ಮತ್ತೊಮ್ಮೆ ಒಂದೇ ದಿನ ಥಿಯೇಟರ್ ಗಳಿಗೆ ಅಪ್ಪಳಿಸಲಿವೆ ಎರಡು ಬಿಗ್ ನಟರ ಬಿಗ್ ಚಿತ್ರಗಳು

ಇತ್ತೀಚೆಗೆ ಕೋವಿಡ್ ನಿಯಮಗಳಿಂದ ಚಿತ್ರಮಂದಿರಗಳಿಗೆ ಸಂಪೂರ್ಣ ವಿನಾಯಿತಿ ಸಿಕ್ಕಿದೆ. ಇದರ ಬೆನ್ನಲ್ಲೇ ದಕ್ಷಿಣ ಭಾರತದ ಬಹುತೇಕ ಸೂಪರ್ ಸ್ಟಾರ್ ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆಗೆ ಸಿದ್ದವಾಗಿವೆ. ಅದರಂತೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ನಾಯಕತ್ವದ ಆಚಾರ್ಯ ಸಿನಿಮಾ ಮುಂದಿನ ವರ್ಷ 2022ರ ಫೆಬ್ರವರಿ ತಿಂಗಳ ನಾಲ್ಕರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲು ಸಿದ್ದತೆ ನಡೆಸಿದೆ. ಮ್ಯಾಟಿನಿ ಎಂಟರ್ಟೈನ್ ಮೆಂಟ್ ಮತ್ತು ಕೊನಿದೆಲಾ ಪ್ರೊಡಕ್ಷನ್ ಅಡಿಯಲ್ಲಿ ನಿರಂಜನ್ ರೆಡ್ಡಿ ಅವರು ಬರೋಬ್ಬರಿ 140 ಕೋಟಿ ಬಂಡವಾಳ ಹೂಡಿರುವ ಅದ್ದೂರಿತನದ ಆಚಾರ್ಯ ಸಿನಿಮಾ ಭಾರತೀಯ ಚಿತ್ರರಂಗದ ಭಾರಿ ನಿರೀಕ್ಷೆ ಹುಟ್ಟಿ ಹಾಕಿರುವ ಸಿನಿಮಾವಾಗಿದ್ದು, ತೆಲುಗಿನ ಸ್ಟಾರ್ ನಿರ್ದೇಶಕ ಕೊರಾಟಲ ಶಿವ ಅವರು ಆಕ್ಷನ್ ಕಟ್ ಹೇಳಿದ್ದಾರೆ.

ರಾಮ್ ಚರಣ್ ತೇಜಾ, ಕಾಜಲ್ ಅಗರ್ವಾಲ್, ಪೂಜಾ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಆಚಾರ್ಯ ಸಿನಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಆಚಾರ್ಯ ಸಿನಿಮಾಗೆ ಇದೀಗ ಸ್ಟಾರ್ ನಟರ ಸಿನಿಮಾಗಳು ಪೈಪೋಟಿ ನೀಡಲು ಸಿದ್ದವಾಗಿವೆ. ತಮಿಳಿನ ಯಶಸ್ವಿ ಸ್ಟಾರ್ ನಟರಾದ ಸೂರ್ಯ ಅಭಿನಯದ ಎತರ್ಕ್ಕುಂ ತುನಿಂಧವನ್ ಸಿನಿಮಾ 2022ರ ಫೆಬ್ರವರಿ 4ರಂದು ಬಿಡುಗಡೆ ಆಗುತ್ತಿದೆ. ಇದು ಚಿರಂಜೀವಿ ಅವರ ಆಚಾರ್ಯ ಸಿನಿಮಾಗೆ ಹೊಡೆತ ಬೀಳುವುದು ಖಚಿತವಾಗಿರುತ್ತದೆ. ಜೊತೆಗೆ ಅದೇ ದಿನ ಬಾಲಿವುಡ್ ಸ್ಟಾರ್ ನಟಿ ತಾಪ್ಸಿ ಪನ್ನು ಅವರ ನಟನೆಯ ಶಭಾಶ್ ಮಿಥು ಚಿತ್ರ ಕೂಡ ಬಿಡುಗಡೆ ಆಗುತ್ತಿದೆ.

ಈ ಶಭಾಸ್ ಮಿಥು ಚಿತ್ರ ಭಾರತ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಅವರ ಜೀವನ ಚರಿತ್ರೆ ಆಗಿರುವುದರಿಂದ ಈ ಸಿನಿಮಾದ ಬಗ್ಗೆಯೂ ಸಹ ಅಪಾರ ನಿರೀಕ್ಷೆ ಹುಟ್ಟಿಸಿದೆ. ಟಾಲಿವುಡ್ ನಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಅವರು ಕೂಡ ಉತ್ತಮ ಫ್ಯಾನ್ ಫಾಲೋಯಿಂಗ್ ಹೊಂದಿರುವುದರಿಂದ ತಾಪ್ಸಿ ಅವರ ಈ ಚಿತ್ರ ಕೂಡ ಆಚಾರ್ಯ ಸಿನಿಮಾಗೆ ಪರೋಕ್ಷವಾಗಿ ಹೊಡೆತ ನೀಡುತ್ತಿದೆ. ಒಂದು ಕಾಲದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾ ಅಂದರೆ ಯಾವುದೇ ಸ್ಟಾರ್ ನಟರ ಸಿನಿಮಾಗಳಾಗಿದ್ದರು ಕೂಡ ಎರಡು ವಾರಗಳ ಅಂತರ ಕಾಯ್ದುಕೊಳ್ಳುತ್ತಿದ್ದವು. ಇದೀಗ ಚಿರಂಜೀವಿ ಅವರ ಸಿನಿಮಾ ರಿಲೀಸ್ ಡೇಟ್ ದಿನದಂದೆ ಬಿಡುಗಡೆ ಯಾಗುತ್ತಿರುವುದರಿಂದ ಈ ಊರು ಸ್ಟಾರ್ ನಟರ ಸಿನಿಮಾಗಳು ಒಂದೊಂದು ಸಿನಿಮಾಗಳಿಗೆ ಭಾರಿ ಪೈಪೋಟಿ ನೀಡಲಿವೆ.

%d bloggers like this: