ಮತ್ತೊಂದು ಹೊಸ ಹಾರರ್ ಚಿತ್ರ ತರುತ್ತಿದ್ದಾರೆ ಕನ್ನಡದ ಹೆಸರಾಂತ ನಟಿ

ಸ್ಯಾಂಡಲ್ ವುಡ್ ಯುವ ಸಾಮ್ರಾಟ್ ನಟ ದಿ.ಚಿರಂಜೀವಿ ಸರ್ಜಾ ಅಭಿನಯಸಿರುವ ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿಬಂದ ಚಂದ್ರಲೇಖಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿಕೊಟ್ಟ ಶಾನ್ವಿ ಶ್ರೀವಾತ್ಸವ್ ಸದ್ಯಕ್ಕೆ ಕನ್ನಡದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಟಿ ಶಾನ್ವಿ ಶ್ರೀ ವಾತ್ಸವ್ ಅವರು ತನ್ನ ಮುಗ್ದ ಅಭಿನಯದ ಮೂಲಕ ಮೊದಲ ಚಿತ್ರದಲ್ಲಿಯೇ ಕನ್ನಡ ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿದ್ದರು. ಇದಾದ ಬಳಿಕ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರ ಜೊತೆ ಸಾಹೇಬ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸುಂದರಂಗಜಾಣ, ರಾಕಿಂಗ್ ಸ್ಟಾರ್ ಯಶ್ ಜೊತೆ ಮಾಸ್ಟರ್ ಪೀಸ್, ದರ್ಶನ್ ಅವರ ಜೊತೆ ತಾರಕ್, ಅವನೇ ಶ್ರೀಮನ್ ನಾರಾಯಣ ಹೀಗೆ ಸ್ಯಾಂಡಲ್ ವುಡ್ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ್ದಾರೆ.

ನಟಿ ಶಾನ್ವಿ ಶ್ರೀ ವಾತ್ಸವ್ ಅವರು ಮಾಡಿದಂತಹ ಎಲ್ಲಾ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ ಶಾನ್ವಿ ಶ್ರೀ ವಾತ್ಸವ್. ಇದೀಗ ದಕ್ಷಿಣ ಭಾರತದ ಖ್ಯಾತ ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರ ನಿರ್ದೇಶನದಲ್ಲಿ ಸಿದ್ದಲಾಗಿರುವ ಕಸ್ತೂರಿ ಮಹಲ್ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಈ ಕಸ್ತೂರಿ ಮಹಲ್ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿದ್ದು ಸೆನ್ಸಾರ್ ವೊಂದನ್ನ ಬಾಕಿ ಉಳಿಸಿಕೊಂಡಿದೆ. ಸದ್ಯಕ್ಕೆ ಕಸ್ತೂರಿ ಮಹಲ್ ಸಿನಿಮಾ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯದಲ್ಲಿ ಬಿಝಿ‌ಯಾಗಿದೆ. ಕಸ್ತೂರಿ ಮಹಲ್ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್ ನಲ್ಲಿ ನಟಿ ಶಾನ್ವಿ ಶ್ರೀ ವಾತ್ಸವ್ ಅವರು ವೈಭವದ ಆಭರಣ ತೊಟ್ಟು ರಾಣಿಯಂತೆ ಕಂಗೋಳಿಸುತ್ತಾ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಸ್ತೂರಿ ಮಹಲ್ ಸಿನಿಮಾ ಹಾರರ್ ಕಥೆಯಾಧಾರಿತ ಆಗಿರುವುದರಿಂದ ಈ ಚಿತ್ರದಲ್ಲಿ ಶಾನ್ವಿ ಅವರು ದೆವ್ವದ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಕುತೂಹಲ ಮೂಡಿಸಿದೆ. ಇನ್ನು ಕನ್ನಡಕ್ಕೆ ಸುಪ್ರಭಾತ, ಇದು ಸಾಧ್ಯ, ಹೆಂಡ್ತಿಗೇಳ್ಬೇಡಿ, ನಿಶಬ್ದ, ಅಭಿ, ಇನ್ಸ್ ಪೆಕ್ಟರ್ ವಿಕ್ರಂ, ಹೀಗೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದಾರೆ. ಕಸ್ತೂರಿ ಮಹಲ್ ಸಿನಿಮಾ ನಿರ್ದೇಶಕ ದಿನೇಶ್ ಬಾಬು ಅವರ ಐವತ್ತನೇ ಚಿತ್ರವಾಗಿದ್ದು, ಈ ಚಿತ್ರದ ಬಗ್ಗೆ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಕಸ್ತೂರಿ ಮಹಲ್ ಸಿನಿಮಾಗೆ ರಚಿತಾ ರಾಮ್ ಅವರು ಆಯ್ಕೆ ಆಗಿದ್ದರು. ಕಾರಣಾಂತರಗಳಿಂದ ಈ ಚಿತ್ರದಿಂದ ರಚಿತಾ ರಾಮ್ ಅವರು ಹೊರ ಬಂದರು. ತದ ನಂತರ ಇವರ ಜಾಗಕ್ಕೆ ಶಾನ್ವಿ ಶ್ರೀ ವಾತ್ಸವ್ ಬಂದರು. ಇದೀಗ ಕಸ್ತೂರಿ ಮಹಲ್ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಕಳೆದ ವರ್ಷ ಜನವರಿ ಒಂದರಂದು ಅಪ್ಪು ಅವರೇ ಕಸ್ತೂರಿ ಮಹಲ್ ಚಿತ್ರದ ಟೀಸರ್ ಲಾಂಚ್ ಮಾಡಿದ್ದರು.

%d bloggers like this: