ಮತ್ತೊಂದು ಬಿಗ್ ಬಜೆಟ್ ಹಿಂದಿ ಚಿತ್ರ ಕನ್ನಡ ಭಾಷೆಯಲ್ಲಿ, ಕನ್ನಡ ಭಾಷೆಯಲ್ಲೇ ಪೋಸ್ಟ್ ಹಂಚಿಕೊಂಡ ಬಾಲಿವುಡ್ ನಟಿ

ತನ್ನ ಮುಂದಿನ ಸಿನಿಮಾದ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ ಬಾಲಿವುಡ್ ಸುಪ್ರಸಿದ್ದ ನಟಿ, ಕರ್ನಾಟಕ ಮೂಲದ ಅನೇಕ ಕಲಾವಿದರೇ ಕನ್ನಡ ಭಾಷೆಯನ್ನ ಕಡೆಗಣಿಸುತ್ತಿರುವವರ ನಡುವೆ ಇಲ್ಲೊಬ್ಬ ಬಾಲಿವುಡ್ ನಟಿ ಕನ್ನಡದಲ್ಲೇ ತನ್ನ ಚಿತ್ರದ ಪ್ರಮೋಶನ್ ಮಾಡುತ್ತಿದ್ದಾರೆ. ಹೌದು ಇತ್ತೀಚೆಗೆ ಎಲ್ಲಾ ಭಾಷೆಯ ಸಿನಿಮಾಗಳು ಕನ್ನಡ ಭಾಷೆಗೆ ಡಬ್ಬಿಂಗ್ ಆಗುತ್ತದ್ದಾವೆ. ಜೊತೆಗೆ ನಮ್ಮ ಕನ್ನಡ ಸಿನಿಮಾಗಳು ಕೂಡ ಬೇರೆ ಭಾಷೆಗಳಿಗೆ ಡಬ್ಬಿಂಗ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ. ಅಂತೆಯೇ ಇತ್ತೀಚೆಗೆ ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಅವರು ಆರ್.ಆರ್.ಆರ್. ಚಿತ್ರದ ಪ್ರಮೋಶನ್ ಇವೆಂಟ್ ಗೆ ಬೆಂಗಳೂರಿಗೆ ಆಗಮಿಸಿದಾಗ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತನಾಡಲು ಪ್ರಯತ್ನಿಸಿದರು.

ಆಲಿಯಾ ಭಟ್ ಕೂಡ ಕನ್ನಡದಲ್ಲಿ ಮಾತನಾಡಲು ಪಕ್ಕದಲ್ಲೇ ಕೂತಿದ್ದ ನಟ ಜ್ಯೂನಿಯರ್ ಎನ್.ಟಿ.ಆರ್ ಅವರ ಬಳಿ ಸಲಹೆ ಕೇಳತ್ತಿದ್ದರು. ಕೊನೆಗೂ ತಮಗೆ ತಿಳಿದಷ್ಟು ಆಲಿಯಾ ಭಟ್ ಕನ್ನಡದಲ್ಲಿ ಮಾತನಾಡಿದ್ದರು. ಇದೀಗ ಆಲಿಯಾ ಭಟ್ ಟ್ವಿಟರ್ ಖಾತೆಯಲ್ಲಿ ತಮ್ಮ ಮುಂದಿನ ಬ್ರಹ್ಮಾಸ್ತ್ರ ಚಿತ್ರದ ಮೋಶನ್ ಪೋಸ್ಟರ್ ಹಂಚಿಕೊಂಡು ಅದರ ಬಗ್ಗೆ ಬ್ರಹ್ಮಾಂಡದಲ್ಲಿ ಮಹಾ ಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ ಮಹಾಯೋಧನೊಬ್ಬ ಉದಯಿಸಲಿದ್ದಾನೆ ಎಂದು ಕನ್ನಡದಲ್ಲೇ ಪೋಸ್ಟ್ ಮಾಡಿದ್ದಾರೆ.

ಆಲಿಯಾ ಭಟ್ ಕನ್ನಡದಲ್ಲಿ ಪೋಸ್ಟ್ ಮಾಡಿದ್ದನ್ನ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಕನ್ನಡಿಗರಿಗೆ ಮಾತ್ರ ಪರಮಾಶ್ಚರ್ಯವೇ ಸರಿ ಎನ್ನಬಹುದು. ಬಾಲಿವುಡ್ ನ ಬಹು ಬೇಡಿಕೆಯ ಜನಪ್ರಿಯ ನಟಿ ಆಲಿಯಾ ಭಟ್ ಅವರು ಕನ್ನಡದಲ್ಲಿ ಪೋಸ್ಟ್ ಮಾಡಿರುವುದು ಕನ್ನಡ ಭಾಷೆ ಮೇಲೆ ಅವರಿಗಿರುವ ಅಭಿಮಾನ ಎಂದು ಅಭಿಪ್ರಾಯ ಪಡುವುದರ ಜೊತೆಗೆ ಆರ್.ಆರ್‌.ಆರ್. ಚಿತ್ರದ ಪ್ರಮೋಶನ್ ಇವೆಂಟ್ ನಲ್ಲಿ ಅವರಿಗೆ ಕನ್ನಡ ಭಾಷೆಯ ಬಗ್ಗೆ ಅದರ ಮಹತ್ವದ, ಇತಿಹಾಸದ ಬಗ್ಗೆ ಕೊಂಚ ತಿಳಿದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ನಟಿ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಜೋಡಿಯಾಗಿ ನಟಿಸುತ್ತಿರುವ ಈ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ಮೌನಿರಾಯ್, ನಾಗಾರ್ಜುನ್ ಅಕ್ಕಿ ನೇನಿ, ಬಹುದೊಡ್ಡ ತಾರಾಗಣವನ್ನೇ ಹೊಂದಿದೆ. ಇದರಲ್ಲಿ ರಣ್ ಬೀರ್ ಕಪೂರ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾದ ಬಹುದೊಡ್ಡ ಕಥೆಯಾಗಿದ್ದು ಮೂರು ಭಾಗಗಳಲ್ಲಿ ಮೂಡಿ ಬರಲಿದೆ. ಆರ್ಯನ್ ಮುಖರ್ಜಿ ನಿರ್ದೆಶನದಲ್ಲಿ ಮೂಡಿ ಬರುತ್ತಿರುವ ಮೊದಲನೇಯ ಭಾಗವಾಗಿ ಬ್ರಹ್ಮಾಸ್ತ್ರ ಭಾಗ 1 ಶಿವ ಸಿನಿಮಾ ಮುಂದಿನ ವರ್ಷ 2022 ರ ಅಕ್ಟೋಬರ್ ತಿಂಗಳಿನಲ್ಲಿ ದೇಶಾದ್ಯಂತ ಬಿಡುಗಡೆಯಾಗಲಿದೆ.

%d bloggers like this: