ಮತೊಂದು ಹೊಸ ಕನ್ನಡ ಚಿತ್ರದಲ್ಲಿ ಬಿಗ್ ಬಾಸ್ ಕನ್ನಡದ ಜನಪ್ರಿಯ ನಟಿ

ಬಿಗ್ ಬಾಸ್ ಕಾರ್ಯಕ್ರಮದಿಂದ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡ ನಟಿ ದಿವ್ಯ ಸುರೇಶ್ ಅವರು ಈಗ ಚಿತ್ರರಂಗದಲ್ಲಿ ಬಿಸಿಯಾಗಿದ್ದಾರೆ. ಬಿಗ್ ಬಾಸ್ ಹೋಗುವ ಮೊದಲು ಹಲವು ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿಗಳಿಸಿದ್ದ ದಿವ್ಯಾ ಸುರೇಶ್ ಅವರಿಗೆ, ಬಿಗ್ ಬಾಸ್ ಕಾರ್ಯಕ್ರಮದ ನಂತರ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಎಸ್ಎಸ್ ರವಿಗೌಡ ಮತ್ತು ದಿವ್ಯ ಸುರೇಶ ನಾಯಕ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ, ರೌಡಿ ಬೇಬಿ ಎಂದು ಹೆಸರಿಡಲಾಗಿತ್ತು. ರೌಡಿ ಬೇಬಿ ಚಿತ್ರದ ಮೂಲಕ ದಿವ್ಯ ಸುರೇಶ್ ಅವರು ಅಧಿಕೃತವಾಗಿ ಸ್ಯಾಂಡಲ್ ವುಡ್ಗೆ ಪಾದಾರ್ಪಣೆ ಮಾಡಿದ್ದರು. ಬಿಗ್ ಬಾಸ್ ಬ್ಯೂಟಿ ದಿವ್ಯಾ ಸುರೇಶ್ ಈಗ ಮತ್ತೊಂದು ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.

ಹೌದು ಕನ್ನಡದ ಖ್ಯಾತ ಹಾಸ್ಯ ನಟ ಡಿಂಗ್ರೀ ನಾಗರಾಜ್ ಪುತ್ರ ರಾಜವರ್ಧನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ದಿವ್ಯ ಅವರು ಬಣ್ಣ ಹಚ್ಚಲಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ ಆರನೇ ಸ್ಥಾನ ಪಡೆದುಕೊಂಡು ಮನೆಯಿಂದ ಹೊರಬಂದ ದಿವ್ಯ ಸುರೇಶ್ ಅವರು ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅತಿ ಹೆಚ್ಚು ಜನಪ್ರಿಯವಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಬಿಡುವಿಲ್ಲದೆ ಹಲವು ಪ್ರಾಜೆಕ್ಟ್ ಗಳಲ್ಲಿ ದಿವ್ಯ ಅವರು ಕೆಲಸ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ದಿವ್ಯ ಅವರಿಗೆ ಬೇಡಿಕೆ ಹೆಚ್ಚಾಗಿದೆಯಂತೆ. ಅವರಿಗಾಗಿ ಸಾಕಷ್ಟು ಅವಕಾಶಗಳು ಅರಸಿಕೊಂಡು ಬರುತ್ತಿವೆ. ಇತ್ತೀಚೆಗೆ ಕಿರುತೆರೆಯ ಒಂದು ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ ಎಂದು ಸುದ್ದಿ ಹರಿದಾಡುತ್ತಿತ್ತು.

ಆದರೆ ಇದರ ಬಗ್ಗೆ ದಿವ್ಯ ಅವರು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿರಲಿಲ್ಲ. ಇತ್ತೀಚಿಗಷ್ಟೇ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಅಪಘಾತಕ್ಕೊಳಗಾಗಿದ್ದರು. ಇವರ ಕೈ, ಕಾಲು, ಮುಖಕ್ಕೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಗುಣಮುಖರಾಗಿರುವ ದಿವ್ಯ ಅವರು ಮತ್ತೆ ತಮ್ಮ ಸಿನಿ ಕೆಲಸಗಳನ್ನು ಶುರುಮಾಡಿದ್ದಾರೆ. ರೌಡಿ ಬೇಬಿ ಚಿತ್ರದ ನಂತರ ಬಿಸಿಯಾಗಿರುವ ದಿವ್ಯ ಅವರು ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ದಿವ್ಯ ಅವರು ಸ್ಪೆಷಲ್ ರೋಲ್ ನಲ್ಲಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಹಿರಣ್ಯ ಎಂದು ಹೆಸರಿಡಲಾಗಿದೆ. ಹಿರಣ್ಯ ಚಿತ್ರವನ್ನು ಪ್ರವೀಣ್ ಅವ್ಯುಕ್ತ್ ನಿರ್ದೇಶನ ಮಾಡುತ್ತಿದ್ದು, ದಿವ್ಯ ಅವರು ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ದಿವ್ಯ ಅವರು ನಾನು ಮತ್ತು ರಾಜವರ್ಧನ್ ಒಳ್ಳೆಯ ಸ್ನೇಹಿತರು. ಈ ಚಿತ್ರದ ಮೂಲಕ ಇಬ್ಬರಿಗೂ ಒಟ್ಟಿಗೆ ಅಭಿನಯಿಸುವ ಅವಕಾಶ ದೊರೆತಂತಾಗಿದೆ ಎಂದು ಹೇಳಿದ್ದಾರೆ. ಅಂದಹಾಗೆ ಹಿರಣ್ಯ ಸಿನಿಮಾದಲ್ಲಿ ರಾಜವರ್ಧನ್ ಅವರಿಗೆ ನಾಯಕಿಯಾಗಿ ಮಾಡೆಲ್ ರಿಹಾನಾ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಯೋಗೀಶ್ವರನ ಆರ್ ಛಾಯಾಗ್ರಹಣ ಮಾಡುತ್ತಿದ್ದು, ಜ್ಯುಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರವನ್ನು ವೇದಾಸ್ ಇನ್ಫೈನೈಟ್ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ, ನಿರ್ಮಾಪಕರಾದ ವಿಘ್ನೇಶ್ವರ ಮತ್ತು ವಿಜಯ್ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮಾರ್ಚ್ 9ರಿಂದ ದಿವ್ಯಾ ಸುರೇಶ್ ಭಾಗದ ಶೂಟಿಂಗ್ ಶುರುವಾಗುತ್ತಿದ್ದು, ಸದ್ಯದಲ್ಲೇ ಹಿರಣ್ಯ ಚಿತ್ರ ಸೆಟ್ಟೇರಲಿದೆ.

%d bloggers like this: