ಮೆದುಳಿಗೆ ಈ ರೀತಿ ಹೊಡೆತ ಕೊಡುತ್ತಿದೆಯಂತೆ ಕೊರೊನ

ಕೊರೋನ ವೈರಸ್ ಕುರಿತು ಜಗತ್ತಿನಲ್ಲಿರುವ ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ, ಸಂಶೋಧನ ಕೇಂದ್ರಗಳು ದಣಿವರಿಯದ ರೀತಿಯಲ್ಲಿ ಒಂದಿಲ್ಲೊಂದು ಹೊಸ ರೀತಿಯ ಸಂಶೋಧನೆಗಳನ್ನು ಮಾಡುತ್ತಲೇ ಇದೆ. ಇದೀಗ ಲಂಡನ್ನ ಇಂಪೇರಿಯಲ್ ಕಾಲೇಜಿನ ವೈಧ್ಯ ಆಯಡಂ ಹ್ಯಾಂಪ್ ಶೈರ್ ಅವರ ತಂಡವೊಂದು ಮಾಡಿದ ಸಂಶೋಧನೆಯಿಂದಾಗಿ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕೊರೋನ ವೈರಸ್ ನಿಂದಾಗಿ ಮಾನವನ ಮೆದುಳಿನ ಮೇಲೆ ಯಾವ ರೀತಿಯ ಗಂಭೀರ ಪರಿಣಾಮ ಬೀರುತ್ತದೆ ಎಂಬುದನ್ನು ಈ ತಂಡ ಅಧ್ಯಾಯನ ಮಾಡಿದೆ.

ಇದರಲ್ಲಿ ಕೊರೋನ ಸೋಂಕಿತ ವ್ಯಕ್ತಿಗಳಲ್ಲಿ ಯಾವುದಾದರು ಇತರ ಕಾಯಿಲೆ, ಆರೋಗ್ಯ ಸಮಸ್ಯೆಗಳಿದ್ದಾಗ ಅವರ ಮೆದುಳಿನ ಮೇಲೆ ಮಾನಸಿಕ ಖಿನ್ನತೆಯು ಬರೋಬ್ಬರಿ ಹತ್ತು ವರ್ಷಗಳ ಕಾಲ ಯಾವ ರೀತಿ ಒಬ್ಬ ವ್ಯಕ್ತಿ ಇರಬಹುದೋ ಆ ರೀತಿಯಲ್ಲಿ ಅವರು ವರ್ತಿಸಬಹುದು ಎಂದು ಈ ಅಧ್ಯಾಯನದಲ್ಲಿ ತಿಳಿಸಿದೆ. ಈಅಧ್ಯಾಯನಕ್ಕಾಗಿ ಇಂಪೇರಿಯಲ್ ಕಾಲೇಜಿನ ವೈದ್ಯಕೀಯ ಸಂಶೋಧನ ತಂಡ ಸುಮಾರು 84000ಕ್ಕೂ ಹೆಚ್ಚು ಜನರನ್ನು ಈ ತಪಾಸಣೆಗೆ ಒಳಪಡಿಸಲಾಗಿತ್ತು.

ಕೊರೋನ ವೈರಸ್ ನ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೂಡ ಕೆಲವರಿಗೆ ಈ ಸೋಂಕು ತಗಲಿದ್ದು ಅವರು ಪರೀಕ್ಷೆ ಮಾಡಿಸದೇ ಆಗಿದ್ದಲ್ಲಿ ಅವರಲ್ಲಿ ನೆನಪಿನ ಶಕ್ತಿ ಸಾಮರ್ಥ್ಯ ಕುಂದಿರುವಂತಹ ಅನುಭವವನ್ನು ಅವರು ಬಿಚ್ಚಿಟ್ಟಿದ್ದಾರೆ. ವೈದ್ಯ ಹ್ಯಾಂಪ್ ಶೈರ್ ಅಧ್ಯಾಯನ ತಂಡ ರಚಿಸಿದ ಗ್ರಾಂಟ್ ಬ್ರಿಟೀಷ್ ಇಂಟಿಲೆಜಿನ್ಸ್ ಪರೀಕ್ಷೆಯನ್ನು ಎದುರಿಸಿದ 84285 ಜನರ ಸಂಪೂರ್ಣ ಫಲಿತಾಂಶವನ್ನು ವಿಶೇಷ ತಜ್ಞರು ಎಲ್ಲಾ ರೀತಿಯ ಅಧ್ಯಾಯನ ನಡೆಸಿ ಅದರಿಂದ ಬಂದಂತಹ ರಿಸಲ್ಟ್ ಏನಿದೆ ಎಂಬುದನ್ನು ಮೆಡ್ರ್ಕೀವ್ಸ್ ವೆಬ್ಸೈಟ್ ನಲ್ಲಿ ಬಿತ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

%d bloggers like this: