ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದ ಕೆಜಿಎಫ್

ಕೆಜಿಎಫ್ ಎಂಬ ಒಂದು ಚಿತ್ರ ಕನ್ನಡದ ಕೀರ್ತಿಪತಾಕೆಯನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಪಸರಿಸಿದ್ದು ನಮ್ಮೆಲ್ಲರಿಗೂ ಗೊತ್ತೇ ಇದೆ, ಪ್ರಶಾಂತ್ ನೀಲ್ ಅವರು ತಮ್ಮ ಎರಡನೆಯ ಚಿತ್ರದಲ್ಲಿಯೆ ಇಡೀ ಭಾರತ ಚಿತ್ರರಂಗ ಗುರುತಿಸುವ ನಿರ್ದೇಶಕರಾಗಿ ಹೊರಹೊಮ್ಮಿದರು. ಆಲ್ರೆಡಿ ರಾಕಿಂಗ್ ಸ್ಟಾರ್ ಆಗಿ ಮಿಂಚುತ್ತಿದ್ದ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಇದಷ್ಟೇ ಅಲ್ಲದೆ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರ ಹೆಸರು ಚಿತ್ರರಂಗದ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಿತು. ಅಂತಹ ಖ್ಯಾತಿಯನ್ನು ಪಡೆಯಿತು ಕೆಜಿಎಫ್ ಮೊದಲ ಭಾಗ. ಕೆಜಿಎಫ್ ಭಾಗ 1 ಅನ್ನು ನೋಡಿದ ಪ್ರೇಕ್ಷಕ ಅಂದಿನಿಂದಲೇ ಅದರ ಎರಡನೇ ಭಾಗಕ್ಕೆ ಕಾಯಲು ಶುರುಮಾಡಿದ.

ಈ ಕೋರೋಣ ಮಹಾಮಾರಿಯ ವೈರಸ್ ಬರದೇ ಹೋಗಿದ್ದರೆ ಅಕ್ಟೋಬರ್ 23ಕ್ಕೆ ವಿಶ್ವಾದ್ಯಂತ ರಾರಾಜಿಸುತ್ತಿತ್ತು ಕೆಜಿಎಫ್ ಪಾರ್ಟ 2. ಇದೀಗ ಕೋರೋಣ ಇಳಿಮುಖದತ್ತ ಸಾಗುತ್ತಿರುವ ಕಾರಣ ಅನೇಕ ಚಿತ್ರಮಂದಿರಗಳು ಓಪನ್ ಆಗಿದ್ದು ಸಣ್ಣಸಣ್ಣ ಚಿತ್ರಗಳು ರಿಲೀಸ್ ಆಗಿ ಸದ್ದು ಮಾಡುತ್ತಿವೆ. ಹೀಗಾಗಿ ಮತ್ತೆ ಕೆಜಿಎಫ್ ಚಿತ್ರಕ್ಕಾಗಿ ವೇಟಿಂಗ್ ಶುರುವಾಗಿದೆ. ಹೌದು ಎರಡನೇ ಭಾಗ ಅಧೀರನ ಪಾತ್ರದಲ್ಲಿ ಸಂಜಯ್ ದತ್, ಪ್ರಕಾಶ್ ರೈ ಅಂತಹ ಹಿರಿಯ ನಟರನ್ನು ಒಳಗೊಂಡು ಮತ್ತಷ್ಟು ಮೆರಗು ಪಡೆದುಕೊಂಡಿವೆ.

ಯಶ್ ಅಭಿಮಾನಿಗಳು ಕೆಜಿಎಫ್ ಚಿತ್ರದ ಅಭಿಮಾನಿಗಳು ಒಟ್ಟಾರೆ ಸಿನಿರಸಿಕರು ಪ್ರತಿಯೊಬ್ಬರು ಎರಡನೇ ಭಾಗಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಪ್ರಮುಖವಾಗಿರುವ ಟ್ವಿಟರ್ 2020ರಲ್ಲಿ ಅತಿ ಹೆಚ್ಚು ಟ್ವೀಟ್ ಗೆ ಒಳಗಾದ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಕನ್ನಡದಿಂದ ಕೇವಲ ಒಂದೇ ಚಿತ್ರ ಇದೆ ಅದು ಮತ್ತ್ಯಾವುದೂ ಅಲ್ಲ ಅದೇ ಕೆಜಿಎಫ್ 2. ಹೌದು ಟ್ವಿಟರ್ ಬಹುತೇಕ ಎಲ್ಲರೂ ಇಷ್ಟಪಟ್ಟು ಬಳಸುವ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ತುಂಬಾ ಮುಖ್ಯವಾದದ್ದು.

ಈ ಟ್ವಿಟರ್ನಲ್ಲಿ 2020ರಲ್ಲಿ ಕೆಜಿಎಫ್ ಎರಡನೇ ಭಾಗ ಅತಿ ಹೆಚ್ಚು ಟ್ವೀಟ್ ಮಾಡಲ್ಪಟ್ಟ ಟಾಪ್ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡ ಚಿತ್ರವಾಗಿ ಹೊರಹೊಮ್ಮಿದೆ. ಇದರ ಮೇಲೆ ತಿಳಿಯಬಹುದು ಕೆಜಿಎಫ್ ಎರಡನೇ ಭಾಗಕ್ಕಾಗಿ ಕೇವಲ ಕನ್ನಡಿಗರಲ್ಲ ಇಡೀ ದೇಶವೇ ಕಾಯುತ್ತಿದೆ ಎಂದು. ಈಗಾಗಲೇ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದ್ದು ಸಂಜಯ್ ದತ್ ಅವರ ಕೆಲವು ಸೀನ್ ಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಬಹುತೇಕ 2021ರ ಮಧ್ಯಭಾಗದಲ್ಲಿ ಕೆಜಿಎಫ್ 2 ಭರ್ಜರಿಯಾಗಿ ಸಿನಿ ಮಂದಿರಗಳಿಗೆ ಲಗ್ಗೆಯಿಡಲಿದೆ.

%d bloggers like this: