ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಇದೀಗ ಪ್ರಕಾಶ್ ರಾಜ್ ಅವರು ಅಭಿನಯಿಸಲಿದ್ದಾರೆ. ದಕ್ಷಿಣ ಭಾರತದ ಪ್ರಮುಖ ನಿರ್ದೇಶಕರಲ್ಲಿ ಮಣಿರತ್ನಂ ಕೂಡ ಒಬ್ಬರು. ಇವರು ಮೊದಲಬಾರಿಗೆ ನಿರ್ದೇಶನ ಮಾಡಿದ ಸಿನಿಮಾ ಕನ್ನಡದ ಪಲ್ಲವಿ ಅನುಪಲ್ಲವಿ ಚಿತ್ರ ಇದರಲ್ಲಿ ಅನಿಲ್ ಕಪೂರ್ ನಾರಕರಾಗಿದ್ದರು. ಇವರು ತಮ್ಮ ಸಿನಿಮಾಗಳಲ್ಲಿ, ಹೆಚ್ಚು ಛಾಯಾಗ್ರಹಣ ಮತ್ತು ಬೆಳಕಿಗೆ ಪ್ರಾಮುಖ್ಯತೆ ನೀಡುತ್ತಾರೆ. ಇನ್ನು ಪೊನ್ನಿಯನ್ ಸೆಲ್ವನ್ ಎಂಬುದು, ತಮಿಳಿನ ಖ್ಯಾತ ಕಾದಂಬರಿಕಾರರಾದ ಕಲ್ಕಿ ಕೃಷ್ಣ ಮೂರ್ತಿ ಅವರ ತಮಿಳು ಐತಿಹಾಸಿಕ ಕಾದಂಬರಿಯಾಗಿದೆ. ಇದು ಅರುಲ್ಮೋಳಿವರ್ಮನ್ ರಾಜನ ಕುರಿತ ಕಥೆಯಾಗಿದೆ, ಕ್ರಿಶ10 ಮತ್ತು 11ನೇ ಶತಮಾನದ ರಾಜನಾದ ಇವನಿಗೆ ಪೊನ್ನಿಯನ್ ಸೆಲ್ವನ್ (ಪೊನ್ನಿಯ ಪುತ್ರ) ಎಂಬುದು ಬಿರುದಾಗಿತ್ತು ಎಂದು ತಿಳಿದುಬಂದಿದೆ. ಪೊನ್ನಿಯನ್ ಸೆಲ್ವನ್ ಎಂಬುದು ತಮಿಳು ಐತಿಹಾಸಿಕ ಅತ್ಯುತ್ತಮ ಕಾದಂಬರಿಯಾಗಿದೆ.

ಅರುಲ್ಮೋಳಿ ವರ್ಮನ್ ಕಥೆಯನ್ನು ಸಿನಿಮಾ ಮಾಡಲು ಆಲಿರಾಜಾ ಸುಭಾಸ್ಕರನ್ ಅವರೊಟ್ಟಿಗೆ ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಉನ್ನತ ಮಟ್ಟದ ತಂತ್ರಜ್ಞರನ್ನು ಬಳಸಿಕೊಳ್ಳಲಾಗುತ್ತಿದ್ದು, ಭಾರತೀಯ ಚಿತ್ರರಂಗದ ಸ್ಟಾರ್ ನಟ ನಟಿಯರು ನಟಿಸುತ್ತಾರೆ ಎಂದು ತಿಳಿದು ಬಂದಿದೆ. ತಮಿಳಿನ ಸ್ಟಾರ್ ನಟರಾದ ಕಾರ್ತಿ, ವಿಕ್ರಮ್, ಜಯರಾಮ್ ರವಿ, ತ್ರಿಷಾ ಮುಂತಾದವರೊಂದಿಗೆ ಬಾಲಿವುಡ್ ಸಿನಿ ದಿಗ್ಗಜ ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿಯಿದೆ. ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕೂಡ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ನಟಿಸಲಿದ್ದಾರೆ. ಇದರ ಬಗ್ಗೆ ಸ್ವತಃ ಪ್ರಕಾಶ್ ರಾಜ್ ಅವರೇ ಸೋಶಿಯಲ್ ಮೀಡಿಯಾದ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಈ ದೊಡ್ಡ ಚಿತ್ರ ಹಲವಾರು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದ್ದು ಕನ್ನಡದಲ್ಲಿಯೂ ಸಹ ದೊಡ್ಡ ಮಟ್ಟದಲ್ಲಿ ಸಜ್ಜಾಗುತ್ತಿದೆ.