ಮತ್ತೊಂದು ಅದೇ ಮಾದರಿಯ ದುಬಾರಿ ರೋಲ್ಸ್ ರೊಯ್ಸ್ ಖರೀದಿಸಿದ ಮುಕೇಶ್ ಅಂಬಾನಿ

ಮುಖೇಶ್ ಅಂಬಾನಿ ಮತ್ತೆ ರೋಲ್ಸ್ ರಾಯ್ ಕಾರು ಖರೀದಿ! ಹೌದು ವಿಶ್ವದ ಪ್ರಮುಖ ಶ್ರೀಮಂತರ ಪೈಕಿ ಮುಖೇಶ್ ಅಂಬಾನಿ ಅಗ್ರಗಣ್ಯ ಶ್ರೀಮಂತರಾಗಿದ್ದಾರೆ. ಇನ್ನು ಇವರ ರಿಲಯನ್ಸ್, ಜಿಯೋ ನೆಟ್ ವರ್ಕ್, ರಿಟೇಲ್ ಕ್ಷೇತ್ರಗಳು ಭಾರಿ ಜನಪ್ರಿಯತೆ ಪಡೆದುಕೊಂಡು ಅತ್ಯಧಿಕ ಲಾಭಾಂಶವನ್ನು ಪಡೆಯುತ್ತಿದ್ದಾರೆ. ಹಣ ವಿರುವ ಶ್ರೀಮಂತನಿಗೆ ಐಷರಾಮಿ ಕಾರುಗಳನ್ನು ಖರೀದಿ ಮಾಡುವುದು ಕಷ್ಟದ ಮಾತಲ್ಲ. ಆದರೆ ಈಗಾಗಲೇ ಹತ್ತು ಹಲವು ದುಬಾರಿ ಐಷರಾಮಿ ಹೊಂದಿರುವ ಅಂಬಾನಿ ಕುಟುಂಬ ಮತ್ತೆ ಪ್ರತಿಷ್ಠಿತಿ ರೋಲ್ಸ್ ರಾಯ್ ಕುಲಿನನ್ ಕಾರನ್ನು ಎರಡನೇಯ ಬಾರಿಗೆ ಖರೀದಿ ಮಾಡಿದೆ. ವಿಶೇಷವಾಗಿ 2019ರಲ್ಲಿ ರೋಲ್ಸ್ ರಾಯ್ ಕುಲಿನನ್ ಕಾರು ಬಿಡುಗಡೆಗೊಂಡಾಗ ಮೊದಲು ಖರೀದಿ ಮಾಡಿದ್ದು ಇದೇ ಅಂಬಾನಿ ಕುಟುಂಬ. ಈ ಕಾರಿನ ಬಣ್ಣ ಸೇಬಲ್ ಬಣ್ಣವನ್ನು ಹೊಂದಿದ್ದಾಗಿದೆ. ಹಾಗದರೆ ಈ ರೋಲ್ಸ್ ರಾಯ್ ಕುಲಿನನ್ ಕಾರಿನ ವೈಶಿಷ್ಟ್ಯ ಕುರಿತು ನೋಡುವುದಾದರೆ ಈ ಕಾರಿನಲ್ಲಿ 6 ಲೀಟರಿನ 12 ಎಂಜಿನ್ ಅಳವಡಿಸಲಾಗಿದೆ. ಇದು 555 ಬಿಎಚ್ಪಿ ಪವರ್ ಮತ್ತು 850 ಎನ್ಎಮ್ ಟಾರ್ಕ್ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿದೆ.

8ವೇಗದ ಆಟೋಮೆಟಿಕ್ ಗೇರ್ ಬಾಕ್ಸ್ ಹೊಂದಿದ್ದು, ನಾಲ್ಕು ವೀಲ್ಹ್ ಗಳಿಗೆ ಪವರ್ ನೀಡುತ್ತದೆ. ಈ ರೋಲ್ಸ್ ರಾಯ್ ಕುಲಿನನ್ ಕಾರಿನ ತೂಕ ಬಲೋಬ್ಬರಿ 2.6 ಟನ್ ಅಂದರೆ 2600 ಕೆಜಿ ಯಷ್ಟಿದೆ. ಇನ್ನು ಈ ಕಾರಿನ ಮೌಲ್ಯ ಎಕ್ಸ್ ಶೋರೂಂ ದರದಂತೆ 8.2 ಕೋಟಿ ಯಲ್ಲಿ ಮಾರಾಟವಾಗುತ್ತಿದೆ. ಈ ರೋಲ್ಸ್ ರಾಯ್ ಕುಲಿನನ್ ನಾಲ್ಕು ಕಾರನ್ನು ಮುಕೇಶ್ ಅಂಬಾನಿ ಕುಟುಂಬ ಹೊಂದಿದ್ದಾರೆ. ಇನ್ನು ಹೊಸ ಈ ಬ್ಲ್ಯಾಕ್ ಬೀಜ್ ಬಣ್ಣದ ರೋಲ್ಸ್ ರಾಯ್ ಕುಲಿನನ್ ಕಾರು ಅಂಬಾನಿಯವರ ಮನೆಯ ಮುಂಭಾಗ ನಿಂತಿರುವ ವೀಡಿಯೋವನ್ನು ಸಿಎಸ್ 12 ವ್ಲಾಗ್ಸ್ ಎಂಬ ಯುಟ್ಯುಬ್ ಚಾನೆಲ್ ವರದಿ ಮಾಡಿದೆ. ಕಳೆದ ವರ್ಷವೂ ಅಂಬಾನಿ ಅವರು ಇದೆ ಮಾದರಿಯ ಕಾರನ್ನು ಖರೀದಿ ಮಾಡಿದ್ದರು, ಈಗ ಮತ್ತೊಂದು ಖರೀದಿ ಮಾಡುವ ಮೂಲಕ ಒಂದೇ ಮಾದರಿಯ ಎರಡು ಕಾರು ಹೊಂದಿದ್ದಾರೆ.

%d bloggers like this: