾರ್ ಫೋಟೋ ಇರುವ ಮ್ಯಾಗಜೀನನ್ನು ಓದುತ್ತಿದ್ದರು. ಇದು ಎಲ್ಲರ ಗಮನ ಸೆಳೆದಿತ್ತು. ಇದೀಗ ಮತ್ತೆ ಈ ಜೋಡಿ ತಾವು ಪುನೀತ್ ರಾಜಕುಮಾರ್ ಅವರ ಪಕ್ಕಾ ಅಭಿಮಾನಿಗಳು ಎಂದು ತೋರಿಸಿದ್ದಾರೆ.

ಹೌದು ಪುನೀತ್ ರಾಜಕುಮಾರ್ ಅವರಂತೆ ಸಮಾಜಸೇವೆಯನ್ನು ಈ ಜೋಡಿ ಮಾಡುತ್ತಿದೆ. ಪುನೀತ್ ಅವರು ವಿಧಿವಶರಾಗುವ ಮುನ್ನ ತಮ್ಮ ನೇತ್ರಗಳನ್ನು ದಾನಮಾಡಿದ್ದರು. ಇದನ್ನು ತಿಳಿದ ಅವರ ಅಭಿಮಾನಿಗಳು ಕೂಡ ತಮ್ಮ ನೇತ್ರಗಳನ್ನು ದಾನ ಮಾಡಿದ್ದರು. ಈಗ ದಿವ್ಯಶ್ರೀ ಕೂಡ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಅದ್ದೂರಿಯಾಗಿ ದಿವ್ಯ ಅವರ ಶ್ರೀಮಂತ ಕಾರ್ಯ ನೆರವೇರಿತು. ಅದೇ ದಿನ ದಿವ್ಯ ಅವರು ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದರು. ತಮ್ಮ ಸಿಮಂತ ಕಾರ್ಯದ ದಿನವೇ ತಮ್ಮ ಕಣ್ಣುಗಳ ದಾನಕ್ಕೆ ನೊಂದಣಿ ಮಾಡಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಇದೀಗ ಮತ್ತೆ ಒಂದು ಕೈ ಮುಂದೆ ಹೋಗಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಪುಟ್ಟಮಕ್ಕಳಿಗೆ ಸಹಾಯವನ್ನು ನೀಡಿದ್ದಾರೆ. ಹೌದು ಕ್ಯಾನ್ಸರ್ ನಿಂದ ಬಳಲುತ್ತಿರುವವರು ಕ್ಯಾನ್ಸರ್ ಟ್ರೀಟ್ಮೆಂಟ್ ಗೆ ನೀಡುವ ಚಿಕಿತ್ಸೆಯಿಂದಾಗಿ ತಮ್ಮ ಕೂದಲುಗಳನ್ನು ಕಳೆದುಕೊಳ್ಳುತ್ತಾರೆ.

ಇದರಿಂದ ಕ್ಯಾನ್ಸರ್ ರೋಗಿಗಳು ಜನರಿಗೆ ತಮ್ಮ ಮುಖವನ್ನು ತೋರಿಸಲು ಬಯಸುವುದಿಲ್ಲ. ಒಳಗೊಳಗೆ ಸಂಕಟವನ್ನು ಅನುಭವಿಸುತ್ತಿರುತ್ತಾರೆ. ಆದ್ದರಿಂದ ದಿವ್ಯ ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವ ಪುಟ್ಟಮಕ್ಕಳಿಗೆ ತಮ್ಮ ಕೂದಲನ್ನು ದಾನವಾಗಿ ನೀಡಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸಲು ಕೂದಲು ದಾನ ಮಾಡುತ್ತಾರೆ. ಅದೆಷ್ಟೋ ಜನ ಕ್ಯಾನ್ಸರ್ ಪೀಡಿತ ಮಹಿಳೆಯರು ಹಾಗೂ ಮಕ್ಕಳು ತಮ್ಮ ಕೂದಲು ಉದುರುವುದನ್ನು ನೋಡಿಯೇ ಅರ್ಧ ಖಿನ್ನತೆಗೆ ಒಳಗಾಗಿರುತ್ತಾರೆ. ಬನ್ನಿ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ನೀಡಿ ಅವರ ಮುಖದಲ್ಲಿ ಮಂದಹಾಸ ಮೂಡಿಸೋಣ. ಒಂದೊಳ್ಳೆ ಕೆಲಸಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದಿವ್ಯ ಅವರು ಬರೆದುಕೊಂಡಿದ್ದಾರೆ. ನಿಜವಾಗಲೂ ದಿವ್ಯ ಅವರ ಕೆಲಸ ಅತ್ಯಂತ ಶ್ಲಾಘನೀಯ.

%d bloggers like this: